ಕೆಲವು ಸಮಯದ ಬಳಿಕ ಅಡಿಕೆ ಮಾರುಕಟ್ಟೆ ಚೇತರಿಕೆ ಆರಂಭವಾಗಿದೆ. ನಿರಂತರವಾಗಿ ಅಕ್ರಮವಾಗಿ ಅಡಿಕೆ ಆಮದು ನಡೆಯುತ್ತಿದ್ದ ಎಲ್ಲಾ ದಾರಿಗಳೂ ಈಗ ಬಿಗುಗೊಳ್ಳುತ್ತಿದೆ. ಈ ನಡುವೆ ಅಡಿಕೆ ಬೇಡಿಕೆಯೂ ಹೆಚ್ಚಲು ಆರಂಭವಾಗಿದೆ. ಹೀಗಾಗಿ ಭಾರತದ ಅಡಿಕೆ ಮಾರುಕಟ್ಟೆ ನಿಧಾನವಾಗಿ ಚೇತರಿಕೆಯೂ ಆರಂಭಗೊಂಡಿದೆ.
ಮಣಿಪುರದ ಕಕ್ಚಿಂಗ್ ಜಿಲ್ಲೆಯಲ್ಲಿ ಮೂವರು ಕಳ್ಳಸಾಗಾಣಿಕೆದಾರರನನ್ನು ಲಾರಿ ಸಹಿತ ಬಂಧಿಸಲಾಗಿದೆ.ಅಕ್ರಮವಾಗಿ ಸಾಗಿಸುತ್ತಿದ್ದ 10,960 ಕೆಜಿ ಅಡಿಕೆಯನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡಿದೆ.130 ಕ್ಕೂ ಅಧಿಕ ಅಡಿಕೆ ಚೀಲ ವಶಕ್ಕೆ ಪಡೆಯಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಹೇಳಿದೆ.
ಕಳೆದ ಸುಮಾರು 3 ತಿಂಗಳಿನಿಂದ ಅಕ್ರಮವಾಗಿ ಅಡಿಕೆ ಸಾಗಾಟ ಮಾಡಲಾಗುತ್ತಿತ್ತು. ಬರ್ಮಾ ಅಡಿಕಯು ಈಶಾನ್ಯ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಭಾರತದ ಒಳಗೆ ಅಕ್ರಮವಾಗಿ ಬರುತ್ತಿತ್ತು. ಅಕ್ರಮ ಸಾಗಾಟದ ಎಲ್ಲಾ ಅಡಿಕೆಯು ಅಸ್ಸಾಂ ಪ್ರವೇಶಿಸಿ ಅಲ್ಲಿಂದ ಭಾರತದ ವಿವಿಧ ಮಾರುಕಟ್ಟೆಗೆ ರವಾನೆ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈಶಾನ್ಯ ರಾಜ್ಯಗಳ ಅಡಿಕೆ ಬೆಳೆಗಾರರ ಹೆಸರಿನಲ್ಲಿ ಅಡಿಕೆ ಸಾಗಾಟ ಭಾರತದ ಒಳಗೆ ನಡೆಯುತ್ತಿತ್ತು. ಭಾರತದ ಗಡಿ ಭಾಗಗಳಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟ ಮಾಡಿ ಬಳಿಕ ಅಲ್ಲಿನ ಮನೆಗಳಲ್ಲಿ ದಾಸ್ತಾನು ಮಾಡಿ ಅಸ್ಸಾಂನಲ್ಲೂ ವಿವಿಧ ಕಡೆಗಳಲ್ಲಿ ಮನೆಗಳಲ್ಲಿ ಅಡಿಕೆ ದಾಸ್ತಾನು ನಡೆಯುತ್ತಿತ್ತು. ಇದರ ವಿರುದ್ಧ ಕಾರ್ಯಾಚರಣೆಯನ್ನು ಈಚೆಗೆ ಈಶಾನ್ಯ ರಾಜ್ಯಗಳಲ್ಲಿ ನಡೆದಿತ್ತು. ಹೀಗಾಗಿ ಅಕ್ರಮ ಅಡಿಕೆ ಸಾಗಾಟಕ್ಕೆ ಬ್ರೇಕ್ ಬೀಳುತ್ತಿದೆ. ಅಡಿಕೆ ಬೇಡಿಕೆಯ ಹಿನ್ನೆಲೆಯಲ್ಲಿ ಈಗ ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಆರಂಭವಾಗಿದೆ. ಹಳೆ ಚಾಲಿ ಅಡಿಕೆ, ಹೊಸ ಚಾಲಿ ಅಡಿಕೆ ಸೇರಿದಂತೆ ಕೆಂಪಡಿಕೆ ಧಾರಣೆಯೂ ಏರಿಕೆಗೆ ಆರಂಭವಾಗಿದೆ.
ಮುಂದಿನ ಕೆಲವು ದಿನಗಳವರೆಗೆ ಮಾರುಕಟ್ಟೆ ಚೇತರಿಕೆ ಇರಬಹುದು ಎನ್ನುವ ನಿರೀಕ್ಷೆ ಇದೆ. ಆದರೆ 450 ರೂಪಾಯಿಯಿಂದ ಮೇಲಿನ ಧಾರಣೆಯ ವಿಪರೀತ ನಿರೀಕ್ಷೆ ಅಡಿಕೆ ಬೆಳೆಗಾರರಿಗೇ ಸಂಕಷ್ಟ ತರುವ ಸಾಧ್ಯತೆ ಹೆಚ್ಚು ಇದೆ.
All the routes through which the illegal import of Arecanut was going on are now being tightened. Meanwhile, the demand for Arecanut has also started to increase. Thus the Arecanut market in India has slowly started to recover up.now market going up treand.
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…