MIRROR FOCUS

ಅಡಿಕೆ ಮಾರುಕಟ್ಟೆ | ಮತ್ತೆ ಅಡಿಕೆ ಆಮದು ಪತ್ತೆಯಾಯ್ತು | 2.74 ಕೋಟಿ ರೂ. ಮೌಲ್ಯದ ಅಡಿಕೆ ವಶ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಡಿಕೆ ಧಾರಣೆ ಸದ್ಯ ಸ್ಥಿರವಾಗಿದೆ. ಅಡಿಕೆಗೆ ಬೇಡಿಕೆ ಈಗಲೂ ಇದೆ. ಆದರೆ ಅಡಿಕೆ ಆಮದು ಪ್ರಯತ್ನ ನಡೆಯುತ್ತಲೇ ಇದೆ. ಇದಕ್ಕೆ ಬ್ರೇಕ್‌ ಬೀಳುತ್ತಿದೆ. ಇದೀಗ ಮತ್ತೆ ಅಸ್ಸಾಂ ಮೂಲಕ ದಾಖಲೆ ರಹಿತವಾಗಿ ಬಂದ 72  ಮೆಟ್ರಿಕ್‌ ಟನ್‌ ಅಡಿಕೆಯನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ. ಇದರ ಮೌಲ್ಯ ಸುಮಾರು 2.74 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
Advertisement
Advertisement

ಮ್ಯಾನ್ಮಾರ್‌ ನಿಂದ ಅಡಿಕೆಯನ್ನು ದಾಖಲೆ ರಹಿತವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದಿದೆ. ಗುಹವಾಟಿಯ ಖಾನಾಪರಾ ಪ್ರದೇಶದಲ್ಲಿ  3 ಲಾರಿಗಳನ್ನು ವಶಪಡಿಕೊಂಡ ಬಳಿಕ ನಡೆಸಿದ ತನಿಖೆಯಿಂದ  ಸುಮಾರು 2.76 ಕೋಟಿ ರೂ ಗಳ ಅಡಿಕೆಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಮಿಜೋರಾಂನಿಂದ  ಅಡಿಕೆಯನ್ನು  ಪಶ್ಚಿಮ ಬಂಗಾಳಕ್ಕೆ ಸಾಗಾಟ ಮಾಡಿ ಅಲ್ಲಿಂದ ನಂತರ ವಿವಿದೆಡೆ ಸರಬರಾಜು ಮಾಡುವ ಉದ್ದೇಶ ಹೊಂದಲಾಗಿತ್ತು. ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಅಡಿಕೆ ಸಾಗಣೆಯಾಗುತ್ತಿದೆ. ಹೀಗಾಗಿ ಈಗ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ಇರಿಸಿ ತನಿಖೆ ಮಾಡುತ್ತಿದ್ದು ಅಡಿಕೆ ಅಕ್ರಮವಾಗಿ ದೇಶದೊಳಗೆ ನುಸುಳದಂತೆ ಕ್ರಮ ಕೈಗೊಂಡಿದ್ದಾರೆ.

ಅಡಿಕೆಗೆ ಬೇಡಿಕೆ ಇದೆ
ಇದುವರೆಗೆ ಅಡಿಕೆ ಅಕ್ರಮವಾಗಿ ಸಾಗಾಟದ ಅನೇಕ ಪ್ರಕರಣಗಳು ದಾಖಲಾಗಿದೆ. ಸೂಕ್ತ ಕ್ರಮಗಳಿಂದಾಗಿ ಅಡಿಕೆ ಧಾರಣೆ ಇಳಿಕೆಯಾಗದಂತೆ  ಅಡಿಕೆ ಬೆಳೆಗಾರರಿಗೆ ತೀರಾ ಪ್ರಯೋಜನವಾಗಿದೆ. ಅಡಿಕೆಗೆ ಈಗಲೂ ಉತ್ತರ ಭಾರತದಲ್ಲಿ  ಬೇಡಿಕೆ ವ್ಯಕ್ತವಾಗುತ್ತಿದೆ. ಆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅಡಿಕೆ ವಿರುದ್ಧ ಅಪಪ್ರಚಾರವೂ ಸಾಕಷ್ಟು ನಡೆಯುತ್ತಿದೆ ಎಂದು ಅಡಿಕೆ ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಸದ್ಯಕ್ಕೆ ಅಡಿಕೆ ಧಾರಣೆ ಬಗ್ಗೆ ಯಾವುದೇ ಆತಂಕ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ

ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ  ಸುಮಾರು…

46 seconds ago

ಎತ್ತಿನಹೊಳೆ ಯೋಜನೆಗೆ ಅತ್ಯಂತ ಎತ್ತರದ ಮೇಲ್ಗಾಲುವೆ | ತುಮಕೂರು ಜಿಲ್ಲೆ ಚೇಳೂರು ಬಳಿ ನಿರ್ಮಾಣ

ಕೋಲಾರ– ಚಿಕ್ಕಬಳ್ಳಾಪುರ ಸೇರಿದಂತೆ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಎತ್ತಿನಹೊಳೆ…

7 minutes ago

ಫಸಲ್ ಭೀಮಾ ಯೋಜನೆ ಹಣ ಬಿಡುಗಡೆ | ಕಲಬುರಗಿ ಜಿಲ್ಲೆಗೆ ಹೆಚ್ಚಿನ ಬೆಳೆ ವಿಮೆ

ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಡಿ ಅತಿ ಹೆಚ್ಚು ಬೆಳೆ ವಿಮೆ ಪಡೆದ…

5 hours ago

ಲಡಾಖ್‌ನ ದ್ರಾಸುದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ| ವೀರಯೋಧರಿಗೆ ಪಾದಯಾತ್ರೆ ಮೂಲಕ ಗೌರವ

ಲಡಾಖ್‌ನ ದ್ರಾಸುದಲ್ಲಿಂದು  26ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ   ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ…

6 hours ago

ಬದುಕಿಗೆ ಧರ್ಮದ ತಳಹದಿ ಅಗತ್ಯ : ರಾಘವೇಶ್ವರ ಶ್ರೀ

ಧರ್ಮ ಎನ್ನುವ ತಳಹದಿಯಲ್ಲಿ ಬದುಕು ನಿಂತಿದೆ. ಅರ್ಥ ಮತ್ತು ಕಾಮನೆಗಳಿಗೆ ಧರ್ಮವೇ ತಳಹದಿ.…

7 hours ago

ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಜುಲೈ 27 ರಂದು ಮಧ್ಯಪ್ರದೇಶ ದಾಟಿ ರಾಜಸ್ಥಾನ ಗಡಿ…

10 hours ago