ಅಡಿಕೆ ಇಳುವರಿ ಕುಸಿತ | ಮಿಶ್ರ ತೋಟಗಳಲ್ಲಿ ಹೆಚ್ಚು ಸಮಸ್ಯೆ…! ಯಾವ ತಳಿ ಆಯ್ಕೆ ಮಾಡಿದ್ದಾರೆ…? | ಅಡಿಕೆ ಇಳುವರಿ ಕುಸಿತದ ವಿಶ್ಲೇಷಣೆ

March 13, 2026
10:48 AM
ಈ ವರ್ಷ ಅಡಿಕೆ ಇಳುವರಿ ಕುಸಿತವಾಗಿದೆ ಎಂದು ಶೇ.71 ರಷ್ಟು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಳೆಯ ಮತ್ತು ಮಿಶ್ರ ತೋಟಗಳಲ್ಲಿ ಸಮಸ್ಯೆ ಹೆಚ್ಚು ಕಂಡುಬಂದಿದೆ. ಸುಧಾರಿತ ತಳಿ ಮತ್ತು ಮಿಶ್ರ ಕೃಷಿ ಪದ್ಧತಿಗಳ ಕಡೆಗೆ ರೈತರ ತಿರುಗುವಿಕೆ ಮುಂದಿನ ದಿನಗಳಲ್ಲಿ ಸ್ಥಿರತೆಗೆ ದಾರಿ ಮಾಡಬಹುದು.

ಕರಾವಳಿ–ಮಲೆನಾಡು ಕೃಷಿ ಆರ್ಥಿಕತೆಯ ಪ್ರಮುಖ ಬೆಳೆ ಅಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಪ್ರಶ್ನೆ, ಇಳುವರಿ ಕುಸಿತವೇ? ವೆಚ್ಚ ಏರಿಕೆಯೇ? ಮಾರುಕಟ್ಟೆ ಅಸ್ಥಿರತೆಯೇ? ಅಥವಾ ಇದು ಕೇವಲ ತಾತ್ಕಾಲಿಕ ಹಂತವೇ?

ಈ ಹಿನ್ನೆಲೆಗಳಲ್ಲಿ “ದ ರೂರಲ್ ಮಿರರ್.ಕಾಂ” ನಡೆಸಿದ ರೈತರ ಸರ್ವೆಯ ಮಾಹಿತಿಯನ್ನು ಆಧರಿಸಿ ಈ ವಿಶೇಷ ವರದಿ ಅಡಿಕೆ ಕೃಷಿಯ ಪ್ರಸ್ತುತ ಸ್ಥಿತಿಯನ್ನು ವಿಶ್ಲೇಷಿಸುತ್ತದೆ.

ಇಳುವರಿ ಕುಸಿತ ಸ್ಪಷ್ಟ — ರೈತರ ಅಭಿಪ್ರಾಯ ಏನು ಹೇಳುತ್ತದೆ? : ಸರ್ವೆಯಲ್ಲಿ ಭಾಗವಹಿಸಿದ ರೈತರಲ್ಲಿ ಸುಮಾರು ಶೇ.71 ರಷ್ಟು ಮಂದಿ ಈ ವರ್ಷ ಇಳುವರಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಕುಸಿತದ ಪ್ರಮಾಣವೂ ಸಾಮಾನ್ಯ ಮಟ್ಟದಲ್ಲಿಲ್ಲ. ಹೆಚ್ಚಿನ ರೈತರು ಶೇ.25 ರಿಂದ ಶೇ.50ರವರೆಗೆ ಇಳುವರಿ ಕುಸಿತ ಕಂಡುಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಕೆಲವು ತೋಟಗಳಲ್ಲಿ ಅರ್ಧಕ್ಕಿಂತ ಹೆಚ್ಚು ಉತ್ಪಾದನೆ ನಷ್ಟ ಕಂಡುಬಂದಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.  ಇದು ಕೇವಲ ವೈಯಕ್ತಿಕ ಅನುಭವವಲ್ಲ — ಸಮಗ್ರ ಕೃಷಿ ಪರಿಸ್ಥಿತಿಯ ಬದಲಾವಣೆಯನ್ನು ಸೂಚಿಸುವ ಸೂಚಕವಾಗಿದೆ.

