#Arecanut | ಅಡಿಕೆ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ತಂತ್ರ | ಇಡಿ ದಾಳಿಯ ಬಳಿಕ ಬಹಿರಂಗವಾದ ಅಂಶ |

July 1, 2023
7:01 PM

ಅಡಿಕೆ ಅಕ್ರಮ ಸಾಗಾಟಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ) ಈಚೆಗೆ ಮುಂಬಯಿಯಲ್ಲಿ ದಾಳಿ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದೆ. ಈ ಸಂದರ್ಭ ಅಡಿಕೆ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ತಂತ್ರಗಾರಿಕೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.

Advertisement
Advertisement

ತೆರಿಗೆ ವಂಚನೆ, ಆಮದು ಸುಂಕ ವಂಚನೆ  ಆರೋಪದ ಮೇಲೆ ಮುಂಬೈನಲ್ಲಿ ಅಡಿಕೆ ವ್ಯಾಪಾರಿ ವಾಸಿಂ ಬಾವಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ ಬಂಧಿಸಿದೆ. ಇದೀಗ ನಾಗಪುರ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದು, ಅಡಿಕೆ ಕೃತಕ ಅಭಾವ ಸೃಷ್ಟಿಸಿ ಲಾಭ ಮಾಡುವ ಅಂಶಗಳೂ ಬೆಳಕಿಗೆ ಬರುತ್ತಿದೆ.

Advertisement

ನಾಗ್ಪುರದ ಮಾಧ್ಯಮ ವರದಿಗಳ ಪ್ರಕಾರ, ಅಲ್ಲಿನ ಅಡಿಕೆ ವ್ಯಾಪಾರಿಗಳು ಕೆಲವರು ದಾಸ್ತಾನುಗಳನ್ನು ಬೇರೆ ಕಡೆಗೆ ವರ್ಗಾಯಿಸಿ ಅಡಿಕೆ ಮಾರುಕಟ್ಟೆಯ ಕೃತಕ ಅಭಾವ ಸೃಷ್ಟಿಸಿ ಆ ಬಳಿಕ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ತಂತ್ರಗಳು ನಡೆದಿವೆ.

ಅಡಿಕೆ ಆಮದು ಮತ್ತು ಸಾಗಾಟದ ಸಂದರ್ಭ  ತೆರಿಗೆ ತಪ್ಪಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದೆ. ಹಿಂದೆ ಪ್ರತಿ ಕಿಲೋಗ್ರಾಂಗೆ 350-380 ರೂ.ಗೆ ಮಾರಾಟವಾಗುತ್ತಿದ್ದ ಅಡಿಕೆ ಈಗ 400-425 ರೂ.ಗೆ ಮಾರಾಟವಾಗುತ್ತಿದೆ. ವಾಸಿಂ ಬಾವಾ  ಬಂಧನದ ನಂತರವೂ  ಉದ್ದೇಶಪೂರ್ವಕವಾಗಿ ಕೃತಕ ಅಭಾವ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ.

Advertisement

ಜಾರಿ ನಿರ್ದೇಶನಾಲಯ ದಾಳಿ ಬಳಿಕ ಇಂಡೋನೇಷ್ಯಾ ಮೂಲಕ ಇಂಡೋ-ಬಾಂಗ್ಲಾದೇಶ ಮತ್ತು ಇಂಡೋ-ಮ್ಯಾನ್ಮಾರ್ ಗಡಿಗಳಿಂದ ವೀಳ್ಯದೆಲೆ ಪಡೆಯುವ ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳ ವ್ಯಾಪಾರಿಗಳು ತಮ್ಮ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಈಶಾನ್ಯ ರಾಜ್ಯಗಳಿಂದ ಈಗಾಗಲೇ ಸಾಗುತ್ತಿದ್ದ ಅಡಿಕೆ ಸಾಗಾಟದ ಲಾರಿಗಳನ್ನು  ಬೇರೆ ರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ತನಿಖೆ ಮುಂದುವರಿದಿದ್ದು, ವಾಸಿಂ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಸಹಚರರು ತಲೆಮರೆಸಿಕೊಂಡಿದ್ದಾರೆ. ಇಡಿ ದಾಳಿಯ ಸಮಯದಲ್ಲಿ ಅಡಿಕೆಯನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಮನಗಂಡು  ದಾಸ್ತಾನುಗಳ ವರ್ಗಾವಣೆಯನ್ನು ನಡೆಸಲಾಗುತ್ತಿದೆ.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ | ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗ್ರೀನ್‌ ಸಿಗ್ನಲ್‌ | ಪರಿಸರದ ಮೇಲಾಗುವ ಪರಿಣಾಮಗಳೇನು..?
May 21, 2024
4:55 PM
by: The Rural Mirror ಸುದ್ದಿಜಾಲ
ರಹಸ್ಯ ಕಥೆಗಳನ್ನು ಹೇಳುವ ಭೀಮ್’ಕುಂಡ್ | ಭೀಮ ನಿರ್ಮಿಸಿದ ಈ ಕೆರೆಯ ವಿಶೇಷತೆ ಏನು ಗೊತ್ತಾ..? ಇದು ಬರೀ ಬಾವಿಯಲ್ಲ…
May 21, 2024
4:27 PM
by: The Rural Mirror ಸುದ್ದಿಜಾಲ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಒಂದೆಲಗ | ಕೈ ತೋಟಗಳಲ್ಲಿ ಸಿಗುವ ಸುಲಭ ಔಷಧಿ
May 21, 2024
3:53 PM
by: The Rural Mirror ಸುದ್ದಿಜಾಲ
ಕರಾವಳಿ ಭಾಗದಲ್ಲಿ ಉತ್ತಮ ಮಳೆ | ಮಂಗಳೂರಿನ ಸಮುದ್ರ ತೀರದಲ್ಲಿ ಎಚ್ಚರಿಕೆ |
May 21, 2024
3:42 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror