Advertisement
MIRROR FOCUS

ಹೊಸ ಅಡಿಕೆ ಧಾರಣೆ 350 ಫಿಕ್ಸ್ – ಆರಂಭಿಕ ಧಾರಣೆಯೇ ಆಮದು ದರಕ್ಕಿಂತ ಕಡಿಮೆ..!

Share

ಹೊಸ ಅಡಿಕೆಯ ಹೊಸ ಮಾರುಕಟ್ಟೆ ಆರಂಭವಾಗಿದೆ. ಕ್ಯಾಂಪ್ಕೊ ಅಕ್ಟೋಬರ್‌ 1 ರಂದು ಪ್ರಕಟಿಸಿರುವ ಧಾರಣೆಯಂತೆ ಹೊಸ ಅಡಿಕೆಗೆ ₹330–350 ದರ ನಿಗದಿಯಾಗಿದೆ. ತಾಜಾ ಚಾಲಿಗೆ ₹400–475 ಹಾಗೂ ಡಬಲ್‌ ಚಾಲಿಗೆ ₹400–550 ದರ ಇದೆ.

ಹೊಸ ಅಡಿಕೆಯ ಆರಂಭಿಕ ಧಾರಣೆ ₹350ರ ಇದ್ದರೂ, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಅಡಿಕೆಯ ಕನಿಷ್ಠ ಆಮದು ಬೆಲೆ ಕೆಜಿಗೆ ₹351 ಇರುವಾಗ ದೇಶೀಯ ರೈತ ಉತ್ಪಾದಿಸುವ ಅಡಿಕೆಗೆ ಕನಿಷ್ಠ ಎಷ್ಟು ದರ ಸಿಗಬೇಕು? ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ಕಳೆದ ವರ್ಷ ಕ್ಯಾಂಪ್ಕೊ ಸೇರಿದಂತೆ ಸಹಕಾರಿ ಸಂಸ್ಥೆಗಳು ಹೊಸ ಅಡಿಕೆಗೆ ಸುಮಾರು ₹350 ರ ಆರಂಭಿಕ ದರ ನಿಗದಿಪಡಿಸಿದ್ದವು. ಆ ಸಂದರ್ಭದಲ್ಲಿ ಹಳೆ ಚಾಲಿ ಅಡಿಕೆಗೆ ಸುಮಾರು ₹490 ಹಾಗೂ ಡಬಲ್‌ ಚಾಲಿಗೆ ₹530ರ ತನಕ ಖರೀದಿ ನಡೆಯುತ್ತಿತ್ತು. ಖಾಸಗಿ ಮಾರುಕಟ್ಟೆಯಲ್ಲೂ ಹೊಸ ಅಡಿಕೆ ಸುಮಾರು ₹350–355ರ ದರದಲ್ಲಿ ಖರೀದಿಯಾಗಿತ್ತು.

ಆದರೆ ಕಳೆದ ಸಾಲಿನಲ್ಲಿ ಅಡಿಕೆ ಬೆಳೆಗಾರರು ಹಲವು ಸಂಕಷ್ಟಗಳನ್ನು ಎದುರಿಸಿದ್ದರು. ಕೊಳೆರೋಗದಿಂದ ಫಸಲು ನಷ್ಟ, ಎಲೆಚುಕ್ಕಿ ರೋಗದಿಂದ ಇಳುವರಿ ಕುಸಿತ, ಹವಾಮಾನ ವೈಪರೀತ್ಯದಿಂದ ಎಳೆ ಅಡಿಕೆ ಉದುರುವಿಕೆ ಹಾಗೂ ಒಟ್ಟಾರೆ ಇಳುವರಿ ಕಡಿಮೆಯಾಗಿರುವುದು ರೈತರ ಆದಾಯದ ಮೇಲೆ ಪರಿಣಾಮ ಬೀರಿದೆ.

