ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ (Ecologically Sensitive Area – ESA) ಘೋಷಣೆ ಕುರಿತು ಹಲವು ವರ್ಷಗಳಿಂದ ಮುಂದುವರಿದಿರುವ ಗೊಂದಲದ ನಡುವೆಯೇ ಕೇಂದ್ರ ಸರ್ಕಾರ ಏಳನೇ ಕರಡು ಅಧಿಸೂಚನೆಯನ್ನು ಮರುಪ್ರಕಟಿಸಿದೆ. ರಾಜ್ಯಗಳೊಂದಿಗೆ ಒಮ್ಮತ ಮೂಡದಿದ್ದರೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಜುಲೈ 27, 2026ರಂದು ಪ್ರಕಟಗೊಂಡಿರುವ ಈ ಕರಡು ಅಧಿಸೂಚನೆಗೆ 60 ದಿನಗಳ ಕಾಲ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ. ಬಳಿಕ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಹೊಸ ಕರಡು ಅಧಿಸೂಚನೆಯ ಪ್ರಕಾರ ಸುಮಾರು 56,825 ಚದರ ಕಿಲೋಮೀಟರ್ ಪ್ರದೇಶದ 1,463 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯವಾಗಿ ಗುರುತಿಸುವ ಪ್ರಸ್ತಾಪವಿದೆ. ಈ ವ್ಯಾಪ್ತಿಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಪಶ್ಚಿಮ ಘಟ್ಟದ ಆಯ್ದ ಪ್ರದೇಶಗಳು ಸೇರಲಿವೆ.
ಪರಿಸರಕ್ಕೆ ಗಂಭೀರ ಹಾನಿ ಉಂಟುಮಾಡುವ ಚಟುವಟಿಕೆಗಳನ್ನು ನಿಯಂತ್ರಿಸುವುದು ಅಥವಾ ನಿಷೇಧಿಸುವುದು ಈ ಅಧಿಸೂಚನೆಯ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಹೊಸ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಕೆಂಪು ವರ್ಗದ ಮಾಲಿನ್ಯಕಾರಿ ಕೈಗಾರಿಕೆಗಳಂತಹ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗಲಿವೆ.
2014ರಿಂದ ಇದುವರೆಗೆ ಕೇಂದ್ರ ಸರ್ಕಾರ ಆರು ಬಾರಿ ಕರಡು ಅಧಿಸೂಚನೆ ಹೊರಡಿಸಿದ್ದರೂ, ರಾಜ್ಯ ಸರ್ಕಾರಗಳ ಆಕ್ಷೇಪಣೆ ಮತ್ತು ಸ್ಥಳೀಯ ಜನರ ಆತಂಕಗಳಿಂದ ಅಂತಿಮ ಅಧಿಸೂಚನೆ ಹೊರಬಂದಿರಲಿಲ್ಲ. ಈ ಹಿನ್ನೆಲೆ ಇದೀಗ ಏಳನೇ ಬಾರಿ ಕರಡು ಅಧಿಸೂಚನೆಯನ್ನು ಪ್ರಕಟಿಸಿ ಸಾರ್ವಜನಿಕರಿಂದ ಹಾಗೂ ರಾಜ್ಯಗಳಿಂದ ಮತ್ತೊಮ್ಮೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.
ಕೇರಳ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಜನವಸತಿ, ಕೃಷಿ, ತೋಟಗಾರಿಕೆ ಹಾಗೂ ಗ್ರಾಮೀಣ ಜೀವನಕ್ಕೆ ಯಾವುದೇ ತೊಂದರೆಯಾಗದಂತೆ ಅಧಿಸೂಚನೆಯಲ್ಲಿ ಸ್ಪಷ್ಟತೆ ನೀಡಬೇಕು ಎಂದು ಆಗಾಗ ಒತ್ತಾಯಿಸುತ್ತಿವೆ. ಪರಿಸರ ಸಂರಕ್ಷಣೆ ಮತ್ತು ಜನಜೀವನದ ನಡುವೆ ಸಮತೋಲನ ಸಾಧಿಸುವುದು ಅತ್ಯಗತ್ಯ ಎಂಬುದು ರಾಜ್ಯಗಳ ನಿಲುವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಯಾವ ಚಟುವಟಿಕೆಗಳಿಗೆ ನಿರ್ಬಂಧ? : ಅಂತಿಮ ಅಧಿಸೂಚನೆ ಜಾರಿಯಾದಲ್ಲಿ ಪರಿಸರ ಸೂಕ್ಷ್ಮ ವಲಯದಲ್ಲಿ ಕೆಳಕಂಡ ಚಟುವಟಿಕೆಗಳಿಗೆ ನಿಷೇಧ ಅಥವಾ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಾಗಲಿದೆ.
