ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳು ರೋಗ ನಿರೋಧಕ ಗುಣ ಇರುವ ಮರಗಳ ಗುರುತಿಸುವಿಕೆ ಕಾರ್ಯ ಆರಂಭಿಸಿದ್ದಾರೆ.
ಅಡಿಕೆ ಹಳದಿ ಎಲೆರೋಗಕ್ಕೆ ಸುಳ್ಯ ತಾಲೂಕಿನ ಸಂಪಾಜೆ ಹಾಗೂ ಕೊಡಗು ಜಿಲ್ಲೆಯ ಚೆಂಬು ಪ್ರದೇಶವು ಹಾಟ್‌ಸ್ಫಾಟ್ ಎಂದು ಗುರುತಿಸಲಾಗಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಈಗ ಮರಗಳ ಗುರುತಿಸುವಿಕೆ ಕಾರ್ಯ ಆರಂಭವಾಗಿದೆ. ಈ ಮರಗಳ ಗುರುತಿಸುವಿಕೆ ಈಗ ವಿಜ್ಞಾನಿಗಳ ಹಾಗೂ ಕೃಷಿಕರ ಪಾಲಿಗೆ ಸವಾಲಿನ ಕೆಲಸವೂ ಹೌದು. ಈ ಹಂತದಲ್ಲಿ ಲೋಪವಾದರೆ ಇಡೀ ಅಧ್ಯಯನ ಹಾಗೂ ರೋಗ ನಿರೋಧಕ ಗಿಡ ಅಭಿವೃದ್ಧಿ ಮೇಲೆಯೂ ಪರಿಣಾಮವಾಗಬಹುದು. ಅಡಿಕೆ ಮರದಲ್ಲಿ ಹಳದಿ ಎಲೆ ರೋಗ ನಿರೋಧಕ ಗುಣ ಇದೆಯೇ ಎಂದು ಪರೀಕ್ಷಿಸುವ ಯಾವುದೇ ವಿಧಾನ ಸದ್ಯಕ್ಕೆ ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಳದಿ ಎಲೆ ರೋಗ ನಿರೋಧಕ ಶಕ್ತಿ ಇರುವ ಮರ ಎಂದು ಗುರುತಿಸುವ ವಿಧಾನ ಹೇಗೆ ? ಇದಕ್ಕಾಗಿ ಒಂದಷ್ಟು ಮಾನದಂಡಗಳನ್ನು ವಿಜ್ಞಾನಿಗಳು ಹಾಕಿಕೊಂಡಿದ್ದಾರೆ. ಅದಾದ ಬಳಿಕ ಪ್ರಯೋಗಾಲಯದಲ್ಲಿ ಈ ಬಗ್ಗೆ ಅಧ್ಯಯನ ನಡೆದು ರೋಗ ಇಲ್ಲದೇ ಇರುವುದರ ಬಗ್ಗೆ ಖಚಿತ ಪಡಿಸಿಕೊಳ್ಳಲಾಗುತ್ತದೆ. ಸದ್ಯ ಮರ ಗುರುತಿಸಿಕೊಳ್ಳಲು ವಿಜ್ಞಾನಿಗಳಿ ಕೆಲವೊಂದು ಪಟ್ಟಿ ಮಾಡಿದ್ದಾರೆ.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…