ಇಂತಹ ಪರಿಸ್ಥಿತಿಯಲ್ಲೂ ಕಳೆದ ಬಾರಿ ಮಾರುಕಟ್ಟೆ ಸುಮಾರು ₹350 ರ ಆರಂಭಿಕ ದರದಿಂದ ಶುರುವಾಗಿತ್ತು. 2021 ರಲ್ಲಿ ಆರಂಭಿಕ ಅಡಿಕೆ ದರ ₹425 ರಷ್ಟಿತ್ತು ಎಂಬುದನ್ನು ಗಮನಿಸಿದರೆ, ಪ್ರಸ್ತುತ ಉತ್ಪಾದನಾ ವೆಚ್ಚ ಮತ್ತು ಬೆಳೆಗಾರರ ಸಂಕಷ್ಟದ ಹಿನ್ನೆಲೆಯಲ್ಲಿ ಕನಿಷ್ಠ ₹375 ರ ಆರಂಭಿಕ ದರ ಇರಬೇಕಿತ್ತು ಎಂಬುದು ಬೆಳೆಗಾರರ ನಿರೀಕ್ಷೆಯಾಗಿತ್ತು.

ಈ ಬಾರಿಯೂ ಇಳುವರಿ ಕುಸಿತ, ತಾಪಮಾನ ಏರಿಕೆ ಹಾಗೂ ಹೆಚ್ಚುತ್ತಿರುವ ಕೃಷಿ ವೆಚ್ಚದ ಹಿನ್ನೆಲೆಯಲ್ಲಿ ಹೊಸ ಅಡಿಕೆಯ ಆರಂಭಿಕ ದರ ಕನಿಷ್ಠ ₹375 ಇರಬೇಕಿತ್ತು ಎಂಬ ನಿರೀಕ್ಷೆ ಬೆಳೆಗಾರರ ವಲಯದಲ್ಲಿದೆ.

ಆಮದು ಅಡಿಕೆಗೆ ₹351 ; ರೈತನ ಅಡಿಕೆಗೆ ಎಷ್ಟು? :  ಕೇಂದ್ರ ಸರ್ಕಾರ 2023ರಲ್ಲಿ ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ ₹251 ರಿಂದ ₹351ಕ್ಕೆ ಹೆಚ್ಚಿಸಿತ್ತು. ಸಾಮಾನ್ಯ ಅಡಿಕೆಯನ್ನು ₹351 ಕ್ಕಿಂತ ಕಡಿಮೆ ದರದಲ್ಲಿ ಆಮದು ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶ ಇದರಲ್ಲಿದೆ.

ಆಮದು ಅಡಿಕೆಗೆ ₹351ರ ಕನಿಷ್ಠ ದರ ನಿಗದಿಪಡಿಸಿರುವುದರ ಹಿಂದೆ ದೇಶೀಯ ಅಡಿಕೆ ಮಾರುಕಟ್ಟೆಯನ್ನು ರಕ್ಷಿಸುವ ಉದ್ದೇಶವೂ ಇದೆ. ಹಾಗಿದ್ದರೆ ದೇಶೀಯವಾಗಿ ಅಡಿಕೆ ಬೆಳೆದು, ವರ್ಷವಿಡೀ ತೋಟ ನಿರ್ವಹಿಸಿ, ನೀರು–ಗೊಬ್ಬರ–ಕಾರ್ಮಿಕ ವೆಚ್ಚ ಭರಿಸುವ ರೈತನ ಅಡಿಕೆಗೆ ಕನಿಷ್ಠ ಎಷ್ಟು ದರ ಸಿಗಬೇಕು? ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.  ಉತ್ಪಾದನಾ ವೆಚ್ಚವೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೇವಲ ₹351 ರ ಸುತ್ತಮುತ್ತಲಿನ ದರದಲ್ಲಿ ಅಡಿಕೆ ಮಾರಾಟವಾದರೆ ರೈತನಿಗೆ ನಿಜವಾದ ಆದಾಯ ಎಷ್ಟು ಉಳಿಯುತ್ತದೆ ಎನ್ನುವುದನ್ನೂ ಲೆಕ್ಕ ಹಾಕಬೇಕಾಗಿದೆ.

ಉತ್ಪಾದನಾ ವೆಚ್ಚದ ಮೇಲೆ 25% ಮಾರ್ಜಿನ್ ಎಂದರೆ ₹430ಕ್ಕಿಂತ ಹೆಚ್ಚು :  ಲೆಕ್ಕಾಚಾರದ ಪ್ರಕಾರ ಅಡಿಕೆಯ ಉತ್ಪಾದನಾ ವೆಚ್ಚ ₹344.58 ಎಂದು ಪರಿಗಣಿಸಿದರೆ, ಅದರ ಮೇಲೆ ಶೇ.25ರ ಮಾರ್ಜಿನ್ ಸೇರಿಸಿದಾಗ ಸುಮಾರು ₹430.73 ದರ ಬರುತ್ತದೆ.

