ಅಡಿಕೆ ಮಾರುಕಟ್ಟೆಯು ಬೆಳೆಯುತ್ತಿದೆ. 2032 ರ ವೇಳೆಗೆ ಅಡಿಕೆ ಮಾರುಕಟ್ಟೆಯ US$ 1438.2 ಮಿಲಿಯನ್ ಮೌಲ್ಯದ ಜಾಗತಿಕ ವ್ಯಾಪಾರದಲ್ಲಿ ಕಾಣಿಸಿಕೊಳ್ಳಬಹುದು. ಇದೇ ವೇಳೆಯ ಅಡಿಕೆಯ ಬೇಡಿಕೆ, ಆರೋಗ್ಯ ಪರಿಣಾಮ ಹಾಗೂ ಇತರ ಪ್ರಭಾವಗಳೂ ಅಂತಿಮ ಹಂತದಲ್ಲಿ ಕಾಣಬಹುದು ಎಂದು ಮಾರುಕಟ್ಟೆ ವಿಶ್ಲೇಷಣಾ ಖಾಸಗಿ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಈಗ ಅಡಿಕೆ ಮಾರುಕಟ್ಟೆಯು ಜಾಗತಿಕವಾಗಿ ಗುರುತಿಸಿಕೊಂಡಿದೆ. ಅಡಿಕೆಯನ್ನು ಹಲವು ದೇಶಗಳಲ್ಲಿ ಜಗಿಯುವ ಉದ್ದಶಗಳಿಗಾಗಿ ಬಳಕೆ ಮಾಡುತ್ತಾರೆ. ಇದರ ಜೊತೆಗೆ ಸಾಂಪ್ರದಾಯಿಕ ಔಷಧಿಗಳಿಗೂ ಬಳಕೆ ಮಾಡುತ್ತಾರೆ. ಹಾಗಿದ್ದರೂ ಅಡಿಕೆಯ ಮೇಲೆ ಕೆಲವು ಆಪಾದನೆಗಳೂ ಇವೆ. ಈ ಎಲ್ಲದರ ನಡುವೆಯೂ ಜಾಗತಿಕ ಅಡಿಕೆ ಬೇಡಿಕೆಯು 2022 ರಲ್ಲಿ US$ 834.0 ಮಿಲಿಯನ್ ಮೌಲ್ಯದ್ದಾಗಿದೆ ಎಂದು ನಿರೀಕ್ಷಿಸಲಾಗಿದೆ. 2022 ರಿಂದ 2032 ರವರೆಗೆ ಸುಮಾರು ಶೇ.5.6 ರಷ್ಟು ಬೆಳೆಯುವ ನಿರೀಕ್ಷೆ ಇದೆ.
ಆಗ್ನೇಯ ಏಷ್ಯಾ ಮತ್ತು ಇತರ ಕಡೆ, ಜನರು ಅಡಿಕೆಯನ್ನು ತಿನ್ನಲು ಬಳಕೆ ಮಾಡುತ್ತಾರೆ . ಭಾರತವು ಅಡಿಕೆಯ ವಿಶ್ವದ ಅಗ್ರ ಉತ್ಪಾದಕ ಮತ್ತು ಗ್ರಾಹಕ. ಮಿತಿಮೀರಿದ ಅಡಿಕೆ ಸೇವನೆಯು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವ ಕಾರಣದಿಂದ ಅಡಿಕೆ ಮಾರುಕಟ್ಟೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವಾಗಲೂ ಸಮಸ್ಯೆಯಿಂದಲೇ ಕಾಣುತ್ತಿದೆ. ಹಾಗಿದ್ದರೂ ಅಡಿಕೆ ಜಾಗತಿಕವಾಗಿ ಗುರುತಿಸಿಕೊಂಡಿದೆ.
ಭಾರತವು ಅಡಿಕೆಯ ಅತಿದೊಡ್ಡ ಉತ್ಪಾದಕ ಮತ್ತು ಗ್ರಾಹಕ. ಅಡಿಕೆಯ ಜಾಗತಿಕ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚಿನ ಭಾಗಕ್ಕೆ ಭಾರತವು ಕಾರಣವಾಗಿದೆ. ಭಾರತ, ಬಾಂಗ್ಲಾದೇಶ, ಇಂಡೋನೇಷಿಯಾ, ಥೈಲ್ಯಾಂಡ್, ಶ್ರೀಲಂಕಾ ಮತ್ತು ಮ್ಯಾನ್ಮಾರ್, ಅಡಿಕೆಗೆ ಬೇಡಿಕೆಯನ್ನು ಪೂರೈಸುವ ದೇಶಗಳಾಗಿವೆ.
ಈಗ ಅಡಿಕೆ ಮಾರುಕಟ್ಟೆಯಲ್ಲಿ ಉತ್ಪಾದನೆ ಹಾಗೂ ಬಳಕೆ ಎರಡೂ ಕೂಡಾ ಒಂದು ಹಂತದಲ್ಲಿದೆ. ಇನ್ನು ಮುಂದಿನ 10 ವರ್ಷಗಳಲ್ಲಿ ಉತ್ಪಾದನೆಯಲ್ಲಿ ಮತ್ತಷ್ಟು ಏರಿಕೆ ಕಾಣಲಿದೆ. ಹೀಗಾಗಿ ಮಾರುಕಟ್ಟೆ ವಿಸ್ತಾರವಾಗುತ್ತದೆ. ಬಳಕೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಆರೋಗ್ಯ ಸಂಬಂಧಿತ ದೂರುಗಳೇ ಈಗ ಇರುವ ಸವಾಲುಗಳಾಗಿವೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…