ಯಾವ ಕಾರಣಗಳು ಹೆಚ್ಚು ಪರಿಣಾಮ ಬೀರಿವೆ? :  ಸರ್ವೆಯ ಪ್ರಕಾರ ಹೆಚ್ಚಿನ ತೋಟಗಳು ಮಿಶ್ರ ಹಾಗೂ ಹಳೆಯ ತೋಟಗಳು ಆಗಿವೆ. ರೈತರು ಸೂಚಿಸಿದ ಪ್ರಮುಖ ಕಾರಣಗಳು, ಮಣ್ಣಿನ ಶಕ್ತಿ ಕುಸಿತ , ಹವಾಮಾನ ಅಸ್ಥಿರತೆ, ರೋಗಬಾಧೆ ಪ್ರಮುಖ ಕಾರಣ ನೀಡಿದ್ದಾರೆ. ನಿರ್ವಹಣಾ ವೆಚ್ಚ ಏರಿಕೆ, ಗೊಬ್ಬರ ಬಳಕೆ ಕಡಿಮೆಯಾಗಿರುವುದು ಕೂಡಾ ಕಾರಣ ಇದೆ. ಆದರೆ, ಹೊಸ ತೋಟಗಳಲ್ಲಿ ಉತ್ಪಾದನೆ ಸ್ಥಿರವಾಗಿರುವ ಉದಾಹರಣೆಗಳು ಕಂಡುಬಂದರೂ, ಒಟ್ಟಾರೆಯಾಗಿ ಇಳುವರಿ ಕುಸಿತ ಸ್ಪಷ್ಟವಾಗಿ ಗೋಚರಿಸಿದೆ.

ತೋಟಗಳ ಸ್ವರೂಪ — ಸರ್ವೆಯ ಪ್ರಮುಖ ಕಂಡುಬಂದ ಅಂಶ :  ಸಮೀಕ್ಷೆಯ ಪ್ರಕಾರ, ಮಿಶ್ರ ತೋಟಗಳು — 68, ಹಳೆಯ ತೋಟಗಳು — 48, ಹೊಸ ತೋಟಗಳು — 6.   ಹಳೆಯ ಮತ್ತು ಮಿಶ್ರ ತೋಟಗಳಲ್ಲಿ ಉತ್ಪಾದನಾ ಸಮಸ್ಯೆ ಹೆಚ್ಚು ಕಂಡುಬಂದಿದೆ. ವಯಸ್ಸಾದ ಮರಗಳಲ್ಲಿ ಇಳುವರಿ ಕುಸಿತವಾಗುವುದು ಒಟ್ಟಾರೆ ಕುಸಿತಕ್ಕೆ ಪರೋಕ್ಷ ಕಾರಣವಾಗಬಹುದು.  ಇದು ಮುಂದಿನ ದಿನಗಳಲ್ಲಿ ತೋಟ ಪುನರುಜ್ಜೀವನ (Replanting / Rejuvenation) ಅಗತ್ಯವನ್ನು ಸೂಚಿಸುತ್ತದೆ.

