Advertisement
ಸುದ್ದಿಗಳು

ಅಡಿಕೆ ಆಮದು ಆತಂಕ | ಅಡಿಕೆ ಆಮದು ತಡೆಯುವಂತೆ ಪ್ರಧಾನಮಂತ್ರಿಗಳನ್ನು ಒತ್ತಾಯಿಸಿದ ARDF ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ |

Share
News Summary
ಅಡಿಕೆ ಆಮದು ತಡೆಯಾಗಬೇಕು ಎಂದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ , ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಒತ್ತಾಯಿಸಿದ್ದಾರೆ.

ಅಡಿಕೆಯ ಅಕ್ರಮ ಪ್ರವೇಶವನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅಡಿಕೆ ಸಂಶೋಧನೆ ಮತ್ತು ಅಭಿವೃಧ್ದಿ ಪ್ರತಿಷ್ಠಾನ(ARDF) ಅಧ್ಯಕ್ಷ ಡಾ: ಡಿ.ವೀರೇಂದ್ರ ಹೆಗ್ಗಡೆಯವರು ಪ್ರಧಾನಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

Advertisement
Advertisement

ಭಾರತವು ಪ್ರತಿ ವರ್ಷ 15.63 ಲಕ್ಷ ಟನ್ ಅಡಿಕೆಯನ್ನು ಉತ್ಪಾದಿಸುತ್ತದೆ ಮತ್ತು ನಮ್ಮ ದೇಶದ ಸುಮಾರು 16 ಮಿಲಿಯನ್ ಕೃಷಿಕರ ಹಾಗೂ ಉದ್ಯಮಿಗಳ  ಬೆನ್ನೆಲುಬಾಗಿದೆ. ಭಾರತವು ಅಡಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೂ, ಪ್ರತಿ ವರ್ಷ ಸುಮಾರು 24,000 ಟನ್ ಅಡಿಕೆಯನ್ನು ಕಾನೂನುಬದ್ದವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ.ಇದು ಸರಿಯಲ್ಲ ಎಂದು ಮನವಿಯಲ್ಲಿ ಡಾ: ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.

Advertisement

ಇತ್ತೀಚೆಗೆ  ಹಣಕಾಸು ರಾಜ್ಯ ಸಚಿವರಾದ  ಪಂಕಜ್ ಚೌಧರಿ ಅವರು ಅಡಿಕೆ ಕಳ್ಳಸಾಗಣೆ ಇನ್ನೂ ಅಸ್ತಿತ್ವದಲ್ಲಿದೆ ಎಂದು ಹೇಳಿರುತ್ತಾರೆ. ತೆರಿಗೆ ಜಾಲದ ಹೊರಗೆ ವ್ಯಾಪಾರ ಮಾಡುವ ಅಡಿಕೆಯ ಪ್ರಮಾಣವು ಲಭ್ಯವಿಲ್ಲ ಎಂದೂ ಅವರು ಹೇಳಿದರು. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ “ ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯದ ಪ್ರಕಾರ 15% ಅಡಿಕೆಯನ್ನು ಮಾತ್ರ ಕ್ಯಾಂಪ್ಕೋ ಮಂಗಳೂರು, ಟಿ.ಎಸ್.ಎಸ್. ಶಿರ್ಸಿ, ಮ್ಯಾಂಮ್ಕೋಸ್ ಶಿವಮೊಗ್ಗ ಮತ್ತು ತುಮ್ಕೋಸ್ ಚೆನ್ನಗಿರಿ ಮುಂತಾದ ಸಹಕಾರಿ ಸಂಸ್ಥೆಗಳು ವ್ಯಾಪಾರ ಮಾಡುತ್ತವೆ, ಮತ್ತು 85% ಅಡಿಕೆಯನ್ನು ಖಾಸಗಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಾರೆ” ಎಂದು ವರದಿ ಮಾಡಿದೆ.

