Advertisement
MIRROR FOCUS

ಕಾಸರಗೋಡಿಗೂ ಕಾಲಿಟ್ಟಿತೇ ಅಡಿಕೆ ಹಳದಿ ಎಲೆರೋಗ ? |

Share

ರಾಜ್ಯದ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಹಳದಿ ಎಲೆ ರೋಗವು ಈಗ ನೆರೆಯ ಕಾಸರಗೋಡು ಜಿಲ್ಲೆಯಲ್ಲೂ ಕಾಣಿಸಿಕೊಂಡಿದೆಯೇ ಎಂಬ ಆತಂಕ ಅಲ್ಲಿನ ಕೃಷಿಕರನ್ನು ಕಾಡುತ್ತಿದೆ. ಕುಂಬಳೆ ಸಮೀಪದ ಕೃಷಿಕರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಸುಳ್ಯ ,ಪುತ್ತೂರು ತಾಲೂಕಿನ ಅಡಿಕೆ ತೋಟಗಳನ್ನು ಆಕ್ರಮಿಸಿಕೊಂಡ ಅಡಿಕೆಯ ಹಳದಿ ಎಲೆ ರೋಗ ಇದೀಗ ಕಾಸರಗೋಡು ತಾಲೂಕಿನ ತೋಟಗಳಿಗೂ ವ್ಯಾಪಿಸಿದೆಯೇ ಎಂಬ ಸಂದೇಹ ಉಂಟಾಗಿದೆ.ಕಾಸರಗೋಡು ತಾಲೂಕಿನ ಅಡೂರು,ಕುಂಬಳೆ ,ಮಧೂರು ಪ್ರದೇಶಗಳ ಕೆಲವು ತೋಟಗಳಲ್ಲಿ ಅಡಿಕೆ ಸೋಗೆ ಹಳದಿಯಾಗಿರುವುದನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು  ಕೃಷಿಕರು ಆತಂಕ ಪಡುತ್ತಿದ್ದಾರೆ.

ಕುಂಬಳೆ ಸಮೀಪದ ಎಡನಾಡು ಬಳಿಯ ಕೃಷಿಕರೊಬ್ಬರ ತೋಟದಲ್ಲಿ ಕಳೆದ ಕೆಲವು ಸಮಯಗಳಿಂದ ಅಡಿಕೆ ಮರದ ಸೋಗೆ ಹಳದಿಯಾಗಿತ್ತು. ಇದಕ್ಕೆ ವಿಜ್ಞಾನಿಗಳ ಸಲಹೆ ಪಡೆದು ಸೂಕ್ಷ್ಮಪೋಷಕಾಂಶಗಳನ್ನು ಬಳಕೆ ಮಾಡಿದ್ದಾರೆ. ಅದರ ಜೊತೆಗೆ ಮೆಗ್ನೀಷಿಯಂ ಸಲ್ಫೇಟ್ ಮತ್ತು ಡೊಲೋಮೈಟ್ ಕೂಡಾ ಬಳಕೆ ಮಾಡಿದ್ದಾರೆ. ಅದಾದ ಬಳಿಕ ಅಡಿಕೆ ಮರದ ಸೋಗೆ ಹಸಿರಾದರೂ ಇದೀಗ ಮತ್ತೆ ಹಳದಿ ಆಗುವುದಕ್ಕೆ ಕಾರಣವೇನು ಎಂದು ತಿಳಿದಿಲ್ಲ ಎನ್ನುತ್ತಾರೆ ಸ್ಥಳೀಯ ಕೃಷಿಕರು. ಕೆಲವು ಬಾರಿ ಅಡಿಕೆ ಮರದ ಸೋಗೆ ಹಳದಿಯಾಗುವುದಕ್ಕೆ ಹಳದಿ ಎಲೆರೋಗವೇ ಕಾರಣ ಆಗಿರುವುದಿಲ್ಲ. ಪೋಷಕಾಂಶಗಳ ಕೊರತೆಯೂ ಕಾರಣವಾಗಿರುತ್ತದೆ.ಮೆಗ್ನೀಷಿಯಂ ಕೊರತೆ ಲಕ್ಷಣವೂ ಹಳದಿ ಎಲೆರೋಗದ ಲಕ್ಷಣಗಳೂ ಹೆಚ್ಚೂ ಕಡಿಮೆ ಒಂದೇ ರೀತಿ ಇರುತ್ತದೆ. ಹೀಗಾಗಿ ಸೋಗೆ ಹಳದಿಯಾದ ತಕ್ಷಣವೇ ಹಳದಿ ಎಲೆರೋಗ ಎಂದು ಕೃಷಿಕರು ಭಾವಿಸಬೇಕಾಗಿಲ್ಲ ಎಂದು ಈ ಹಿಂದೆ ವಿಜ್ಞಾನಿಗಳು ಹೇಳಿದ್ದರು. ಆದರೆ ಕಾಸರಗೋಡಿನ ಕುಂಬಳೆಯ  ಎಡನಾಡಿನ ಈ ಪ್ರದೇಶದಲ್ಲಿ ಮತ್ತೆ ಹಳದಿಯಾಗಿರುವುದು  ಈಗ ಕೃಷಿಕರ ಆತಂಕಕ್ಕೆ ಕಾರಣ.

ಅಡಿಕೆ ಹಳದಿ ಎಲೆರೋಗವು ದ ಕ ಜಿಲ್ಲೆ ಮಾತ್ರವಲ್ಲ ಶೃಂಗೇರಿ, ಕೊಪ್ಪ ಮೊದಲಾದ ಕಡೆಗಳಲ್ಲಿ ಕಂಡುಬಂದಿತ್ತು. ಕೇರಳದಲ್ಲಿ ಆರಂಭವಾದ ಈ ರೋಗವು ವ್ಯಾಪಕವಾಗಿತ್ತು. ಈಗ ಸಂಪಾಜೆ ಸೇರಿದಂತೆ ದ ಕ ಜಿಲ್ಲೆಯ ಹಲವು ಕಡೆ ವ್ಯಾಪಿಸಿದೆ. ಕಾಸರಗೋಡು ಜಿಲ್ಲೆಯ ಕುಂಬಳೆ ಪ್ರದೇಶದಲ್ಲಿ ಅಡಿಕೆ ಸೋಗೆ ಏಕೆ  ಹಳದಿಯಾಗುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುವುದು  ಅಗತ್ಯವಿದೆ.
– ರಮೇಶ್‌ ದೇಲಂಪಾಡಿ, ಕೃಷಿಕರು, ಮರ್ಕಂಜ, ಸುಳ್ಯ

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

10 hours ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

1 day ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

2 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

2 days ago