ಅಡುಗೆ ಏನು ಮಹಾ. ಅನ್ನ ಸಾರು ಮಾಡಿ ಊಟ ಮಾಡಲು ಎಷ್ಟು ಹೊತ್ತು ಬೇಕಾಪ್ಪಾ ? ಎಂದು ಕೇವಲವಾಗಿ ಮಾತಾಡುವವರು ಕಮ್ಮಿ ಇಲ್ಲ. ಆದರೆ ಅನ್ನ ಸರಿಯಾಗಿ ಬೆಂದರೆ ರುಚಿ, ಇಲ್ಲವಾದರೆ ಅಜೀರ್ಣವಾದೀತು….!
ಅವಸರದವರಿಗೆ ಬೆಳ್ತಿಗೆ ಅನ್ನವೇ ಸೂಕ್ತ. ಅದು ಕುಕ್ಕರ್ ಲ್ಲಿ ಇಟ್ಟರಂತೂ ಹತ್ತಿಪ್ಪತ್ತು ನಿಮಿಷದಲ್ಲಿ ತಯಾರು. ಆದರೆ ತೆಳಿ ಬಗ್ಗಿಸಿ ಮಾಡುವ ಅನ್ನದ ರುಚಿಯೂ , ಕುಕ್ಕರಿನಲ್ಲಿ ಬೇಯಿಸಿದ ಅನ್ನದ ಸ್ವಾದಕ್ಕೂ ವ್ಯತ್ಯಾಸಗಳಿವೆ. ಕುದಿಯುವ ನೀರಿಗೆ ತೊಳೆದ ಅಕ್ಕಿ ಹಾಕಿ ಮಡಿಕೆಯಲ್ಲಿ ಬೇಯಿಸಿ ಬಗ್ಗಿಸಿದರೆ ವಾವ್ ಏನು ರುಚಿ.ಅನ್ನ ಬೇಯುವಾಗ ಇಡೀ ಮನೆ ಪರಿಮಳ. ಅದೂ ಮನೆಯ ಗದ್ದೆಯಲ್ಲಿ ಬೆಳೆಸಿದ ಭತ್ತದ ಅಕ್ಕಿಯಾದರೆ ವಿಶೇಷ. ಹಿಂದೆಲ್ಲಾ ಉಪ್ಪಿಟ್ಟು ಮಾಡಲೆಂದೇ ಒಂದು ಗದ್ದೆಯಲ್ಲಿ ಗಂಧಸಾಲೆ ಭತ್ತ ಬೆಳೆಸುತ್ತಿದ್ದರಂತೆ. ಇದು ಅತ್ತೆಯವರ ಗತಕಾಲದ ನೆನಪುಗಳು. ಅವರು ಹಾಗೆ ನೆನಪು ಮಾಡಿ ಕೊಂಡರಲ್ಲಾ ಅಂತ ನಮ್ಮ ಯಜಮಾನರು ಗಂಧಸಾಲೆ ಅಕ್ಕಿ ಉಪ್ಪಿಟ್ಟು ಮಾಡಲೆಂದೇ ತಂದರು. ಅದನ್ನು ತೊಳೆಯುವಾಗಲೇ ಘಮಘಮ. ಸ್ವಲ್ಪ ನೀರು ಆರಲಿ ಎಂದು ಪ್ಯಾನ್ ಅಡಿಯಲ್ಲಿ ಆರಲು ಬಿಟ್ಟೆ .ಇಡೀ ಮನೆ ಪರಿಮಳ ಬರಲಾರಂಭಿಸಿತು. ಅತ್ತೆಯವರಿಗೂ ಹಳೆಯ ನೆನಪುಗಳು ಕಾಡಲಾರಂಭಿಸಿತು.
