ಅಡಿಕೆ ‘Group 1’ ವಿಶ್ವ ಆರೋಗ್ಯ ಸಂಸ್ಥೆಯ ವರ್ಗೀಕರಣದ ಅರ್ಥವೇನು?

January 28, 2026
8:00 AM

ಅಡಿಕೆ (Arecanut) ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದ International Agency for Research on Cancer (IARC) ನ Group 1 ವರ್ಗೀಕರಣ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.  ಸಾಮಾನ್ಯವಾಗಿ ಸಾರ್ವಜನಿಕ ವಲಯದಲ್ಲಿ “Group 1 ಎಂದರೆ ಅತ್ಯಂತ ವಿಷಕಾರಿ ಅಥವಾ ತಕ್ಷಣ ಕ್ಯಾನ್ಸರ್ ಉಂಟುಮಾಡುವ ಪದಾರ್ಥ” ಎಂಬ ತಪ್ಪು ಕಲ್ಪನೆ ಕಂಡುಬರುತ್ತಿದೆ. ಆದರೆ ವಿಜ್ಞಾನಾತ್ಮಕವಾಗಿ IARC ವರ್ಗೀಕರಣವು ಅಪಾಯದ ಪ್ರಮಾಣದ ಮೇಲೆ ಅಲ್ಲ, ಬದಲಾಗಿ ಸಾಕ್ಷ್ಯದ ದೃಢತೆಯ ಮೇಲೆ ಆಧಾರಿತವಾಗಿದೆ.

Advertisement
Advertisement

Group 1 ಎಂದರೆ ಏನು?  : IARC ಒಂದು ಪದಾರ್ಥವನ್ನು ವರ್ಗೀಕರಿಸುವಾಗ ಮುಖ್ಯವಾಗಿ ಕೇಳುವ ಪ್ರಶ್ನೆ, “ಇದು ಎಷ್ಟು ಅಪಾಯಕಾರಿ?”  ಯಲ್ಲ;
“ಮಾನವನಲ್ಲಿ ಕ್ಯಾನ್ಸರ್ ಉಂಟುಮಾಡುತ್ತದೆ ಎಂಬುದು ಎಷ್ಟು ದೃಢವಾಗಿದೆ?”  ಅಂದರೆ, ಸಾಕ್ಷ್ಯ ದೃಢವಾಗಿದ್ದರೆ ಅದು Group 1 ಆಗುತ್ತದೆ.

Group 1 ಎಂದರೆ:

  • Carcinogenic to humans

  • ಮಾನವನಲ್ಲಿ ಕ್ಯಾನ್ಸರ್ ಉಂಟುಮಾಡುತ್ತದೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯ ಇದೆ

ಇದು “ಅತ್ಯಂತ ವಿಷಕಾರಿ” ಎಂಬ ಅರ್ಥವಲ್ಲ; “ಮಾನವ ಅಧ್ಯಯನಗಳಲ್ಲಿ ಕ್ಯಾನ್ಸರ್ ಸಂಬಂಧ ಸಾಬೀತಾಗಿದೆ” ಎಂಬುದೇ ಮುಖ್ಯ ಅಂಶ.

Group 2A ಮತ್ತು Group 2B ಎಂದರೆ? :  IARC ಯ ಇನ್ನೊಂದು ಪ್ರಮುಖ ವರ್ಗೀಕರಣಗಳು:

  • Group 2A – Probably carcinogenic – ಮಾನವನಲ್ಲಿ ಸೀಮಿತ ಸಾಕ್ಷ್ಯ, ಆದರೆ ಪ್ರಾಣಿ ಅಧ್ಯಯನಗಳಲ್ಲಿ ಬಲವಾದ ಸಾಕ್ಷ್ಯ.

  • Group 2B – Possibly carcinogenic – ಮಾನವನಲ್ಲೂ ಪ್ರಾಣಿಗಳಲ್ಲೂ ಸಾಕ್ಷ್ಯ ದುರ್ಬಲ ಅಥವಾ ಅಪೂರ್ಣವಾಗಿರುವುದು.

ಅಡಿಕೆಯನ್ನು ಏಕೆ Group 1 ಕ್ಕೆ ಸೇರಿಸಿದ್ದಾರೆ? :  IARC ನಿರ್ಧಾರವು “ಅಡಿಕೆ ಮಾತ್ರ” ಆಧಾರಿತವಾಗಿಲ್ಲ. ಇದು ಹಲವು ದಶಕಗಳ ವೈಜ್ಞಾನಿಕ ಸಂಶೋಧನೆಯ ಒಟ್ಟಾರೆ ಫಲಿತಾಂಶವಾಗಿದೆ. ಪ್ರಮುಖ ಕಾರಣಗಳು:

  1.  Oral Submucous Fibrosis (OSF) : ಅಡಿಕೆ ಸೇವನೆಯಿಂದ ಉಂಟಾಗುವ Oral Submucous Fibrosis (OSF) ಎಂಬುದು ಒಂದು ಪೂರ್ವ-ಕ್ಯಾನ್ಸರ್ ಸ್ಥಿತಿ. OSF ಇರುವವರಲ್ಲಿ Oral Cancer ಗೆ ಮಾರ್ಪಡುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ಸೂಚಿಸುತ್ತವೆ.
  2. Arecoline ಮತ್ತು Alkaloids ಪರಿಣಾಮ : ಅಡಿಕೆಯಲ್ಲಿರುವ Arecoline ಹಾಗೂ ಇತರ ಅಲ್ಕಲಾಯ್ಡ್ಸ್  : DNA ಹಾನಿ (Genotoxicity), Fibroblast overstimulation ,Nitrosamine formation ಇವು ಕ್ಯಾನ್ಸರ್ ಉಂಟುಮಾಡುವ ಜೈವಿಕ ಯಾಂತ್ರಿಕತೆಯನ್ನು ಬಲಪಡಿಸುವ ಕಾರಣಗಳಾಗಿವೆ.
  3. ಮಾನವ ಅಧ್ಯಯನಗಳ ದೃಢತೆ : ಭಾರತ, ತೈವಾನ್, ಶ್ರೀಲಂಕಾ ಮುಂತಾದ ರಾಷ್ಟ್ರಗಳಲ್ಲಿ ನಡೆದ ಅಧ್ಯಯನಗಳಲ್ಲಿ:  ಅಡಿಕೆ ಸೇವನೆ ಮತ್ತು ಬಾಯಿಯ ಕ್ಯಾನ್ಸರ್ ನಡುವೆ,  ಪುನಃಪುನಃ ದೃಢವಾದ ಸಂಬಂಧ (epidemiological association) ಕಂಡುಬಂದಿದೆ.  ತಂಬಾಕು ಇಲ್ಲದಿದ್ದರೂ ಸಹ ಕೆಲ ಸಂದರ್ಭಗಳಲ್ಲಿ Oral Cancer ಪ್ರಕರಣಗಳು ವರದಿಯಾಗಿವೆ ಎಂದು IARC ಉಲ್ಲೇಖಿಸಿದೆ.

Group 1 ಸ್ಥಾನದಿಂದ ಅಡಿಕೆ ಹೊರಬರಬಹುದೇ? :  ಪ್ರಧಾನ ಚರ್ಚೆಯ ವಿಷಯವೇ ಇದಾಗಿದೆ:
ಅಡಿಕೆಯನ್ನು Group 2 ಗೆ ಮರುವರ್ಗೀಕರಿಸಬಹುದೇ? :  ಸಿದ್ಧಾಂತವಾಗಿ ಸಾಧ್ಯವಾದರೂ, ಪ್ರಾಯೋಗಿಕವಾಗಿ ಇದು ಅತ್ಯಂತ ಕಠಿಣ. ಕಾರಣ:

  • ಈಗಿರುವ ಮಾನವ ಅಧ್ಯಯನಗಳ ಸಾಕ್ಷ್ಯವನ್ನು ತಪ್ಪು ಎಂದು ನಿರೂಪಿಸಬೇಕು ಅಥವಾ

  • ಮೂಲ ಕಾರಣ ಅಡಿಕೆ ಅಲ್ಲ ಎಂದು ತೋರಿಸಬೇಕು

ಮರುವರ್ಗೀಕರಣಕ್ಕೆ ಬೇಕಾದ ವೈಜ್ಞಾನಿಕ ದಾರಿಗಳು : ಪರಿವರ್ತನೆಗಾಗಿ ಅಗತ್ಯವಿರುವುದು:

  • 10–20 ವರ್ಷಗಳ ದೊಡ್ಡ cohort ಅಧ್ಯಯನಗಳು

  • ಸುಣ್ಣ, ತಂಬಾಕು ಸಂಪೂರ್ಣ ಹೊರತುಪಡಿಸಿದ ಡೇಟಾ

  • Arecoline carcinogenic ಅಲ್ಲ ಎಂಬ ಪ್ರಯೋಗಾಲಯದ ನಿರೂಪಣೆ

ಆದರೆ ಈಗಿನ ಸಾಕ್ಷ್ಯಗಳು ಈ ಸಾಧ್ಯತೆಗೆ ವಿರುದ್ಧವಾಗಿವೆ.

ಮುಂದಿನ ವಾಸ್ತವಿಕ ಮಾರ್ಗ : ವಿಜ್ಞಾನಾತ್ಮಕವಾಗಿ ಒಂದು ವಾಸ್ತವಿಕ ದಾರಿ ಎಂದರೆ:

  • ಶುದ್ಧ ಅಡಿಕೆ ಅಲ್ಲ, ಅದರ ಸೇವನೆಯ ರೂಪ (lime, frequency, processing) ಅಪಾಯ ಹೆಚ್ಚಿಸಬಹುದು ಎಂಬ ನಿಖರ ಅಧ್ಯಯನ.  ಅಡಿಕೆಯ “dose-response relationship” ಮತ್ತು safer alternatives ಕುರಿತ ಸಂಶೋಧನೆ ಮುಂದುವರಿಯಬೇಕಾಗಿದೆ.

WHO/IARC ಪ್ರಕಾರ ಅಡಿಕೆ Group 1 ವರ್ಗದಲ್ಲಿರುವುದಕ್ಕೆ ಈಗ ಬಲವಾದ ಮಾನವ ಸಾಕ್ಷ್ಯಗಳಿವೆ. Group 1 ಎಂದರೆ “ಅತ್ಯಂತ ವಿಷ” ಅಲ್ಲ, ಮಾನವನಲ್ಲಿ ಕ್ಯಾನ್ಸರ್ ಸಂಬಂಧ ಸಾಬೀತಾಗಿದೆ” ಎಂಬ ವೈಜ್ಞಾನಿಕ ಅರ್ಥ ಮಾತ್ರ. ಮರುವರ್ಗೀಕರಣ ಸಾಧ್ಯತೆ ವಿಜ್ಞಾನಾತ್ಮಕವಾಗಿ ಅತ್ಯಂತ ಕಠಿಣವಾದ ಪ್ರಕ್ರಿಯೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror