Advertisement
MIRROR FOCUS

ಎಳೆಅಡಿಕೆ ಮಾತ್ರವಲ್ಲ, ಬಲಿತ ಅಡಿಕೆಯೂ ಒಡೆದು ಬೀಳುತ್ತಿದೆ…! ಕಾರಣ ಏನು?

Share

ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿ ಇತ್ತೀಚೆಗೆ ಎಳೆಕಾಯಿ ಅಡಿಕೆ ಮಾತ್ರವಲ್ಲದೆ, ಬಲಿತ ಹಂತದಲ್ಲಿರುವ ಅಡಿಕೆ ಕಾಯಿಗಳೂ ಉದ್ದವಾಗಿ ಒಡೆದು ನೆಲಕ್ಕೆ ಬೀಳುತ್ತಿರುವ  ಮಾತುಗಳು, ಅನುಭವಗಳು ಕೇಳುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ರೈತರು ಹಂಚಿಕೊಂಡಿರುವ ಚಿತ್ರಗಳು ಮತ್ತು ಈ ಬಗ್ಗೆ ಚರ್ಚೆಗಳು ಸಮಸ್ಯೆ ವ್ಯಾಪಕವಾಗಿರುವುದನ್ನು ಸೂಚಿಸುತ್ತಿವೆ. ಇದರಲ್ಲಿರುವ ಬಂದಿರುವ ಒಂದು ಪ್ರತಿಕ್ರಿಯೆ, “ದಿನಾ ಸಾಯೋರಿಗೆ ಅಳುವವರು ಯಾರು ಅನ್ನೋ ಹಾಗಾಗಿದೆ ಪರಿಸ್ಥಿತಿ” ಇದು ಇಡೀ ಸಮಸ್ಯೆಯ ಪ್ರತಿಫಲನ.

ಸಾಮಾಜಿಕ ಜಾಲತಾಣದ ಕೃಷಿ ಗುಂಪಿನಲ್ಲಿ ಕೃಷಿಕ ಗೋಪಾಲ್‌ ಅಂಕಿತ್‌ ಎನ್ನುವವರು  ಹಂಚಿಕೊಂಡ ಪೋಸ್ಟ್‌ನಲ್ಲಿ, “ಎಳೆ ಕಾಯಿ ಅಡಿಕೆ ಜೊತೆ ಬಲಿತ ಅಡಿಕೆಯೂ ಈ ರೀತಿ ಒಡೆದು ಬೀಳುತ್ತಿದೆ. ಕಾರಣ ಏನು ಇರಬಹುದು? ಎಲೆಚುಕ್ಕಿಯೋ? ವಾತಾವರಣ ಬದಲಾವಣೆಯೋ?” ಎಂದು ಪ್ರಶ್ನಿಸಿದ್ದರು.

ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಲವಾರು ರೈತರು ಹಾಗೂ ಬೆಳೆಗಾರರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಈ ಸಮಸ್ಯೆಗೆ ನಿಖರ ಕಾರಣದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರೈತರು ಹೇಳುವುದೇನು? : ಕೆಲವರು ಇದನ್ನು ಬೋರಾನ್ (Boron) ಪೋಷಕಾಂಶದ ಕೊರತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಬೋಧ್ ಜೈನ್ ಅವರು, “ಬೋರನ್ ಕೊರತೆ ಸರ್” ಎಂದು ಪ್ರತಿಕ್ರಿಯಿಸಿದ್ದಾರೆ.  ಗಿರೀಶ್ ಶೆಟ್ಟಿ ಅವರು, “ಬೊರಾನ್ ಕೊರತೆ ಅನ್ನುತ್ತಾರೆ. ನಾನೊಮ್ಮೆ ಬೊರಾನ್ ಹಾಕಿ ನೋಡಿದ್ದು, ನನಗೆ ಏನೂ ಬದಲಾವಣೆ ಕಂಡಿಲ್ಲ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇನ್ನು ರವಿ ತುಳುವೆ ಉಬಾರ್ ಅವರು, “ಕಟ್ಟಿಗೆಯಲ್ಲಿ ಉರಿದ ಬೂದಿಯನ್ನು ಹಾಕಿ, ಒಂದು ವಾರದಲ್ಲಿ ಸರಿಯಾಗುತ್ತದೆ” ಎಂದು ತಮ್ಮ ತೋಟದ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಮಸ್ಯೆ ಎಲ್ಲೆಡೆ ಇದೆ ? :  ಈ ಬಾರಿ ಅಡಿಕೆ ಒಡೆದು ಬೀಳುವುದು ಹಾಗೂ ಎಳೆ ಅಡಿಕೆ ಒಡೆದು ಬೀಳುವ ಸಮಸ್ಯೆ ಎಲ್ಲಾ ಕಡೆ ಕಂಡುಬಂದಿದೆ. ಬಹುತೇಕ ಅಡಿಕೆ ಬೆಳೆಗಾರರು ಈ ಬಾರಿ ಮತ್ತೆ ಇಳುವರಿ ಕೊರತೆಯ ಬಗ್ಗೆ ಈಗಲೇ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಕೊಳೆರೋಗದಿಂದ ಅಡಿಕೆ ನಷ್ಟವಾಗಿದ್ದರೆ ಈ ಬಾರಿ ಅಡಿಕೆ ಒಡೆದು ಬೀಳುವುದು ಹಾಗೂ ಎಳೆ ಅಡಿಕೆ ಬೀಳುವುದು ಸಮಸ್ಯೆಯಾಗಿದೆ.  ಈಗಾಗಲೇ ಎಲೆಚುಕ್ಕಿಗೆ ಔಷಧಿ ಸಿಂಪಡಣೆ, ಕೊಳೆರೋಗಕ್ಕೆ ಸಿಂಪಡಣೆ, ಹಿಂಗಾರ ಒಣಗುವುದಕ್ಕೆ ಸಿಂಪಡಣೆ, ಪೋಷಕಾಂಶಗಳ ಸಿಂಪಡಣೆ.. ಹೀಗೇ ಹಲವು ಸಿಂಪಡಣೆಗಳಿಂದ ಕಂಗಾಲಾಗಿರುವ ಅಡಿಕೆ ಬೆಳೆಗಾರರಿಗೆ ಹೊಸ ಹೊಸ ಸಮಸ್ಯೆಗಳು ಸವಾಲಾಗಿವೆ. ಅಡಿಕೆ ಧಾರಣೆ 500-600 ರೂಪಾಯಿ ಆದರೂ ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿದೆ.