ಆದರೆ ಇಂದಿನ ಪರಿಸ್ಥಿತಿಯಲ್ಲಿ ಇದೂ ಕೂಡ ರೈತನ ಸಂಕಷ್ಟವನ್ನು ಸಂಪೂರ್ಣವಾಗಿ ಪರಿಹರಿಸುವ ದರವಲ್ಲ ಎಂಬ ಅಭಿಪ್ರಾಯ ಬೆಳೆಗಾರರ ವಲಯದಲ್ಲಿದೆ. ಹೆಚ್ಚುತ್ತಿರುವ ಕಾರ್ಮಿಕ ವೆಚ್ಚ, ಗೊಬ್ಬರ ಮತ್ತು ಕೃಷಿ ಪರಿಕರಗಳ ವೆಚ್ಚ, ನೀರಾವರಿ ವೆಚ್ಚ, ರೋಗ–ಕೀಟ ನಿಯಂತ್ರಣದ ಖರ್ಚು ಹಾಗೂ ಹವಾಮಾನದಿಂದ ಉಂಟಾಗುವ ಇಳುವರಿ ನಷ್ಟಗಳನ್ನು ಪರಿಗಣಿಸಿದರೆ ಕೆಜಿಗೆ ₹450–475ರ ಮಟ್ಟದ ದರ ರೈತನಿಗೆ ಲಭ್ಯವಾಗಬೇಕು ಎಂಬ ಬೇಡಿಕೆಗೆ ಆರ್ಥಿಕ ಆಧಾರವಿದೆ. ಉತ್ಪಾದನಾ ವೆಚ್ಚದ ಮೇಲೆ ನ್ಯಾಯಸಮ್ಮತ ಮಾರ್ಜಿನ್ ಸೇರಿಸಿ ಕನಿಷ್ಠ ಆಮದು ಬೆಲೆಯನ್ನೇ ₹450ರ ಸಮೀಪಕ್ಕೆ ಹೆಚ್ಚಿಸುವ ಕುರಿತು ಚರ್ಚೆ ನಡೆಯಬೇಕಾದ ಅಗತ್ಯವೂ ಇದೆ.

ಆದರೆ ರೈತನಿಗೆ ₹450 ಸಿಕ್ಕರೆ ಮಾತ್ರ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರವಾಗುತ್ತದೆಯೇ?  ಅದೂ ಸಂಪೂರ್ಣ ಪರಿಹಾರವಲ್ಲ.  ಅಡಿಕೆಯ ಮಾರುಕಟ್ಟೆಯನ್ನು ಉಳಿಸುವುದು ಎಂದರೆ ಕೇವಲ ಮಾರುಕಟ್ಟೆ ದರವನ್ನು ಹೆಚ್ಚಿಸುವುದಲ್ಲ. ರೈತನ ನಿಜವಾದ ಉತ್ಪಾದನಾ ವೆಚ್ಚವನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಿ, ಅದರ ಮೇಲೆ ನ್ಯಾಯಸಮ್ಮತ ಆದಾಯವನ್ನು ಖಚಿತಪಡಿಸುವ ವ್ಯವಸ್ಥೆ ನಿರ್ಮಿಸುವುದು ಮುಖ್ಯ.

ಅಡಿಕೆಯ ಬೆಲೆ ಒಂದು ವರ್ಷ ₹450 ಅಥವಾ ₹500 ತಲುಪುವುದಕ್ಕಿಂತ, ರೈತನು ನಿರಂತರವಾಗಿ ಉತ್ಪಾದನಾ ವೆಚ್ಚಕ್ಕಿಂತ ಮೇಲಿನ ಸ್ಥಿರ ಮತ್ತು ನ್ಯಾಯಸಮ್ಮತ ಆದಾಯ ಪಡೆಯುವಂತಾಗುವುದು ಹೆಚ್ಚು ಮುಖ್ಯ. ಅದೇ ಸಮಯದಲ್ಲಿ ಆಮದು ನೀತಿ, ದೇಶೀಯ ಉತ್ಪಾದನೆ, ಮಾರುಕಟ್ಟೆ ಬೇಡಿಕೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಅಡಿಕೆ ಬೆಳೆಗಾರರ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಇವೆಲ್ಲವನ್ನೂ ಒಟ್ಟಾಗಿ ಪರಿಗಣಿಸಿ ಬೆಲೆ ನೀತಿ ರೂಪಿಸುವ ಅಗತ್ಯವಿದೆ.

