ಇತ್ತೀಚಿನ ದಿನಗಳಲ್ಲಿ ವಿದೇಶಿ ಅಡಿಕೆ ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿದ್ದು ದೇಶೀ ಅಡಿಕೆಯ ಮಾರುಕಟ್ಟೆಗೆ ತೀವ್ರ ಹೊಡೆತ ನೀಡುತ್ತಿದೆ. ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯು ಕಡಿಮೆ ದರದಲ್ಲಿ ಹರಾಜು ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿ ದೇಶದ ಅಡಿಕೆ ಮಾರುಕಟ್ಟೆಯನ್ನು ನಾಶಗೊಳಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗುತ್ತಿದೆ.….ಮುಂದೆ ಓದಿ…..
ರಾಜ್ಯದ 31 ಜಿಲ್ಲೆಗಳ ಪೈಕಿ 17 ಜಿಲ್ಲೆಗಳ ರೈತರು ಜೀವನಾಧಾರವಾಗಿ ಅಡಿಕೆಯನ್ನೇ ಅವಲಂಬಿಸಿದ್ದಾರೆ. ವಿದೇಶಿ ಅಡಿಕೆಯ ಒಳಹರಿವು ಈ ಭಾಗದ ರೈತರ ಜೀವನವನ್ನೇ ನರಕಸದೃಶಗೊಳಿಸಿದೆ.….ಮುಂದೆ ಓದಿ…..
ಕಳೆದ 3 ವರ್ಷಗಳಿಂದ ಅಡಿಕೆ ಮಾರುಕಟ್ಟೆ ಒಂದು ಸುಸ್ತಿರ ಹಂತಕ್ಕೆ ಬಂದಿದೆ ಅಂದುಕೊಳ್ಳುವಾಗ, ಮೇಲಿನ ಘಟನೆಗಳು ಇಲ್ಲಿಯ ಕೃಷಿಕರಿಗೆ ಚಿಂತೆ ಮೂಡಿಸಿದೆ.. ಸುಸ್ಥಿರ ಮಾರುಕಟ್ಟೆಯ ಲಾಭ ಇನ್ನೇನು ಕೃಷಿಕನಿಗೆ ಸಿಗಲು ಶುರುವಾಗಿದೆ ಅನ್ನುವಷ್ಟರಲ್ಲಿ, ವಿದೇಶಿ ಅಡಿಕೆಯ ಒಳಹರಿವು ಅಡಿಕೆ ದರವನ್ನು ಕುಸಿತಗೊಳಿಸಿತು.. ಈ ಕುಸಿತ ತಾತ್ಕಾಲಿಕ ಎಂದುಕೊಂಡು ಕ್ಷಣಿಕ ಸಮಾಧಾನ ಪಡುವಂತಿಲ್ಲ.. ಯಾಕೆಂದೆರೆ ಅಡಿಕೆಯ ವಿದೇಶಿ ಒಳಹರಿವಿಗಿಂತ, ಲಕ್ಷ ಲಕ್ಷಗಳಲ್ಲಿ ಬೇರೆ ರಾಜ್ಯಗಳಿಗೆ ಅಡಿಕೆ ಗಿಡಗಳ ಹೊರಹರಿವು ಆಗುತ್ತಿದೆ. ಅದೂ ಕರಾವಳಿ, ಮಲೆನಾಡು ಭಾಗದಿಂದಲೇ…!. ಭವಿಷ್ಯದಲ್ಲಿ ಇಲ್ಲಿಯ ಅಡಿಕೆ ಬೆಳೆಗಾರರಿಗೆ ದೊಡ್ಡ ತಲೆ ನೋವಾಗುವುದು ನಿಸ್ಸಂದೇಹ.. ಕೆಲವೇ ಕೆಲವು ನರ್ಸರಿಗಳು ಹಲವು ಲಕ್ಷಗಳಲ್ಲಿ ಅಡಿಕೆ ಸಸಿಗಳನ್ನು ತಯಾರು ಮಾಡಿ, ತಮಿಳುನಾಡಿನಂತ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ.. ಕೇಳಿದರೆ, ಅಡಿಕೆಯನ್ನು ಯಾರು ಬೇಕಾದರೂ ಅವರ ಅನುಕೂಲಕ್ಕೆ ತಕ್ಕಂತೆ ಬೆಳೆಸಬಹುದು.. ಅದನ್ನು ನಿಯಂತ್ರಣ ಮಾಡಲು ನಾವು ನೀವು ಯಾರು ಎಂಬ ಉತ್ತರ….!….ಮುಂದೆ ಓದಿ…..
