Advertisement
ಸುದ್ದಿಗಳು

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ

Share

ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ಬುಧವಾರ ಭರ್ಜರಿ ಪ್ರದರ್ಶನ ನೀಡಿದ್ದು, ಒಂದೇ ದಿನ 4 ಚಿನ್ನ ಹಾಗೂ 3 ಕಂಚಿನ ಪದಕ ಸೇರಿದಂತೆ ಒಟ್ಟು 7 ಪದಕಗಳನ್ನು ಗೆದ್ದಿದೆ. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದ್ದು, ಪದಕ ಪಟ್ಟಿಯಲ್ಲಿ ಭಾರತ 8ನೇ ಸ್ಥಾನಕ್ಕೆ ಜಿಗಿದಿದೆ.

ಬಿಲ್ಲುಗಾರಿಕೆ ಹಾಗೂ ಶೂಟಿಂಗ್‌ನಲ್ಲಿ ಭಾರತದ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಮಹಿಳೆಯರ ತಂಡ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಂ, ಪ್ರಿತಿಕಾ ಪ್ರದೀಪ್ ಹಾಗೂ ಚಿಕಿತಾ ತನಿಪರ್ಥಿ ಅವರ ತಂಡ ಚಿನ್ನ ಗೆದ್ದಿದೆ. ಚೀನಾ ವಿರುದ್ಧದ ಫೈನಲ್‌ನಲ್ಲಿ ಭಾರತ 238 ಅಂಕ ಗಳಿಸಿದ್ದು, ಈ ಮೊತ್ತ ವಿಶ್ವ ದಾಖಲೆಯ ಮೊತ್ತಕ್ಕೆ ಸಮನಾಗಿದೆ.

ನಂತರ ಚಿಕಿತಾ ತನಿಪರ್ಥಿ ಹಾಗೂ ಸಾಹಿಲ್ ಜಾಧವ್ ಜೋಡಿ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಶೂಟ್‌ಆಫ್‌ನಲ್ಲಿ ಗೆದ್ದು ಚಿನ್ನದ ಪದಕ ಪಡೆಯಿತು.

ಪುರುಷರ ತಂಡವೂ ಚಿನ್ನ ಗೆದ್ದು ಬಿಲ್ಲುಗಾರಿಕೆಯಲ್ಲಿ ಭಾರತದ ಚಿನ್ನದ ಹ್ಯಾಟ್ರಿಕ್ ಪೂರ್ಣಗೊಳಿಸಿತು. ಕುಶಾಲ್ ದಲಾಲ್, ಸಾಹಿಲ್ ಜಾಧವ್ ಹಾಗೂ ಗಣೇಶ್ ತಿರುಮೂರು ಅವರ ತಂಡ ಚೀನಾ ವಿರುದ್ಧ 238-237 ಅಂತರದಲ್ಲಿ ಜಯ ಸಾಧಿಸಿತು.

ಶೂಟಿಂಗ್‌ನ ಮಿಶ್ರ ಟ್ರ್ಯಾಪ್ ತಂಡ ವಿಭಾಗದಲ್ಲಿ ನೀರು ಧಾಂಡಾ ಹಾಗೂ ಕೈನನ್ ಚೆನೈ ಚಿನ್ನ ಗೆದ್ದರು. ಭಾರತದ ಜೋಡಿ 34 ಅಂಕಗಳೊಂದಿಗೆ ಏಷ್ಯನ್ ಗೇಮ್ಸ್ ದಾಖಲೆಯನ್ನೂ ನಿರ್ಮಿಸಿದೆ. ಬಾಕ್ಸಿಂಗ್‌ನಲ್ಲಿ ಪ್ರಿಯಾ ಘಂಗಾಸ್, ಕಪಿಲ್ ಪೊಖರಿಯಾ ಹಾಗೂ ಕುಸ್ತಿ ವಿಭಾಗದಲ್ಲಿ ಸುಮಿತ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ.

ಹೀಗಾಗಿ ಸೆಪ್ಟೆಂಬರ್ 30ರಣದು ಒಂದೇ ದಿನ ಭಾರತಕ್ಕೆ ಒಟ್ಟು ಏಳು ಪದಕಗಳು ಲಭಿಸಿವೆ.

ಇದೇ ವೇಳೆ ಮಹಿಳೆಯರ ಹಾಕಿ ತಂಡ ದಕ್ಷಿಣ ಕೊರಿಯಾವನ್ನು 2-0 ಅಂತರದಲ್ಲಿ ಸೋಲಿಸಿ ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದೆ. ಪುರುಷರ ಹಾಗೂ ಮಹಿಳೆಯರ ಸ್ಕ್ವಾಷ್ ತಂಡಗಳೂ ಸೆಮಿಫೈನಲ್ ಪ್ರವೇಶಿಸಿವೆ.