ಈ ಪೋಸ್ಟ್‌ನಲ್ಲಿ ಅರವಿಂದ ಹೆಗಡೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಅತ್ಯಂತ ಮಾರ್ಮಿಕವಾಗಿತ್ತು, ಅವರು ಹೇಳುವಂತೆ, “ನಮ್ಮಲ್ಲಿ ಬಹಳ ವರ್ಷಗಳಿಂದ ಇದೆಲ್ಲಾ ಸಾಮಾನ್ಯ. ದಿನಾ ಸಾಯೋರಿಗೆ ಅಳುವವರು ಯಾರು ಅನ್ನೋ ಹಾಗಾಗಿದೆ ಪರಿಸ್ಥಿತಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಿ. ಲಕ್ಷ್ಮೀನಾರಾಯಣ ಭಟ್ ಅವರು, “ಇದಕ್ಕೆ ಕಾರಣ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ನಿಮ್ಮಂತೆ ಎಲ್ಲಾ ಕಡೆಯ ಪರಿಸ್ಥಿತಿ” ಎಂದು ಹೇಳಿದ್ದಾರೆ.

ಇದರಿಂದ ಸಮಸ್ಯೆ ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲದೆ ಹಲವು ಭಾಗಗಳಲ್ಲಿ ಕಂಡುಬರುತ್ತಿರುವ ಸಮಸ್ಯೆ ಎನ್ನುವುದು ವ್ಯಕ್ತವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ತಜ್ಞರ ದೃಷ್ಟಿಯಲ್ಲಿ ಸಾಧ್ಯ ಕಾರಣಗಳು ಏನು ?: ಅಡಿಕೆ ಕಾಯಿಗಳು ಉದ್ದವಾಗಿ ಒಡೆದು ಬೀಳಲು ಹಲವು ಕಾರಣಗಳಿರಬಹುದು. ಮುಖ್ಯವಾಗಿ ಹಾಗೂ ಸಾಮಾನ್ಯವಾಗಿ..

1. ಬೋರಾನ್ ಕೊರತೆ :  ಬೋರಾನ್ ಸಸ್ಯಗಳಲ್ಲಿ ಕೋಶಗಳ ಬೆಳವಣಿಗೆ ಮತ್ತು ಹಣ್ಣಿನ ಅಭಿವೃದ್ಧಿಗೆ ಮುಖ್ಯ ಪೋಷಕಾಂಶ. ಇದರ ಕೊರತೆಯಿಂದ ಕಾಯಿಗಳಲ್ಲಿ ಬಿರುಕು, ಅಸಮ ಬೆಳವಣಿಗೆ ಮತ್ತು ಉದುರುವಿಕೆ ಕಂಡುಬರಬಹುದು.