ತಳಿ ಆಯ್ಕೆ ಮತ್ತು ಕೃಷಿ ಪದ್ಧತಿಗಳಲ್ಲಿ ಬದಲಾವಣೆ : ಇಂದಿಗೂ ಹೆಚ್ಚಿನ ರೈತರು ಸಾಂಪ್ರದಾಯಿಕ ‘ಲೋಕಲ್’ ತಳಿಗಳ ಮೇಲೆಯೇ ನಂಬಿಕೆ ಇಟ್ಟಿದ್ದಾರೆ. ಆದರೆ ನಿಧಾನವಾಗಿ ರೈತರ ಗಮನ ಸುಧಾರಿತ ತಳಿಗಳಾದ, ಮಂಗಳ, ಮೋಹಿತ್ ನಗರ ಕಡೆಗೂ ಸೆಳೆಯುತ್ತಿದೆ.  ಶೇ.55.7 ರಷ್ಟು ರೈತರು ಮಿಶ್ರ ತೋಟ ಪದ್ಧತಿ ಅನುಸರಿಸುತ್ತಿದ್ದಾರೆ. ಅಡಿಕೆಯ ಜೊತೆಗೆ ಕಾಳು ಮೆಣಸು, ಕೋಕೋ, ಬಾಳೆ ಮುಂತಾದ ಉಪಬೆಳೆಗಳನ್ನು ಬೆಳೆಸಿ ಆದಾಯದ ಮೂಲವನ್ನು ವಿಸ್ತರಿಸುವ ಪ್ರಯತ್ನವೂ ಹೆಚ್ಚಾಗಿದೆ.

ಇದು ಸಂಕಷ್ಟವೇ? ಅಥವಾ ತಾತ್ಕಾಲಿಕ ಹಂತವೇ? : ಈ ಸರ್ವೆಯ ಅಂಶಗಳನ್ನು ನೋಡಿದರೆ ಅಡಿಕೆ ಕೃಷಿಯಲ್ಲಿ ಎದುರಾಗುತ್ತಿರುವುದು ಒಂದು ಏಕಕಾಲಿಕ ಕಾರಣವಲ್ಲ, ವಿವಿಧ ಕಾರಣಗಳನ್ನು ಕಾಣಬಹುದು. ಅದರಲ್ಲಿ  ಹವಾಮಾನ ಬದಲಾವಣೆ,  ಮಣ್ಣಿನ ಪೋಷಕಾಂಶ ಕುಸಿತ,  ಹಳೆಯ ತೋಟಗಳ ಪ್ರಮಾಣ ಹೆಚ್ಚಳ, ನಿರ್ವಹಣಾ ಕೊರತೆಗಳ ಒಟ್ಟಾರೆ ಪರಿಣಾಮವಾಗಿ ಇಳುವರಿ ಕುಸಿತ ಕಂಡುಬರುತ್ತಿದೆ.

ಆದರೆ ಹೊಸ ತೋಟಗಳಲ್ಲಿ ಸ್ಥಿರ ಉತ್ಪಾದನೆ ಕಂಡುಬರುತ್ತಿರುವುದು ಹಾಗೂ ಸುಧಾರಿತ ತಳಿ ಮತ್ತು ಮಿಶ್ರ ಕೃಷಿ ಪದ್ಧತಿಗಳ ಕಡೆಗೆ ರೈತರ ತಿರುಗುವಿಕೆಯು  ಒಂದು ಪರಿವರ್ತನೆಯ ಹಂತವಾಗಿರಬಹುದು ಎಂಬ ಸೂಚನೆಯನ್ನು ನೀಡುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

A farmer survey by The Rural Mirror indicates that nearly 71% of arecanut growers have reported a significant yield decline this year, with losses ranging from 25% to over 50% in some plantations. The major reasons include ageing plantations, soil fertility decline, climate instability, pest and disease pressure, and rising maintenance costs. While traditional local varieties still dominate, farmers are slowly adopting improved varieties like Mangala and Mohitnagar and shifting towards mixed cropping systems. The trend suggests that the current situation may represent a transitional phase rather than a permanent crisis.

ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ | ರೋಗ ನಿರ್ವಹಣೆ ತಪ್ಪಿದರೆ ಇಳುವರಿ ಕುಸಿತ..! – ಅಡಿಕೆ ಸಮೀಕ್ಷೆ ವರದಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು
March 13, 2026
6:58 AM
by: ಮಿರರ್‌ ಡೆಸ್ಕ್
ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ
March 13, 2026
6:48 AM
by: ಮಿರರ್‌ ಡೆಸ್ಕ್
ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ
March 12, 2026
9:26 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ
March 12, 2026
9:11 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror