ಅಡಿಕೆಯ ಅಕ್ರಮ ಪ್ರವೇಶವನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅಡಿಕೆ ಸಂಶೋಧನೆ ಮತ್ತು ಅಭಿವೃಧ್ದಿ ಪ್ರತಿಷ್ಠಾನ(ARDF) ಅಧ್ಯಕ್ಷ ಡಾ: ಡಿ.ವೀರೇಂದ್ರ ಹೆಗ್ಗಡೆಯವರು ಪ್ರಧಾನಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಭಾರತವು ಪ್ರತಿ ವರ್ಷ 15.63 ಲಕ್ಷ ಟನ್ ಅಡಿಕೆಯನ್ನು ಉತ್ಪಾದಿಸುತ್ತದೆ ಮತ್ತು ನಮ್ಮ ದೇಶದ ಸುಮಾರು 16 ಮಿಲಿಯನ್ ಕೃಷಿಕರ ಹಾಗೂ ಉದ್ಯಮಿಗಳ ಬೆನ್ನೆಲುಬಾಗಿದೆ. ಭಾರತವು ಅಡಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೂ, ಪ್ರತಿ ವರ್ಷ ಸುಮಾರು 24,000 ಟನ್ ಅಡಿಕೆಯನ್ನು ಕಾನೂನುಬದ್ದವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ.ಇದು ಸರಿಯಲ್ಲ ಎಂದು ಮನವಿಯಲ್ಲಿ ಡಾ: ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ಇತ್ತೀಚೆಗೆ ಹಣಕಾಸು ರಾಜ್ಯ ಸಚಿವರಾದ ಪಂಕಜ್ ಚೌಧರಿ ಅವರು ಅಡಿಕೆ ಕಳ್ಳಸಾಗಣೆ ಇನ್ನೂ ಅಸ್ತಿತ್ವದಲ್ಲಿದೆ ಎಂದು ಹೇಳಿರುತ್ತಾರೆ. ತೆರಿಗೆ ಜಾಲದ ಹೊರಗೆ ವ್ಯಾಪಾರ ಮಾಡುವ ಅಡಿಕೆಯ ಪ್ರಮಾಣವು ಲಭ್ಯವಿಲ್ಲ ಎಂದೂ ಅವರು ಹೇಳಿದರು. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ “ ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯದ ಪ್ರಕಾರ 15% ಅಡಿಕೆಯನ್ನು ಮಾತ್ರ ಕ್ಯಾಂಪ್ಕೋ ಮಂಗಳೂರು, ಟಿ.ಎಸ್.ಎಸ್. ಶಿರ್ಸಿ, ಮ್ಯಾಂಮ್ಕೋಸ್ ಶಿವಮೊಗ್ಗ ಮತ್ತು ತುಮ್ಕೋಸ್ ಚೆನ್ನಗಿರಿ ಮುಂತಾದ ಸಹಕಾರಿ ಸಂಸ್ಥೆಗಳು ವ್ಯಾಪಾರ ಮಾಡುತ್ತವೆ, ಮತ್ತು 85% ಅಡಿಕೆಯನ್ನು ಖಾಸಗಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಾರೆ” ಎಂದು ವರದಿ ಮಾಡಿದೆ.
ಈ ಸಂದರ್ಭದಲ್ಲಿ ಕಳ್ಳಸಾಗಾಣಿಕೆದಾರರ ಇಂತಹ ಅಕ್ರಮ ಚಟುವಟಿಕೆಗಳು ಸ್ಥಳೀಯವಾಗಿ ಬೆಳೆದ ಅಡಿಕೆಯ ಬೆಲೆಯನ್ನು ಅಸ್ಥಿರಗೊಳಿಸುವುದಲ್ಲದೆ, ಲಕ್ಷಾಂತರ ಅಡಿಕೆ ರೈತರ ಜೀವನ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಅಲ್ಲದೆ, ಅಡಿಕೆ ಮೇಲೆ ಆದ ಜಿ ಎಸ್ ಟಿ ರೂಪದಲ್ಲಿ ಉತ್ಪತ್ತಿಯಾಗುವ ಆದಾಯದ ಮೇಲೆ ದುಶ್ಪರಿಣಾಮ ಬೀರುತ್ತವೆ ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.
ಹೀಗಾಗಿ ಪ್ರಧಾನ ಮಂತ್ರಿಗಳು ಇಂತಹ ಕಾನೂನುಬಾಹಿರ ಅಡಿಕೆ ಆಮದು ಮತ್ತು ಸರಿಯಾದ ಕಾನೂನು ದಾಖಲೆಗಳಿಲ್ಲದೆ ಆಗುವ ಅದರ ಸಾಗಣೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಅಡಿಕೆಯ ಸರಕು ಪಟ್ಟಿಯಲ್ಲಿ ಕಡಿಮೆ ದರವನ್ನು ನಮೂದಿಸಿ ಮಾರಾಟ ಮಾಡುವುದನ್ನು ತಡೆಯಲು, ನಮ್ಮ ದೇಶದ ಬಿಳಿ ಮತ್ತು ಕೆಂಪು ಅಡಿಕೆಗಳೆರಡರಲ್ಲೂ ಪರಿಣತರಾಗಿರುವ ಸಹಕಾರಿ ವಲಯದ ಸಮರ್ಥ ನೋಡಲ್ ಏಜೆನ್ಸಿ ಕ್ಯಾಂಪ್ಕೋ ನಿಯಮಿತ ಅಥವಾ ARDF ಅನ್ನು ಅಂತಹ ಸರಕುಗಳ ಮೌಲ್ಯಮಾಪನ ಮತ್ತು ವರದಿಗಳನ್ನು ನೀಡಲು ಗುರುತಿಸಬಹುದು. ಪ್ರಧಾನ ಮಂತ್ರಿಗಳು ಈ ವಿಷಯಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಚಿವಾಲಯಗಳಿಗೆ ಸೂಚನೆ ನೀಡಬೇಕೆಂದು ಅವರು ಒತ್ತಾಯಿಸಿದರು.
#ಅಡಿಕೆ ಆಮದು ಆತಂಕ | ಅಡಿಕೆ ಆಮದು ತಡೆಯುವಂತೆ ಪ್ರಧಾನಮಂತ್ರಿಗಳನ್ನು @PMOIndia ಒತ್ತಾಯಿಸಿದ ARDF ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ |
#arecanut. @digicampco@SKDMTemple @HeggadeD @ShobhaBJPhttps://t.co/SYbB9YdeTiAdvertisement— theruralmirror (@ruralmirror) June 2, 2022