ಅಲ್ಲ, ಅಡಿಕೆ ಕೃಷಿ ಯಾರಿಗೂ ಬೇಡದ ಸಮಯದಲ್ಲಿ ಕರಾವಳಿ ಹಾಗೂ ಮಲೆನಾಡ ಕೆಲವು ಮಹನೀಯರು ಈ ಅಡಿಕೆಯ ಮಾರುಕಟ್ಟೆಯನ್ನು ಸುದೃಢ, ಸುಸ್ಥಿರಗೊಳಿಸಿದರು. ಹಾಗೆಯೇ ಕೃಷಿಯಲ್ಲಿ, ತಳಿಗಳಲ್ಲಿ ಹಲವು ಸುಧಾರಣೆ ತಂದರು.ಈಗ ಈ ಭಾಗದ ಜನರಿಗೆ ಅಡಿಕೆ ಎನ್ನುವುದು ಬೆಳೆಯಲ್ಲ, ಜೀವನಶೈಲಿ, ಬದುಕೇ ಆಗಿದೆ. ಆದರೆ ಕೆಲವು ನರ್ಸರಿಗಳು ಇಲ್ಲಿಯ ರೈತರ ಬಾಯಿಗೆ ಮಣ್ಣು ಹಾಕುವಂತಹ ಕೆಲಸ ಮಾಡುತ್ತಿರುವುದು ಸ್ಪಷ್ಟ. ಅದರಲ್ಲೂ ಯಾವುದೇ ನರ್ಸರಿಗಳು E way bill ಇಲ್ಲದೇ ಲಕ್ಷ ಬೆಲೆಯ ಗಿಡಗಳನ್ನು(ಒಂದು ಲಾರಿಯಲ್ಲಿ 3500 ಗಿಡಗಳು, ತಲಾ ರೂ 35/- ರಂತೆ)ಬೇರೆ ರಾಜ್ಯಗಳಿಗೆ ಹೇಗೆ ಕಳಿಸುತ್ತಿದ್ದಾರೆ ಎನ್ನುವುದೇ ಯಕ್ಷಪ್ರಶ್ನೆ…?….ಮುಂದೆ ಓದಿ…..
ಈಗ ತುರ್ತಲ್ಲಿ ಆಗ ಬೇಕಾದ ಕೆಲಸವೆಂದರೆ, ಪ್ರತಿಯೊಬ್ಬ ಸ್ಥಳೀಯನೂ ಸಮಾರೋಪದಿಯಲ್ಲಿ ಈ ಬಗ್ಗೆ ಎಚ್ಚೆತ್ತುಕೊಂಡು, ಕೆಲವೇ ಕೆಲವು ನರ್ಸರಿಗಳ ಅಕ್ರಮವನ್ನು ತಡೆಯಬೇಕು. ಈ ಬಗ್ಗೆ ಆಡಳಿತ ಯಂತ್ರಕ್ಕೆ ಮನವರಿಕೆ ಮಾಡಿ, ನಿಯಮ ನಿರ್ಬಂಧಗಳನ್ನು ತಂದು ಈ ಅಡಿಕೆ ಗಿಡಗಳ ಹೊರ ಹರಿವನ್ನು ತಡೆಯಬೇಕಾಗಿದೆ. ಹಾಗೆಯೇ invoice ಮತ್ತು E-way bill ಇಲ್ಲದೇ ಸಾಗಟ ಮಾಡದಂತೆ ಮತ್ತು underbilling ಮಾಡಿ ಸಾಗಟ ಮಾಡಿದರೆ ದುಪ್ಪಟ್ಟು ದಂಡ ತೆರುವಂತಹ ಕ್ರಮಗಳನ್ನು ತರಬೇಕಾಗಿದೆ.….ಮುಂದೆ ಓದಿ…..
ಇಲ್ಲೂ ಒಂದು ಸಮಸ್ಯೆ ಇದೆ ನಿಜ. ವ್ಯಾಪಾರ-ವ್ಯವಹಾರ ತಡೆಯುವವರು ಯಾರು ಹಾಗೂ ಇನ್ನೊಂದು ವ್ಯವಹಾರವನ್ನು ತಡೆಯುವುದು ಹೇಗೆ ?. ಹೇಗೆ ಬೆಳೆ ಬೆಳೆಸುವುದು ರೈತನ ಹಕ್ಕೋ ಹಾಗೆಯೇ ಗಿಡ ಬೆಳೆಸಿ ಮಾರಾಟ ಮಾಡುವುದೂ ರೈತನ ಹಕ್ಕು. ಆದರೆ ಇಲ್ಲಿ ಗಮನಿಸಬೇಕಾದ್ದು ಹೊರ ರಾಜ್ಯಗಳಿಗೆ ವಿಪರೀತ ಪ್ರಮಾಣದಲ್ಲಿ ಅಡಿಕೆ ಗಿಡಗಳನ್ನು ಕಳುಹಿಸುವುದರ ಬಗ್ಗೆ ಮಾತ್ರಾ ಅಡಿಕೆ ಕೃಷಿಕರು ಗಮನಿಸಬೇಕಾದ್ದಾಗಿದೆ. ಒಂದು ವೇಳೆ ಇಲ್ಲಿನ ಅಡಿಕೆ ತಳಿಗಳು ಬೇರೆ ರಾಜ್ಯದಲ್ಲಿ, ಬೇರೆಯ ಹವಾಮಾನದಲ್ಲಿ ಬೆಳೆಯುತ್ತಿಲ್ಲವಾದರೆ ಅಂತಹ ಗಿಡಗಳನ್ನೂ ಅಲ್ಲಿಯ ರೈತರಿಗೂ ನೀಡಬಾರದು ಅಲ್ಲವೇ…?
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…