ಅದೇ ವೇಳೆ ಜಲವಿದ್ಯುತ್ ಯೋಜನೆಗಳಂತಹ ಚಟುವಟಿಕೆಗಳಿಗೆ ನಿಯಂತ್ರಿತ ಅನುಮತಿ ನೀಡುವ ವ್ಯವಸ್ಥೆ ಮುಂದುವರಿಯಲಿದೆ.
ರಾಜ್ಯವಾರು ಪ್ರಸ್ತಾವಿತ ESA ಪ್ರದೇಶ:
ಹಿಂದಿನ ಕರಡು ಅಧಿಸೂಚನೆಯಲ್ಲಿದ್ದುದೇ ಮುಂದುವರಿಕೆ : 2024ರ ಜುಲೈನಲ್ಲಿ ಪ್ರಕಟವಾಗಿದ್ದ ಕರಡು ಅಧಿಸೂಚನೆಯೊಂದಿಗೆ ಹೋಲಿಸಿದರೆ ಈ ಬಾರಿ ಯಾವುದೇ ಮಹತ್ವದ ಬದಲಾವಣೆ ಮಾಡಲಾಗಿಲ್ಲ. ESA ವ್ಯಾಪ್ತಿ, ರಾಜ್ಯವಾರು ವಿಸ್ತೀರ್ಣ ಹಾಗೂ ನಿಯಮಗಳು ಹಿಂದಿನಂತೆಯೇ ಉಳಿದಿವೆ. ಕೇರಳದ ವಯನಾಡು ಜಿಲ್ಲೆಯ ಮನಂತವಾಡಿ, ಸುಲ್ತಾನ್ ಬತ್ತೇರಿ ಹಾಗೂ ವೈತಿರಿ ತಾಲ್ಲೂಕಿನ 13 ಗ್ರಾಮಗಳು ಹಿಂದಿನ ಕರಡು ಅಧಿಸೂಚನೆಯಲ್ಲಿದ್ದಂತೆ ಈ ಬಾರಿಯೂ ESA ಪಟ್ಟಿಯಲ್ಲಿ ಮುಂದುವರಿದಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
The Union Government has reissued the seventh draft notification proposing around 56,825 sq km of the Western Ghats as an Ecologically Sensitive Area (ESA). The move comes despite prolonged disagreement with several states, aiming to regulate environmentally harmful activities while inviting fresh objections and suggestions before finalisation.
ಹಿತವಾದ ಆಹಾರವನ್ನು ಮಿತ ಪ್ರಮಾಣದಲ್ಲಿ ಮತ್ತು ಸಕಾಲದಲ್ಲಿ ಸೇವಿಸುವುದು ಆರೋಗ್ಯಕರ ಜೀವನದ ಮೂಲಮಂತ್ರ…
ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು, ಐಟಿಐ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 1ರವರೆಗೆ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚನೆ…
ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ, ಬಳ್ಪ, ಗುತ್ತಿಗಾರು, ಸುಬ್ರಹ್ಮಣ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ…
ಬಾಂಗ್ಲಾದೇಶದ ವಿಜ್ಞಾನಿಗಳು ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ ತಯಾರಿಸುವ ತಂತ್ರಜ್ಞಾನಕ್ಕೆ ಪೇಟೆಂಟ್…
ಭಾರತದ ಕೃಷಿ ರಫ್ತು ಉತ್ಪನ್ನಗಳ ಸಂಖ್ಯೆ 280ರಿಂದ ಸುಮಾರು 500ಕ್ಕೆ ಏರಿಕೆಯಾಗಿದೆ. ₹4.61…