ಮರು ದಿನ ಬೆಳಿಗ್ಗೆ ಇವರು ಕೇಳ್ತಾರೆ ಅಲ್ಲಾ ನಿನ್ನೆ ಅಕ್ಕಿಯೆಲ್ಲಾ ತರಿಸಿದೆ, ಅದರ ಉಪ್ಪಿಟ್ಟು ಯಾಕೆ ಮಾಡಲಿಲ್ಲ ಅಂತ. ಓಹ್ ರಾಮ , ಬೆಳಿಗ್ಗೆ ತಿಂಡಿಗೆ ಮಾಡಿದ್ದಲ್ವಾ? ಮರೆತು ಹೋಯಿತಾ ಇಷ್ಟು ಬೇಗ . ಉಪ್ಪಿಟ್ಟು ಎಂತ ಪರಿಮಳವೂ ಇರಲಿಲ್ಲ, ಶುಂಠಿ, ಬೇವಿನ ಸೊಪ್ಪೇ ಭರ್ಜರಿ ಹಾಕಿ ಬಿಟ್ಯಾ ಅಂತ. ನನಗೂ ಹಾಗೇ ಅನ್ನಿಸಿತು. ಅಕ್ಕಿ ತೊಳೆಯುವಾಗ ಇದ್ದ ಪರಿಮಳ ಬೇಯಿಸುವಾಗ ಬರುತ್ತಿಲ್ಲವಲ್ಲಾ ಅಂತ. ಈ ಅಕ್ಕಿಯ ಕ್ರಮವೇ ಹಾಗೆಯಾ ಏನೋ ಅಂದು ಕೊಂಡೆ. ಆದರೆ ನಮ್ಮ ಗದ್ದೆಯಲ್ಲಿ ಬೆಳೆಯುತ್ತಿದ್ದ ಅಕ್ಕಿಯ ಉಪ್ಪಿಟ್ಟು ಮಾಡಿದರೆ ಇಡೀ ಮನೆ ಪರಿಮಳ ಬರುತ್ತಿತ್ತು. ಉಪ್ಪಿಟ್ಟಿನ ಮುಚ್ಚಳ ತೆಗೆದರೆ ಸಂಜೆಯಾದರೂ ಪರಿಮಳ ಹೋಗುತ್ತಿರಲಿಲ್ಲ. ಆದರೆ ಈ ಅಕ್ಕಿಯ ಉಪ್ಪಿಟ್ಟು ಹಾಗಿಲ್ಲವಲ್ಲ…..ಆ ಕಾಲವೇ ಚೆಂದ . ನಮ್ಮ ಆಹಾರದ ಹೆಚ್ಚಿನ ಭಾಗವನ್ನು ಮನೆಯಲ್ಲೇ ಬೆಳೆಯುತ್ತಿದ್ದೆವು. ಅಕ್ಕಿ, ಬೇಳೆ ತರಕಾರಿ, ಹಣ್ಣುಗಳು……. ಪೇಟೆಯಿಂದ ಎಲ್ಲೋ ಕೆಲವು ಸಾಮಾನುಗಳು ಮಾತ್ರ ತರುತ್ತಿದ್ದುದು.
ಆದರೆ ಈಗ ಮನೆಯಲ್ಲೇ ಬೆಳೆದ ಸೌತೆಯೂ ಕಹಿ, ಕುಂಬಳ, ಹೀರೆಕಾಯಿಯೂ ಕಹಿ. ಹಾಗಲಕಾಯದ್ದಾದರೆ ಗುಣವೇ ಕಹಿ. ಆದರೆ ಉಳಿದ ತರಕಾರಿಗಳ ಗುಣಧರ್ಮ ಬದಲಾದದ್ದಾದರೂ ಹ್ಯಾಗೆ ಯಾಕೇ.. !? ನಿಮ್ಮಲ್ಲಿ ಉತ್ತರವಿದ್ದರೆ ನನಗೂ ಹೇಳಿ ಆಯ್ತಾ!’.
“ದ ರೂರಲ್ ಮಿರರ್.ಕಾಂ” WhatsApp ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ..
ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ಅಂಚೆ ಇಲಾಖೆಯಿಂದ ಬೆಳೆಗಾರರಿಂದ ಗ್ರಾಹಕರು ನೇರ ಮಾವು ಮಾರಾಟ ಯಶಸ್ವೀ ಸೇವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು : ಗುಜ್ಜೆ 1 ಕಪ್ ಬೇಯಿಸಿ…
ಜಮ್ಮು- ಕಾಶ್ಮೀರದ ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…