Advertisement
ವೆದರ್ ಮಿರರ್

ಹವಾಮಾನ ವರದಿ | 01-10-2026 | ಕರ್ನಾಟಕದಲ್ಲಿ ಮತ್ತೆ ಮಳೆ ಇಳಿಕೆ – ಕಾರಣವೇನು?

Share

ಕರ್ನಾಟಕದಲ್ಲಿ ಮಳೆಯ ವಾತಾವರಣ ಮತ್ತೆ ದುರ್ಬಲಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಉತ್ತರ ಭಾರತದ ಕಡೆಯಿಂದ ಬೀಸುತ್ತಿರುವ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದಲ್ಲಿ ಪ್ರಬಲವಾಗಿರುವ ಚಂಡಮಾರುತಗಳ ಪರಿಣಾಮ ಬಂಗಾಳಕೊಲ್ಲಿಯ ಗಾಳಿಯ ಚಲನೆ ಬದಲಾಗುತ್ತಿರುವುದರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದೆ. ಆದರೆ ದಕ್ಷಿಣ ಕರಾವಳಿ ಹಾಗೂ ಕೊಡಗು ಭಾಗಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ.

ಕರಾವಳಿ: ಘಟ್ಟದ ಕೆಳಭಾಗದಲ್ಲಿ ಸಂಜೆ ಮಳೆ ಸಾಧ್ಯತೆ :  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸದ್ಯ ಬಿಸಿಲಿನ ವಾತಾವರಣವಿದ್ದು, ಘಟ್ಟದ ಕೆಳಭಾಗದ ಪ್ರದೇಶಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ಪ್ರಭಾವ ಹೆಚ್ಚಾದರೆ ಕರಾವಳಿಯ ಉಳಿದ ಭಾಗಗಳಲ್ಲೂ ಹಾಗೂ ಕಾಸರಗೋಡು ಜಿಲ್ಲೆಯ ಅಲ್ಲಲ್ಲಿ ಮಳೆಯಾಗಬಹುದು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ನಡುವೆ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ.

ಈಗಿನ ಮುನ್ಸೂಚನೆಯಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಸಂಪೂರ್ಣವಾಗಿ ಇಲ್ಲವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬಂಗಾಳಕೊಲ್ಲಿಯಿಂದ ಬೀಸುವ ಗಾಳಿಯ ಪ್ರಭಾವದ ಮೇಲೆ ಮಳೆಯ ಪ್ರಮಾಣ ಹೆಚ್ಚು ಅವಲಂಬಿತವಾಗಿರಲಿದೆ. ಇದೇ ವೇಳೆ ಉತ್ತರ ಭಾರತದ ಕಡೆಯಿಂದ ಶುಷ್ಕ ಗಾಳಿಯೂ ರಾಜ್ಯದತ್ತ ಬೀಸುತ್ತಿದೆ.

ಮಲೆನಾಡು: ಕೊಡಗಿನಲ್ಲಿ ಮಳೆಯ ಸಾಧ್ಯತೆ ಹೆಚ್ಚು :  ಕೊಡಗು ಜಿಲ್ಲೆಯ ಅಲ್ಲಲ್ಲಿ ಹಾಗೂ ಹಾಸನದ ಸಕಲೇಶಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಮಲೆನಾಡಿನ ಉಳಿದ ಭಾಗಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ಆದರೆ ಕೊಡಗು ಹೊರತುಪಡಿಸಿ ಮಲೆನಾಡಿನ ಉಳಿದ ಜಿಲ್ಲೆಗಳಲ್ಲಿ ಉತ್ತರ ಭಾರತದ ಶುಷ್ಕ ಗಾಳಿಯ ಪ್ರಭಾವ ಹೆಚ್ಚಾದರೆ ಮಳೆಯ ಸಾಧ್ಯತೆ ಮತ್ತಷ್ಟು ಕಡಿಮೆಯಾಗಬಹುದು.

ಉತ್ತರ ಒಳನಾಡು: ಮಳೆಯ ಸಾಧ್ಯತೆ ಕ್ಷೀಣ :  ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಉತ್ತರ ಭಾರತದ ಕಡೆಯಿಂದ ಬೀಸುತ್ತಿರುವ ಶುಷ್ಕ ಗಾಳಿಯ ಪರಿಣಾಮ ಮಳೆಯ ಸಾಧ್ಯತೆಗಳು ಕ್ಷೀಣಿಸುತ್ತಿವೆ.  ಇದರೊಂದಿಗೆ ಪೆಸಿಫಿಕ್ ಸಾಗರದಲ್ಲಿ ಪ್ರಬಲವಾಗಿರುವ ಚಂಡಮಾರುತಗಳ ಚಲನೆಯಿಂದ ಬಂಗಾಳಕೊಲ್ಲಿಯ ಗಾಳಿಯು ಆ ಭಾಗದತ್ತ ಸೆಳೆಯಲ್ಪಡುತ್ತಿರುವುದರಿಂದ ಕರ್ನಾಟಕದ ಉತ್ತರ ಒಳನಾಡಿಗೆ ಅಗತ್ಯವಾದ ತೇವಾಂಶದ ಲಭ್ಯತೆ ಕಡಿಮೆಯಾಗುವ ಸಾಧ್ಯತೆ ಇದೆ.

ಹೀಗಾಗಿ ಉತ್ತರ ಒಳನಾಡಿನಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಚಟುವಟಿಕೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡು: ಕೆಲವೆಡೆ ಮಾತ್ರ ಗುಡುಗು ಮಳೆ :  ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಅಲ್ಲಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಲಿನ ನಡುವೆ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಬಹುದು. ಈಗಿನ ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದೆ.

