ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸ್ಪಷ್ಟವಾದ ಏರಿಕೆ ಕಂಡುಬಂದಿದ್ದು, ಚಾಲಿ ಅಡಿಕೆ ದರವು ಏರಿಕೆ ಕಂಡಿದೆ. ಇಂದಿನ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಅಧಿಕೃತವಾಗಿ ₹500 ತಲುಪಿದೆ.
ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯ ಧಾರಣೆಗಳನ್ನು ಪರಿಶೀಲಿಸಿದರೆ, ಮಾರುಕಟ್ಟೆ ಈಗ ಸ್ಥಿರತೆಯಿಂದ ಏರಿಕೆಯತ್ತ ಸಾಗುತ್ತಿರುವುದು ಸ್ಪಷ್ಟವಾಗಿದೆ. ಇಂದಿನ ದರಗಳಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದ್ದು, ವಿಶೇಷವಾಗಿ ಉತ್ತಮ ಗುಣಮಟ್ಟದ ಅಡಿಕೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಇದೇ ವೇಳೆ, ಹಳೆ ಅಡಿಕೆ ಧಾರಣೆಯಲ್ಲೂ ಏರಿಕೆ ಕಂಡುಬಂದಿದ್ದು ₹555 ಮಟ್ಟ ತಲುಪಿದೆ. ಇದು ಮಾರುಕಟ್ಟೆಯಲ್ಲಿ ಗುಣಮಟ್ಟದ ಅಡಿಕೆಗಳ ಬೇಡಿಕೆ ನಿರಂತರವಾಗಿರುವುದನ್ನು ಸೂಚಿಸುತ್ತದೆ.
ಕಳೆದ ವರ್ಷದ ಏಪ್ರಿಲ್ ಮೊದಲ ವಾರದ ಧಾರಣೆಯೊಂದಿಗೆ ಹೋಲಿಸಿದರೆ , ಹೊಸ ಅಡಿಕೆ: ₹430–₹440, ಹಳೆ ಅಡಿಕೆ: ₹485–₹495. ಆದರೆ ಈ ಬಾರಿ, ಅಡಿಕೆ ಬೆಳೆ ಪ್ರಮಾಣ ಕಡಿಮೆಯಾಗಿರುವುದು ಸೇರಿದಂತೆ ಇತರ ಕಾರಣಗಳಿಂದಾಗಿ, ಏಪ್ರಿಲ್ ಆರಂಭದಲ್ಲೇ ಹೊಸ ಅಡಿಕೆ ₹500 ದಾಟಿರುವುದು ಪ್ರಮುಖ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ಮಾರುಕಟ್ಟೆ ವಿಶ್ಲೇಷಣೆ ಪ್ರಕಾರ ಪ್ರಸ್ತುತ ಟ್ರೆಂಡ್ ಇದೆ. ಇದಕ್ಕೆ ಮುಖ್ಯ ಕಾರಣಗಳು ಅಡಿಕೆ ಉತ್ಪಾದನೆ ಕಡಿಮೆ, ಉತ್ತಮ ಗುಣಮಟ್ಟದ ಅಡಿಕೆಗೆ ಹೆಚ್ಚಿನ ಬೇಡಿಕೆ, ಮಾರುಕಟ್ಟೆಯಲ್ಲಿ ಅಡಿಕೆ ಲಭ್ಯತೆ ಕಡಿಮೆಯಾಗಿದೆ. ಈಗಿನ ಟ್ರೆಂಡ್ ಪ್ರಕಾರ ಏಪ್ರಿಲ್ ಅಂತ್ಯ ಮೇ ಮಧ್ಯದ ವೇಳೆಗೆ ಹೊಸ ಅಡಿಕೆ: ₹520–₹550 ತಲುಪುವ ಸಾಧ್ಯತೆ ಇದ್ದು ಹಳೆ ಅಡಿಕೆ ₹570+ ಮಟ್ಟ ತಲುಪುವ ನಿರೀಕ್ಷೆಇದೆ. ಮಾರುಕಟ್ಟೆ ಹೀಗೆ ಮುಂದುವರಿದರೆ, ಮುಂದಿನ ವಾರಗಳಲ್ಲಿ ಅಡಿಕೆ ದರಗಳಲ್ಲಿ ಇನ್ನಷ್ಟು ಏರಿಕೆ ಕಾಣಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Arecanut prices in Mangalore market have shown a clear upward trend, with new arecanut officially reaching ₹500 and old arecanut touching ₹555. Compared to early April last year, prices have risen significantly due to lower crop yield and increased demand. The market is currently moving from stability to a bullish phase, and further price rise is expected through April.
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…
ಕರಾವಳಿಯಲ್ಲಿ ಮಳೆಯ ಸಾಧ್ಯತೆ ಇದ್ದರೂ ಗಾಳಿಯ ಪ್ರಭಾವದಿಂದ ಅದು ಕಡಿಮೆಯಾಗಬಹುದು. ಉಳಿದ ಕರ್ನಾಟಕದಲ್ಲಿ…
ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…
ಏಪ್ರಿಲ್ 4ರವರೆಗೆ ಮಳೆ ಮುಂದುವರಿಯಲಿದೆ, ಬಳಿಕ ತಾತ್ಕಾಲಿಕ ಕಡಿಮೆ. ಏಪ್ರಿಲ್ 10ರಿಂದ ಮತ್ತೆ…
ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…