ದುಬೈನಿಂದ ಮುಂದ್ರಾ ಬಂದರಿಗೆ ರಾಳ ಹಾಗೂ ಪ್ಲಾಸ್ಟಿಕ್ ಹೆಸರಿನಲ್ಲಿ ಸುಮಾರು 53 ಟನ್ ಅಡಿಕೆ ಆಮದಾಗಿರುವುದು ಬೆಳಕಿಗೆ ಬಂದಿದ್ದು, ಬಂದರಿನಲ್ಲಿರುವ ಕಸ್ಟಮ್ಸ್ ವಿಶೇಷ ಗುಪ್ತಚರ ಮತ್ತು ತನಿಖಾ ವಿಭಾಗವು ನಡೆಸಿದ ಕಾರ್ಯಾಚರಣೆಯಲ್ಲಿ ಅಡಿಕೆ ಪತ್ತೆಯಾಗಿದ್ದು ತನಿಖೆ ನಡೆಯುತ್ತಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂದ್ರಾ ಬಂದರಿನಲ್ಲಿರುವ ಕಸ್ಟಮ್ಸ್ ವಿಶೇಷ ಗುಪ್ತಚರ ಮತ್ತು ತನಿಖಾ ವಿಭಾಗವು 3 ಕೋಟಿ ಮೌಲ್ಯದ 53 ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ. ಎರಡು ಕಂಟೈನರ್‌ಗಳನ್ನು ತಡೆದು ತಪಾಸಣೆ ನಡೆಸಿದಾಗ ಅಡಿಕೆ ಪತ್ತೆಯಾಗಿದೆ.
ದುಬೈನಿಂದ ಮುಂದ್ರಾ ಬಂದರಿಗೆ ಅಡಿಕೆ ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಹೀಗಾಗಿ ತಪಾಸಣೆ ನಡೆಸಿದಾಗ ರಾಳ ಹಾಗೂ ಪ್ಲಾಸ್ಟಿಕ್ ಸಾಗಾಟ ಎಂದು ಘೋಷಿಸಲಾಗಿತ್ತು. ಆದರೆ ಪರಿಶೀಲನೆ ನಡೆಸಿದಾಗ 53 ಟನ್ ಅಡಿಕೆ ಪತ್ತೆಯಾಗಿದೆ. ವಶಪಡಿಸಿಕೊಂಡ ಅಡಿಕೆಯ ಮಾರುಕಟ್ಟೆ ಮೌಲ್ಯ 3 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.ಈ ಹಿಂದೆ ಇದೇ ರೀತಿಯಲ್ಲಿ ಅಡಿಕೆ ಕಳ್ಳಸಾಗಣೆ ನಡೆದಿತ್ತು. ಇದೀಗ ಮತ್ತೆ ಕಳ್ಳಸಾಗಾಣಿಕೆ ಬಿರುಸುಗೊಂಡಿದೆ.
ಸದ್ಯ ಅಡಿಕೆ ಮಾರುಕಟ್ಟೆ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಖಾಲಿಯಾಗಿದೆ, ಅಡಿಕೆ ಮುಂದಿನ ವರ್ಷ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿತ್ತು. ಹೀಗಾಗಿ ಧಾರಣೆ ಏರಿಕೆಯಾಗಿತ್ತು ಕೂಡಾ. ಬೆಳೆಗಾರರು ಈ ಸುದ್ದಿಗಳನ್ನು ನಂಬಿ ಅಡಿಕೆ ಮಾರಾಟಕ್ಕೂ ಹಿಂದೇಟು ಹಾಕಿದ್ದರು.
ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಅಡಿಕೆಗೆ 450 ರೂಪಾಯಿಗೆ ಖರೀದಿಯಾಗುತ್ತಿದೆ. ಆದರೆ ಮ್ಯಾನ್ಮಾರ್, ಶ್ರೀಲಂಕಾ ಮತ್ತು ಥೈಲ್ಯಾಂಡ್‌ನಂತಹ ದೇಶಗಳಲ್ಲಿ ಕಡಿಮೆ ಬೆಲೆಗೆ ಅಡಿಕೆ ಲಭ್ಯವಾಗುತ್ತಿದೆ. ಅಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡುವ ಅಡಿಕೆಯನ್ನು ಆಮದು ಸುಂಕ ತಪ್ಪಿಸಿ ಭಾರತಕ್ಕೆ ಸಾಗಿಸಲಾಗುತ್ತಿದೆ. ಈ ಸಂದರ್ಭ ಇಲ್ಲಿಯ ಮಾರುಕಟ್ಟೆಯನ್ನು ಏರಿಕೆ ಮಾಡಿ, ಆಮದು ಆದ ತಕ್ಷಣವೇ ಭಾರತದಲ್ಲಿ ಅಡಿಕೆ ಮಾರುಕಟ್ಟೆ ಇಳಿಸುವ ತಂತ್ರ ನಡೆಯುತ್ತಿದೆ. ಈ ಹಿಂದೆಯೂ ಇದೇ ಆಗಿತ್ತು ಕೂಡಾ. ಇದೊಂದು ದಂಧೆಯಾಗಿ ಮಾರ್ಪಟ್ಟಿದೆ.
ನಾಲ್ಕು ವರ್ಷಗಳ ಹಿಂದೆ, ಕಚ್‌ನಲ್ಲಿ ಮೊದಲ ಬಾರಿಗೆ ಅಡಿಕೆ ಕಳ್ಳಸಾಗಣೆ ಪ್ರಕರಣವು ಬಹಿರಂಗವಾಗಿತ್ತು, ಅಂದು 4 ಕೋಟಿ ರೂಪಾಯಿಯ ಅಡಿಕೆಯ ದಂಧೆಗೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತೆ ಈ ಬಾರಿ ಅಂತಹದ್ದೇ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸೂಕ್ತವಾದ ಕ್ರಮಗಳ ಅಗತ್ಯ ಇದೆ.
ಬೆಂಗಳೂರಿನ ಟಿ.ವಿ.ಎಸ್. ಕಂಪೆನಿ ಉದ್ಯಮಿ ಗೋಪಾಲರಾವ್ ಮತ್ತು ಆನಂದಮೂರ್ತಿ ಬಳಗದವರು ಹೊಸವರ್ಷ ಆಚರಣೆ…
31.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಹೊಸ ವರ್ಷದ ದಿನದಂದು ಸುಮಾರು ಒಂದು ಲಕ್ಷ ಹೂಗುಚ್ಛಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಪರಿಸರ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಜಲಾಶಯ ಡಿಸೆಂಬರ್ನಲ್ಲೂ ಭರ್ತಿಯಾಗಿದ್ದು, ಗರಿಷ್ಠ ನೀರಿನ…
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ 2015-2023 ರ ನಡುವೆ ಮಲೇರಿಯಾ ರೋಗ…
ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಸಜ್ಜಾಗುತ್ತಿದ್ದು ಇದಕ್ಕಾಗಿ ಗೃಹ ಇಲಾಖೆ ಮಾರ್ಗಸೂಚಿ ಬಿಡುಗಡೆ…