ಮಳೆಯ ಮೇಲೆ ಗಾಳಿಯ ಚಲನೆಯ ಪರಿಣಾಮ :  ಪ್ರಸ್ತುತ ಕರ್ನಾಟಕದ ಮಳೆಯ ಪರಿಸ್ಥಿತಿಯ ಮೇಲೆ ಎರಡು ಪ್ರಮುಖ ಗಾಳಿಯ ಚಲನೆಗಳು ಪರಿಣಾಮ ಬೀರುತ್ತಿವೆ. ಒಂದು ಕಡೆ ಉತ್ತರ ಭಾರತದ ಕಡೆಯಿಂದ ಶುಷ್ಕ ಗಾಳಿ ರಾಜ್ಯದತ್ತ ಬೀಸುತ್ತಿದೆ. ಮತ್ತೊಂದೆಡೆ ಪೆಸಿಫಿಕ್ ಸಾಗರದಲ್ಲಿ ಪ್ರಬಲವಾಗಿರುವ ಚಂಡಮಾರುತಗಳ ಪರಿಣಾಮ ಬಂಗಾಳಕೊಲ್ಲಿಯ ಗಾಳಿಯ ಚಲನೆಯಲ್ಲೂ ಬದಲಾವಣೆಯಾಗುತ್ತಿದೆ.

ಇದರ ಪರಿಣಾಮವಾಗಿ ದಕ್ಷಿಣ ಕರಾವಳಿ ಹಾಗೂ ಕೊಡಗು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗುವ ಲಕ್ಷಣಗಳಿವೆ.

Rainfall activity over Karnataka is showing signs of weakening due to dry winds arriving from northern India and changes in Bay of Bengal wind patterns associated with strong cyclonic systems over the Pacific Ocean. Southern coastal Karnataka and Kodagu may still receive isolated evening thunderstorms, while parts of Hassan, Chikkamagaluru and Shivamogga adjoining the coastal region may also see rain. North Interior Karnataka is likely to experience a further decline in rainfall, while most of South Interior Karnataka may remain mainly sunny to partly cloudy, apart from isolated thunderstorms in Mysuru, Chamarajanagar and Hassan. Overall, rainfall prospects are declining across most parts of the state, although local weather conditions may vary.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಮುಂದಿನ ಜೂನ್‌ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ – ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ

ಮುಂದಿನ ಜೂನ್‌ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ, ಅಲ್ಲಿಗೆ ತೆರಳುವ…

18 hours ago

ಹವಾಮಾನ ವರದಿ | 20-10-2026 | ಅ.25ರವರೆಗೆ ಮಳೆ ಸಾಧ್ಯತೆ ; ಅ.26 ರಿಂದ ತಾತ್ಕಾಲಿಕ ಬಿಡುವು?

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 25ರವರೆಗೆ ಮಳೆಯ ಸಾಧ್ಯತೆ ಮುಂದುವರಿದಿದ್ದು, ಅಕ್ಟೋಬರ್…

2 days ago

ರಾವಣನನ್ನು ಸಂಹರಿಸುವುದಕ್ಕಿಂತ ನಮ್ಮೊಳಗಿನ ರಾವಣನನ್ನು ಗೆಲ್ಲುವುದು ಮುಖ್ಯ..!

ಮಹಾನವಮಿಯ ನಿಜವಾದ ಸಂದೇಶವೆಂದರೆ ರಾವಣ ಮತ್ತು ಮಹಿಷಾಸುರರ ಸಂಹಾರವನ್ನು ಸ್ಮರಿಸುವುದಷ್ಟೇ ಅಲ್ಲ, ನಮ್ಮೊಳಗಿನ…

2 days ago

ಮಿಜೋರಾಂನಲ್ಲಿ ಅಡಿಕೆ ಕೃಷಿಗೆ ವೈಜ್ಞಾನಿಕ ನೆರವು : ಕೀಟಬಾಧೆ ನಿಯಂತ್ರಣಕ್ಕೆ ಕ್ರಮ, ಕೋಕೋ ಅಂತರಬೆಳೆಗೂ ಚಿಂತನೆ

ಮಿಜೋರಾಂನಲ್ಲಿ ಅಡಿಕೆ ತೋಟಗಳಿಗೆ ಕಾಡುತ್ತಿರುವ ಕೀಟಬಾಧೆ ನಿಯಂತ್ರಿಸಲು ವೈಜ್ಞಾನಿಕ ಕ್ರಮಗಳು ಮತ್ತು ಆರ್ಥಿಕ…

2 days ago

ನಿಮ್ಮ ಮನೆಯ ಮೇಲ್ಛಾವಣಿಯೇ ವಿದ್ಯುತ್ ಉತ್ಪಾದನಾ ಕೇಂದ್ರವಾಗಲಿ..!

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮೆಸ್ಕಾಂ ವತಿಯಿಂದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಕುರಿತು ಸಾರ್ವಜನಿಕರಿಗೆ…

2 days ago

ಜೀವ ವೈವಿಧ್ಯ ಅನುದಾನ ಬಿಡುಗಡೆ – ಕರ್ನಾಟಕಕ್ಕೆ ₹10.49 ಲಕ್ಷ; ದೇಶದ 30 ಮಂಡಳಿಗಳಿಗೆ ₹1.19 ಕೋಟಿ

ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರವು 29 ರಾಜ್ಯ ಜೀವ ವೈವಿಧ್ಯ ಮಂಡಳಿಗಳು ಮತ್ತು…

2 days ago