2. ಅತಿಯಾದ ಮಳೆ ಅಥವಾ ತೇವಾಂಶದ ಏರಿಳಿತ: ಬೇಸಿಗೆಯ ನಂತರ ಏಕಾಏಕಿ ಭಾರೀ ಮಳೆ, ನಂತರ ಬಿಸಿಲು ಮತ್ತು ಮತ್ತೆ ಮಳೆ ಎಂಬ ವಾತಾವರಣದ ತೀವ್ರ ಬದಲಾವಣೆಗಳಿಂದ ಕಾಯಿಯ ಒಳ ಮತ್ತು ಹೊರಭಾಗದ ಬೆಳವಣಿಗೆಯಲ್ಲಿ ವ್ಯತ್ಯಾಸ ಉಂಟಾಗಿ ಬಿರುಕು ಕಾಣಿಸಿಕೊಳ್ಳಬಹುದು.

3. ಎಲೆಚುಕ್ಕಿ ಮತ್ತು ಇತರೆ ಶಿಲೀಂಧ್ರ ರೋಗಗಳು : ಎಲೆಚುಕ್ಕಿ (Koleroga) ಅಥವಾ ಇತರೆ ಶಿಲೀಂಧ್ರ ಸೋಂಕುಗಳು ಮರದ ಒಟ್ಟಾರೆ ಆರೋಗ್ಯವನ್ನು ದುರ್ಬಲಗೊಳಿಸಿ, ಕಾಯಿಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಎಳೆ ಅಡಿಕೆ ಬೀಳಲು ಪೆಂತಿ ಕೀಟ ಕೂಡಾ ಕಾರಣವಾಗುತ್ತಿದೆ.

4. ಪೋಷಕಾಂಶ ಅಸಮತೋಲನ :  ಬೋರಾನ್ ಮಾತ್ರವಲ್ಲದೆ ಕ್ಯಾಲ್ಸಿಯಂ, ಪೊಟ್ಯಾಶ್ ಹಾಗೂ ಇತರೆ ಸೂಕ್ಷ್ಮ ಪೋಷಕಾಂಶಗಳ ಕೊರತೆ ಅಥವಾ ಅಸಮತೋಲನದಿಂದಲೂ ಇಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.

5. ಹವಾಮಾನ ಬದಲಾವಣೆಯ ಪರಿಣಾಮ :  ಕಳೆದ ಕೆಲವು ವರ್ಷಗಳಿಂದ ಅಸಮ ಮಳೆ, ಹೆಚ್ಚಿನ ತಾಪಮಾನ ಹಾಗೂ ತೇವಾಂಶದ ಏರಿಳಿತಗಳು ಅಡಿಕೆ ಬೆಳೆ ಮೇಲೆ ಹೊಸ ರೀತಿಯ ಒತ್ತಡವನ್ನು ಉಂಟುಮಾಡುತ್ತಿರುವ ಬಗ್ಗೆ ರೈತರು ಮತ್ತು ತಜ್ಞರು ಚರ್ಚಿಸುತ್ತಿದ್ದಾರೆ.

ರೈತರಿಗೆ ಸಲಹೆ ಏನು ? :  ಒಂದು ಕಾರಣವನ್ನು ಊಹಿಸಿ ಔಷಧಿ ಅಥವಾ ಗೊಬ್ಬರ ಬಳಕೆ ಮಾಡುವ ಬದಲಾಗಿ ಕೃಷಿ ತಜ್ಞರ  ಸಲಹೆ ಪಡೆಯುವುದು ಸೂಕ್ತ. ಮಣ್ಣು ಹಾಗೂ ಎಲೆ ಪರೀಕ್ಷೆ ನಡೆಸಿ ಪೋಷಕಾಂಶ ಸ್ಥಿತಿ ತಿಳಿದುಕೊಳ್ಳುವುದು,  ಬೋರಾನ್ ಸೇರಿದಂತೆ ಸೂಕ್ಷ್ಮ ಪೋಷಕಾಂಶಗಳ ಅಗತ್ಯವಿದೆಯೇ ಎಂಬುದನ್ನು ಪರೀಕ್ಷೆಯ ಆಧಾರದಲ್ಲಿ ನಿರ್ಧರಿಸುವುದು ಮತ್ತು ತೋಟದಲ್ಲಿ ಎಲೆಚುಕ್ಕಿ ಅಥವಾ ಇತರೆ ರೋಗ ಲಕ್ಷಣಗಳಿದ್ದರೆ ತಕ್ಷಣ ನಿರ್ವಹಣಾ ಕ್ರಮ ಕೈಗೊಳ್ಳುವುದು ಅಗತ್ಯವಿದೆ.

Arecanut growers across coastal and Malnad regions are reporting unusual splitting and premature dropping of both tender and mature nuts. Farmers on social media suggest possible causes such as boron deficiency, nutrient imbalance, fungal diseases, and sudden weather fluctuations. However, many growers say the exact reason remains unclear and appears to be affecting plantations across multiple regions.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

35 minutes ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

8 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

19 hours ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

23 hours ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

1 day ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

1 day ago