ಆಮದು ಅಡಿಕೆಗೆ ₹351ರ ಕನಿಷ್ಠ ಬೆಲೆ ನಿಗದಿಯಾಗಿರುವಾಗ, ದೇಶದ ರೈತ ಬೆಳೆದ ಅಡಿಕೆಗೆ ಅದರ ಉತ್ಪಾದನಾ ವೆಚ್ಚ ಮತ್ತು ರೈತನ ಬದುಕನ್ನು ಪರಿಗಣಿಸಿ ನ್ಯಾಯಸಮ್ಮತ ಕನಿಷ್ಠ ದರ ಎಷ್ಟು ಇರಬೇಕು? ಈಗ ಚರ್ಚೆಯಾಗಬೇಕಾದ ಪ್ರಮುಖ ಪ್ರಶ್ನೆ ಇದೇ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಹಿಂದಿನ ಅಡಿಕೆ ಆರಂಭಿಕ ಬೆಲೆಯ ಸುದ್ದಿಗಳು…..

CAMPCO’s October 1 market rates have placed new arecanut at ₹330–350 per kg, while fresh chali is quoted at ₹400–475 and double chali at ₹400–550. With the government’s minimum import price for arecanut at ₹351 per kg, the key question for growers is what minimum price should be assured for domestically produced arecanut, considering rising cultivation costs, crop losses and climate-related risks. Based on the production-cost calculation provided, adding a 25% margin to a cost of ₹344.58 gives about ₹430.73, while growers argue that current conditions warrant a price closer to ₹450–475. However, ensuring long-term farm viability requires more than a higher market price—it requires stable and fair returns above production costs.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 01-10-2026 | ಕರ್ನಾಟಕದಲ್ಲಿ ಮತ್ತೆ ಮಳೆ ಇಳಿಕೆ – ಕಾರಣವೇನು?

ಉತ್ತರ ಭಾರತದ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದ ಪ್ರಬಲ ಚಂಡಮಾರುತಗಳ ಪರಿಣಾಮ…

58 minutes ago

ರಿಲಯನ್ಸ್ ಫೌಂಡೇಶನ್ ಪದವಿ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಪದವಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ…

6 hours ago

ರೈತನ ಹೊಲದಿಂದ ನಿಮ್ಮ ತಟ್ಟೆಯವರೆಗೆ… AI ಬರಲಿದೆ..!

ಕರ್ನಾಟಕದಲ್ಲಿ ಬೀಜದಿಂದ ಗ್ರಾಹಕರ ತಟ್ಟೆಯವರೆಗೆ ಕೃಷಿ ಉತ್ಪನ್ನದ ಪಯಣವನ್ನು ಪತ್ತೆಹಚ್ಚಲು AI ಆಧಾರಿತ…

6 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…

15 hours ago

ಅಡಿಕೆ ವಹಿವಾಟಿನ ಮೇಲೆ ಹೆಚ್ಚಿದ ಕಣ್ಗಾವಲು..!, ಗಮನ ಸೆಳೆದ ಪ್ರತ್ಯೇಕ ಮೂರು ಘಟನೆಗಳು

ಅಸ್ಸಾಂನಲ್ಲಿ 5.74 ಟನ್ ಅಡಿಕೆ ವಶ, ಕೇರಳದಲ್ಲಿ 380 ಚೀಲ ಅಡಿಕೆ ಬಿಡುಗಡೆಗೆ…

17 hours ago

ಹಿಂಗಾರು ಬೆಳೆಗಳಿಗೆ ಕೇಂದ್ರದಿಂದ ಬೆಂಬಲ ಬೆಲೆ ಹೆಚ್ಚಳ

ರಬಿ(ಹಿಂಗಾರು) ಬೆಳೆಗಳಿಗೆ ಕೇಂದ್ರ ಸರ್ಕಾರ MSP ಹೆಚ್ಚಿಸಿದೆ. ಗೋಧಿ MSP ₹2,610ಕ್ಕೆ, ಕಡಲೆ…

17 hours ago