ಈ ಸಂದರ್ಭದಲ್ಲಿ ಕಳ್ಳಸಾಗಾಣಿಕೆದಾರರ ಇಂತಹ ಅಕ್ರಮ ಚಟುವಟಿಕೆಗಳು ಸ್ಥಳೀಯವಾಗಿ ಬೆಳೆದ ಅಡಿಕೆಯ ಬೆಲೆಯನ್ನು ಅಸ್ಥಿರಗೊಳಿಸುವುದಲ್ಲದೆ, ಲಕ್ಷಾಂತರ ಅಡಿಕೆ ರೈತರ ಜೀವನ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಅಲ್ಲದೆ, ಅಡಿಕೆ ಮೇಲೆ ಆದ ಜಿ ಎಸ್‌ ಟಿ ರೂಪದಲ್ಲಿ ಉತ್ಪತ್ತಿಯಾಗುವ ಆದಾಯದ ಮೇಲೆ ದುಶ್ಪರಿಣಾಮ ಬೀರುತ್ತವೆ ಎಂದು ಅವರು ಮನವಿಯಲ್ಲಿ  ಹೇಳಿದ್ದಾರೆ.

Advertisement

ಹೀಗಾಗಿ ಪ್ರಧಾನ ಮಂತ್ರಿಗಳು ಇಂತಹ ಕಾನೂನುಬಾಹಿರ ಅಡಿಕೆ ಆಮದು ಮತ್ತು ಸರಿಯಾದ ಕಾನೂನು ದಾಖಲೆಗಳಿಲ್ಲದೆ ಆಗುವ ಅದರ ಸಾಗಣೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಅಡಿಕೆಯ ಸರಕು ಪಟ್ಟಿಯಲ್ಲಿ ಕಡಿಮೆ ದರವನ್ನು ನಮೂದಿಸಿ ಮಾರಾಟ ಮಾಡುವುದನ್ನು ತಡೆಯಲು, ನಮ್ಮ ದೇಶದ ಬಿಳಿ ಮತ್ತು ಕೆಂಪು ಅಡಿಕೆಗಳೆರಡರಲ್ಲೂ ಪರಿಣತರಾಗಿರುವ ಸಹಕಾರಿ ವಲಯದ ಸಮರ್ಥ ನೋಡಲ್ ಏಜೆನ್ಸಿ ಕ್ಯಾಂಪ್ಕೋ ನಿಯಮಿತ ಅಥವಾ ARDF ಅನ್ನು ಅಂತಹ ಸರಕುಗಳ ಮೌಲ್ಯಮಾಪನ ಮತ್ತು ವರದಿಗಳನ್ನು ನೀಡಲು ಗುರುತಿಸಬಹುದು.  ಪ್ರಧಾನ ಮಂತ್ರಿಗಳು ಈ ವಿಷಯಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಚಿವಾಲಯಗಳಿಗೆ ಸೂಚನೆ ನೀಡಬೇಕೆಂದು  ಅವರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ :

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather | 28-04-2024 | ರಾಜ್ಯದಲ್ಲಿ ಒಣ ಹವೆ | ಕರಾವಳಿ ಜಿಲ್ಲೆಗಳಲ್ಲಿ ಮೋಡ |

ಮೇ 6 ರಿಂದ ರಾಜ್ಯದ ಅಲ್ಲಲ್ಲಿ ಪೂರ್ವ ಮುಂಗಾರು ಮಳೆಯಾಗುವ ಲಕ್ಷಣಗಳಿವೆ.

7 mins ago

20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |

ಬಾಳೆಹಣ್ಣು, ಮಾವು, ಆಲೂಗಡ್ಡೆ ಮತ್ತು ಬೇಬಿ ಕಾರ್ನ್ ಸೇರಿದಂತೆ 20 ಕೃಷಿ ಉತ್ಪನ್ನಗಳ …

15 hours ago

Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |

ಈಗಿನಂತೆ ಎಪ್ರಿಲ್ 29 ಹಾಗೂ 30ರಂದು ಉತ್ತರ ಒಳನಾಡು, ದಕ್ಷಿಣ ಕರಾವಳಿ ಹಾಗೂ…

20 hours ago

ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |

ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು…

22 hours ago

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?

ದೇಸೀ ಗೋವು ಅದರಲ್ಲೂ ಮಲೆನಾಡು ಗಿಡ್ಡ ತಳಿಯ ಹಸು ಉಳಿಯಬೇಕು, ಅದರ ಉಳಿವು…

2 days ago

ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!

ದಿನದಿಂದ ದಿನಕ್ಕೆ ತಾಪಮಾನ(Temperature) ಏರುತ್ತಿದೆ. ಬಿಸಿ ಗಾಳಿ(Heat wave) ಬೀಸುತ್ತಿದೆ. ನೀರಿಗೆ ಅಭಾವ(Water…

3 days ago