ಚೀನಾ 151 ಚಿನ್ನ ಸೇರಿದಂತೆ ಒಟ್ಟು 277 ಪದಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಜಪಾನ್ 200 ಪದಕಗಳೊಂದಿಗೆ ಎರಡನೇ ಹಾಗೂ ದಕ್ಷಿಣ ಕೊರಿಯಾ 103 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿವೆ. ಭಾರತ 10 ಚಿನ್ನ, 21 ಬೆಳ್ಳಿ ಹಾಗೂ 29 ಕಂಚು ಸೇರಿದಂತೆ 60 ಪದಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಭಾರತದ ಈ ದಿನದ ಸಾಧನೆಯಿಂದ ಕಜಕಿಸ್ತಾನವನ್ನು ಹಿಂದಿಕ್ಕಿ ಭಾರತ ಎಂಟನೇ ಸ್ಥಾನಕ್ಕೆ ಏರಿದೆ. ಏಷ್ಯನ್ ಗೇಮ್ಸ್‌ 2026 ಅಕ್ಟೋಬರ್ 4 ರವರೆಗೆ ನಡೆಯಲಿದ್ದು, ಮುಂದಿನ ದಿನಗಳಲ್ಲೂ ಭಾರತಕ್ಕೆ ಹಲವು ಪದಕಗಳ ನಿರೀಕ್ಷೆಯಿದೆ.

India enjoyed its most successful day so far at the 2026 Asian Games in Aichi-Nagoya, winning seven medals, including four gold and three bronze, on September 30. The gold medals came from women’s compound archery, mixed compound archery, men’s compound archery and mixed team trap shooting. India’s overall tally rose to 60 medals — 10 gold, 21 silver and 29 bronze — moving the country to eighth place in the standings. China leads with 277 medals, followed by Japan and South Korea.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸುಳ್ಯದಲ್ಲಿ ಉದ್ಯೋಗಾವಕಾಶ – ನ.12ರಂದು ಬೃಹತ್ ಉದ್ಯೋಗಮೇಳ

ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ನವೆಂಬರ್ 12ರಂದು ಬೃಹತ್ ಉದ್ಯೋಗಮೇಳ ನಡೆಯಲಿದೆ. 50ಕ್ಕೂ ಹೆಚ್ಚು…

22 hours ago

ಹಿಂಗಾರು ಬಿತ್ತನೆಗೆ ಹವಾಮಾನದ ಹೊಡೆತ – ದೇಶದಲ್ಲಿ ಶೇ.46ರಷ್ಟು ಕುಸಿತ, ಸಾಸಿವೆ-ಕಡಲೆ ಬಿತ್ತನೆ ಭಾರಿ ಇಳಿಕೆ – ಆಹಾರ ಹಣದುಬ್ಬರದ ಆತಂಕ

ದೇಶದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.46ರಷ್ಟು ಕುಸಿದಿದ್ದು,…

1 day ago

ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ₹20,000 ಕೋಟಿ – ರಸ್ತೆ, ಸೇತುವೆ ಹಾಗೂ ಬೆಂಗಳೂರು ಸುತ್ತಮುತ್ತಲಿನ ಕಾಮಗಾರಿಗಳಿಗೆ ಆದ್ಯತೆ

ರಾಜ್ಯದಲ್ಲಿ ರಸ್ತೆ, ಸೇತುವೆ, ರಾಜ್ಯ ಹೆದ್ದಾರಿ ಹಾಗೂ ಬೆಂಗಳೂರು ಸುತ್ತಮುತ್ತಲಿನ ರಸ್ತೆ ಅಭಿವೃದ್ಧಿಗಾಗಿ…

1 day ago

ಹವಾಮಾನ ವರದಿ | 08-11-2026 | ನ.11ರ ಹವಾಮಾನ ಬದಲಾವಣೆಯ ಮೇಲೆ ನಿಗಾ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಇಂದು ಗುಡುಗು…

2 days ago

ಹವಾಮಾನ ವರದಿ | 07-11-2026 | ನ.14ರಿಂದ ಮತ್ತೆ ಮಳೆ ? ಅರಬ್ಬಿ ಸಮುದ್ರದಲ್ಲಿ ಹೊಸ ಬೆಳವಣಿಗೆ

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ನವೆಂಬರ್ 9ರಿಂದ ಒಣಹವೆ, ಬಿಸಿಲು ಹಾಗೂ ರಾತ್ರಿ…

3 days ago

ದೀಪಾವಳಿ ಪಟಾಕಿ ಅವಘಡ: ಮಕ್ಕಳ ಕಣ್ಣು, ಮುಖದ ರಕ್ಷಣೆಗೆ ಪೋಷಕರು ಎಚ್ಚರ ವಹಿಸಿ

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಮಕ್ಕಳ ಕಣ್ಣು ಮತ್ತು ಮುಖಕ್ಕೆ ಗಂಭೀರ ಗಾಯಗಳಾಗುವ…

3 days ago