ಮಳೆಗಾಲ ಅಂತಾ ಹೇಳ್ದು ಒಂದು ಖುಷಿಯ ಪದ ಯಾಕೆಂತಾ ಹೇಳಿರೆ ಜೂನ್ ತಿಂಗಳಿಂದ ಸುಮಾರ್ ಸೆಪ್ಟೆಂಬರ್, ಅಕ್ಟೋಬರ್ ವರೆಗೆ ಇದ್ದದೆ ಅಂತಾ ಹೇಳಕ್. ಮಳೆಗಾಲ ಅಂತಾ ಹೇಳ್ದು ಸಣ್ಣ ಸಣ್ಣ ಮಕ್ಕಳಿಗೆ ತುಂಬಾ ಖುಷಿಕೊಡುವಂತದ್. ಜೂನ್ ಲಿ ಶಾಲೆಗ ಸುರು ಆಗುವ ಹೊತ್ತು ಬೆಳಿಗ್ಗೆನೆ ಮಳೆ ಬಂದರೆ ಚಂಡಿ ಆಕಂಡ್ ಹೋಕೆ ಆದೆ ಅಂತಾ ಒಂದು ಮತ್ತೊಂದು ಹೇಳಕ್ಎಲ್ಲಾ ಕಡೆಗಲ್ಲಿ ಮಳೆ ಇದ್ದದೆ ಸಣ್ಣ ಸಣ್ಣ ಹಳ್ಳಗ ಎಲ್ಲಾ ಮುಳ್ಗಿದೆ ಹಂಗೆ ಶಾಲೆಗೆ ರಜೆನು ಸಿಕ್ಕಿದೆ ಅಂತಾ ತುಂಬಾ ಖುಷಿಪಟ್ಟವೆ. ಮಳೆಗಾಲ ಅಂತಾ ಹೇಳಿರೆ ಈಗದ ಮಕ್ಕಳಿಗೆ ರಜೆದೆ ನೆಂಪು ಬಾದು ಮನೆಲೇ ಕುದ್ ಕಂಡ್ ಬೀಜದ ಬೆಂಡ್ ಗಳ ತಿಂಬೊದು, ಕಣಿಗಲ್ಲಿ ಮೀನ್ ಹಿಡೆಕೆ ಆದೆ. ಎಸ್ಂಡ್ಗಳ ಹಿಡ್ದ್ ಕಿಚ್ಚಿ ಹಾಕಿ ತಿಂಬೊದು ಎಲ್ಲಾ ಮಕ್ಕಳಿಗೆ ಬಾರಿ ಖುಷಿ ಕೊಟ್ಟದೆ.
ವಿವರಣೆ : ಮಳೆಗಾಲಂತ ಹೇಳ್ದು ನಮ್ಮ ತುಳುನಾಡಿನವುಕ್ಕೆ ಹಬ್ಬ ಇದ್ದಂಗೆ ಯಾಕೆಂತಾ ಗೊತ್ತುಟ ಮಳೆಗಾಲಲಿ ಹಲ್ಸಿನ ಹಿಟ್ಟ್ಂತನೇ ಹೇಳುವೆ.ಅದ್ರಲ್ಲಿ ಮೂಡ್ ಹಿಟ್ಟ್ ಹಂಗೇ ಎಣ್ಣೆಲಿ ಹಲ್ಸಿನ ತೋಲೆ ಹಾಕಿ ಚಿಪ್ಸ್ ಮಾಡ್ದು, ಇಡ್ಲಿ ಮಾಡ್ದು ,ಮುಲ್ಕ ಮಾಡ್ದು ಎಲ್ಲಾ ಒಂದು ವಿಷೇಷವಾಗಿದ್ದದೇ ಅಂತಾ ಹೇಳಕ್.
ಮಳೆಗಾಲ ಕೆಲವರ ಪಾಲಿಗೆ ಶನಿ ಇದ್ದಂಗೆ ಅಂತಾ ಹೇಳಕ್ ಯಾಕೆಂತಾ ಹೇಳಿರೆ ಕೆಲವು “ಮಳೆ “ಬಾಕನ ನೀರ್ ಲಿ ಕೊಚ್ಚಿ ಹೋದವೆ .ಹಂಗೆ “ಗಾಳಿ” ಬಾಕನ ಮರಗ ಎಲ್ಲಾ ಬಿದ್ದ್ ಸತ್ತವೆ. ಇನ್ನೊಂದು ಉಟ್ಡು ಭಯಂಕರವಾದ್ ಸಿಡ್ಲ್ ಅದ್ ಯಾವುದರ ಮರಕ್ಕೆನ ಅಲ್ಲಾ ಕಾಲಿ ಇರುವ ಜಾಗಲಿ ಇರ್ಕನ ,ಕರೆಂಟ್ ಮುಟ್ಟಿಕಂಡ್ ಇದ್ದರೆ ಎಲ್ಲಾ ನಮ್ಮ ಜೀವ ತೆಗ್ದದೆ ಅಂತಾ ಹೇಳಕ್.
