ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಚೇತರಿಕೆ ಕಂಡುಬಂದಿದೆ. ಕಳೆದ ಸೋಮವಾರದ ನಂತರ ಮಾರುಕಟ್ಟೆಯಲ್ಲಿ ಉತ್ಸಾಹ ಕಂಡುಬಂದಿದೆ. ಆದರೆ ಹೊಸ ಅಡಿಕೆಗೆ ಮಾತ್ರಾ ಸದ್ಯ ಬೇಡಿಕೆಯ ಲಕ್ಷಣಗಳು ಇವೆ. ಚಾಲಿ ಅಡಿಕೆಯಲ್ಲಿ ಹಳೆ ಅಡಿಕೆ ಹಾಗೂ ಹೊಸ ಅಡಿಕೆಯ ನಡುವೆ ಹೆಚ್ಚಿನ ವ್ಯತ್ಯಾಸ ಇದ್ದು, ಈ ಅಂತರ ಕಡಿಮೆಯಾಗುವ ಸಾಧ್ಯತೆ ಇದೆ. ಈ ನಡುವೆಯೇ ಅಡಿಕೆ ಆಮದು ಪ್ರಯತ್ನ ನಡೆಯುತ್ತಿದೆ. ಇದೀಗ ಅಕ್ರಮ ಅಡಿಕೆ ತಡೆಯಾಗಿದ್ದು 1.06 ಕೋಟಿ ಮೌಲ್ಯದ ಅಡಿಕೆಯಲ್ಲಿ ಅಸ್ಸಾಂ ಗಡಿಯಲ್ಲಿ ಅಸ್ಸಾಂ ರೈಫಲ್ಸ್ ವಶಕ್ಕೆ ಪಡೆದಿದ್ದಾರೆ.
ಕಳ್ಳ ದಾರಿಯ ಮೂಲಕ ಸುಮಾರು 1012 ಚೀಲ ಅಡಿಕೆಯನ್ನು ಭಾರತದೊಳಕ್ಕೆ ತರುವ ಪ್ರಯತ್ನ ನಡೆಯುತ್ತಿತ್ತು. ಈ ಸಂದರ್ಭ ಅಸ್ಸಾಂ ರೈಪಲ್ಸ್ ಅಡಿಕೆಯನ್ನು ವಶಪಡಿಸಿಕೊಂಡಿದೆ. ತನಿಖೆಯನ್ನು ಮುಂದುವರಿಸಿದ್ದಾರೆ.
ಭಾರತದಲ್ಲಿ ಅಡಿಕೆಯ ಕೊರತೆ ಇದ್ದರೂ ಮಾರುಕಟ್ಟೆ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಅಡಿಕೆಯ ಕೊರತೆ ಹಾಗೂ ಅಡಿಕೆ ದಾಸ್ತಾನಿನಲ್ಲೂ ವ್ಯತ್ಯಾಸ ಇರುವುದರಿಂದ ಧಾರಣೆಯಲ್ಲಿ ಇಳಿಕೆಯಾಗಿಲ್ಲ. ಇದೀಗ ಅಡಿಕೆ ದಾಸ್ತಾನು ಕಡೆಗೆ ಅಡಿಕೆ ವ್ಯಾಪಾರಿಗಳು ಮನಸ್ಸು ಮಾಡಿದ್ದು, ಈಗ ಹೊಸ ಅಡಿಕೆ ದಾಸ್ತಾನು ಮಾಡಲುವ ಮೂಲಕ ಮುಂದಿನ ಎರಡು ತಿಂಗಳಲ್ಲಿ ಹಳೆ ಅಡಿಕೆ ಧಾರಣೆಗೆ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ ಎನ್ನುವುದು ಮಾರುಕಟ್ಟೆ ಮಾಹಿತಿ. ಸದ್ಯ ಹೊಸ ಅಡಿಕೆ ಮಾರುಕಟ್ಟೆ ಏರುಗತಿಯಲ್ಲಿದೆ.
ರಾಜ್ಯದ ಕೆಲವು ಕಡೆ ಮಳೆ ಕಡಿಮೆ ಇದ್ದು, ಮುಂದಿನ 7 ದಿನಗಳ ಹವಾಮಾನ…
ಪ್ರೇಮ ಸಂಬಂಧವು ಭಾವನಾತ್ಮಕ ಸಾಮರಸ್ಯ, ಪರಸ್ಪರ ಗೌರವ ಮತ್ತು ವಿಶ್ವಾಸದ ಮೇಲೆ ನಿಂತಿದೆ.…
ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ…
ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…
ಹಲಸಿನ ಬೇಳೆ ಸೂಪ್ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…
ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…