ಕೆಲವರ ಪಾಲಿಗೆ ದೇವ್ರು ಇದ್ದಂಗೆ ಅದ್ ಉತ್ತರ ಕರ್ನಾಟಕದ ಜನಗಳಿಗೆ ಅಂತಾ ಹೇಳಕ್ ಯಾಕೆ ಗೊತ್ತುಟ್ಟಾ ಅಲ್ಲಿಯಲ ಇಲ್ಲಿಯ ಹಂಗೆ ನೀರ್ ಇಲ್ಲೆ ಅಲ್ಲಿ ಭತ್ತ ಬೆಳೆವೆ ಜಾಸ್ತಿ ಇರ್ದು . ಆಚೆ ಮಳೆ ಬಾದೆ ಅಪ್ರೂಪ ಹಂಗೆ ಮಳೆ ಬಾಕನ ಒಮ್ಮೆ ಎಲ್ಲವುಕ್ಕು ಖುಷಿ ಆದೆ ನಮ್ಮ ಗದ್ದೆಗೆ ನೀರ್ ಸಿಕ್ಕಿತ್, ಇನ್ನೂ ಲಾಯಿಕ್ ಬೆಳೆ ಬೆಳ್ದದೆ ಅಂತಾ. ಹಂಗೇನೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆವಕ್ಕೆ ಮಳೆ ಬಂದರೆ ಅಡಿಕಿಗೆ ಎಲ್ಲಾ ರೋಗ ಹಿಡ್ದದೆ ಅಂತಾ ಮಂಡೆಬೆಚ್ಚಾ ಮತ್ತೆ ಇರುವ ಅಡಿಕೆನೆ ಅನೀಸ್ ಅದು ಕೂಡ ಹೋದರೇ ಮತ್ತೆ ಎಂತಾ ಉಟ್ಡು.ಬಿದ್ದ ಅಡಿಕೆ ಹೆಕ್ಕಿಕೆ ಕೂಡ ನಮ್ಮಲಿ ಯಾರ್ ಇಲ್ಲೆ . ಎಲ್ಲಾ ಕಣಿಲಿ ಬಿದ್ದ್ ಬೊಲ್ಲ ಹೋದೆ .
ಮಳೆ ಬಂದರೆ ಒಳ್ಳೆದ್ ಉಟ್ಟು ಕೆಟ್ಟದ್ ಉಟ್ಟು
# ಅನನ್ಯ. ಎಚ್, ಸುಬ್ರಹ್ಮಣ್ಯ.
ವಾರಣಾಸಿಯ ಸೆಳೆತ ಅಸಾಧ್ಯವಾದದ್ದು ಅಂತ ಅಲ್ಲೇ ನೆಲೆನಿಂತ ವಿದೇಶಿಗರೂ ಇದ್ದಾರಂತೆ.ತಮ್ಮ ಉಳಿದ ಜೀವಿತಾವಧಿ…
ನಮ್ಮ ಯೋಚನೆಗಳು, ಯೋಜನೆಗಳು , ನಿರ್ಧಾರಗಳೆಲ್ಲವೂ ಆಹಾರ, ನಮ್ಮ ಪರಿಸರದ ಪ್ರಭಾವದಿಂದ ತಪ್ಪಿಸಿ…
ಬಣ್ಣದ ಜೀವಿಗಳನ್ನು ಸೃಷ್ಟಿಸಿರುವ ಜಡವನ್ನೂ ಜೀವವನ್ನಾಗಿ ಪರಿವರ್ತಿಸಬಲ್ಲ ತಾಕತ್ತುಳ್ಳ ಪರಮಾತ್ಮನೇ ಅಲ್ವೇ ಪರಮಕಲಾವಿದ?
ಇಂದಿನ ಜಗತ್ತಿನಲ್ಲಿ ನಿರ್ದಿಷ್ಟ ಜೀವನ ದೃಷ್ಠಿಯನ್ನು ಹೊಂದಿರಲು ಸಾಧ್ಯವಿಲ್ಲ. ಅದು ಆಗಾಗ ಬದಲಾಗುವ…
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮೀನುಗಾರಿಕೆ ವಲಯದ ಪ್ರಗತಿ ಹಾಗೂ ಭವಿಷ್ಯದ…
ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಪ್ರಸ್ತುತ ಕೃಷಿ ಉತ್ಪಾದನೆಯ…