ಮಳೆಗಾಲ… ಒಂದು ಪ್ರಬಂಧ | ಮಳೆ ಬಂದರೆ ಒಳ್ಳೆದ್ ಉಟ್ಟು ಕೆಟ್ಟದ್ ಉಟ್ಟು.. | ಅರೆಭಾಷೆಯಲ್ಲಿ ಪ್ರಬಂಧ ಬರೆದಿದ್ದಾರೆ ಅನನ್ಯ ಎಚ್‌ |

March 21, 2022
10:42 AM

ಮಳೆಗಾಲ ಅಂತಾ ಹೇಳ್ದು ಒಂದು ಖುಷಿಯ ಪದ ಯಾಕೆಂತಾ ಹೇಳಿರೆ ಜೂನ್ ತಿಂಗಳಿಂದ ಸುಮಾರ್ ಸೆಪ್ಟೆಂಬರ್, ಅಕ್ಟೋಬರ್ ವರೆಗೆ ಇದ್ದದೆ ಅಂತಾ ಹೇಳಕ್. ಮಳೆಗಾಲ ಅಂತಾ ಹೇಳ್ದು ಸಣ್ಣ ಸಣ್ಣ ಮಕ್ಕಳಿಗೆ ತುಂಬಾ ಖುಷಿಕೊಡುವಂತದ್. ಜೂನ್‌ ಲಿ ಶಾಲೆಗ ಸುರು ಆಗುವ ಹೊತ್ತು ಬೆಳಿಗ್ಗೆನೆ ಮಳೆ ಬಂದರೆ ಚಂಡಿ ಆಕಂಡ್ ಹೋಕೆ ಆದೆ ಅಂತಾ ಒಂದು ಮತ್ತೊಂದು ಹೇಳಕ್ಎಲ್ಲಾ ಕಡೆಗಲ್ಲಿ ಮಳೆ ಇದ್ದದೆ ಸಣ್ಣ ಸಣ್ಣ ಹಳ್ಳಗ ಎಲ್ಲಾ ಮುಳ್ಗಿದೆ‌ ಹಂಗೆ ಶಾಲೆಗೆ ರಜೆನು ಸಿಕ್ಕಿದೆ ಅಂತಾ ತುಂಬಾ ಖುಷಿಪಟ್ಟವೆ. ಮಳೆಗಾಲ ಅಂತಾ ಹೇಳಿರೆ ಈಗದ ಮಕ್ಕಳಿಗೆ ರಜೆದೆ ನೆಂಪು ಬಾದು ಮನೆಲೇ ಕುದ್ ಕಂಡ್ ಬೀಜದ ಬೆಂಡ್ ಗಳ ತಿಂಬೊದು, ಕಣಿಗಲ್ಲಿ ಮೀನ್ ಹಿಡೆಕೆ ಆದೆ. ಎಸ್ಂಡ್ಗಳ ಹಿಡ್ದ್ ಕಿಚ್ಚಿ ಹಾಕಿ ತಿಂಬೊದು ಎಲ್ಲಾ ಮಕ್ಕಳಿಗೆ ಬಾರಿ ಖುಷಿ ಕೊಟ್ಟದೆ.

Advertisement
Advertisement
Advertisement

ವಿವರಣೆ : ‌ ‌‌‌‌‌‌ ಮಳೆಗಾಲಂತ ಹೇಳ್ದು ನಮ್ಮ ತುಳುನಾಡಿನವುಕ್ಕೆ ಹಬ್ಬ ಇದ್ದಂಗೆ ಯಾಕೆಂತಾ ಗೊತ್ತುಟ ಮಳೆಗಾಲಲಿ ಹಲ್ಸಿನ ಹಿಟ್ಟ್ಂತನೇ ಹೇಳುವೆ.ಅದ್ರಲ್ಲಿ ಮೂಡ್ ಹಿಟ್ಟ್ ಹಂಗೇ ಎಣ್ಣೆಲಿ ಹಲ್ಸಿನ ತೋಲೆ ಹಾಕಿ ಚಿಪ್ಸ್ ಮಾಡ್ದು, ಇಡ್ಲಿ ಮಾಡ್ದು ,ಮುಲ್ಕ ಮಾಡ್ದು ಎಲ್ಲಾ ಒಂದು ವಿಷೇಷವಾಗಿದ್ದದೇ ಅಂತಾ ಹೇಳಕ್.

Advertisement
ಕೆಲವು ಮಕ್ಕಳಿಗೆ ಹಲ್ಸಿನಕಿಯ ಸಾಂತನಿಮಾಡಿ ತಿಂಬೊದು ಅಂತಾ ಹೇಳಿರೆ ಒಂದು ಜೀವದಂಗೆಂತಾ ಹೇಳಕ್ ಹಲ್ಸಿನಕಾಯಿ ಹಣ್ಣಾಗುವ ಹೊತ್ಲಿ ಒಂದು ಊರು ಇಡೀ ಅದ್ರದೆ ಪರಿಮಳಬಾತ ಇದ್ದದೇ ಆಗ ಮನೆಗಲ್ಲಿ ಯಾರರ್ ಹಿರಿಯವು ಇದ್ದರೆ ಹಲ್ಸಿನಕಾಯಿ ಹಣ್ಣಾಗಿರೋಕು ತಗಂಡ್ ಬನ್ನಿಂತಾ ಬೊಬ್ಬೆ ಹೊಡೆಕೆ ಸರುಮಾಡುವೆ. ಮಳೆಬಾಕನ ಹೆಚ್ಚಿನ ಮನೆಯ ಮಕ್ಕ ಎಲ್ಲಾ ಕೊಡೆ, ರೈನ್ ಕೋಟು ಇದ್ರು ಕೂಡ ಸುಮ್ಮನಾರ್ ಚಂಡಿ ಆಕಂಡ್ ಮನೆಯವರ ಕೈಯಿಂದ ಬೊಯಿಗ್ಲ್,ಪೆಟ್ಟ್ ತಿಂದ್ಕಂಡ್ ಕುದ್ದವೆ ಅಲ್ಲದೇ ಜ್ವರ ಶೀತ ಸುರುಮಾಡಿಕಂಡ್ ಶಾಲೆಗೆ ರಜೆ ಮಾಡಿಕಂಡ್ ಶಾಲೆಲಿ ಟೀಚರ್ ಗಳ ಕೈಯಿಂದ ಕೂಡ ಬೊಯಿಗ್ಲ್ ತಿಂದವೆ. ಟೀಚರ್ಗ ಬೊಯೊದು ಒಂದು ಹಾಜರಿ ಕಡಿಮೆ ಬಿದ್ದದೆಂತಾ ಇನ್ನೊಂದು ಪಾಠ ಮಾಡ್ದ್ ಮಕ್ಕಳಿಗೆ ಅರ್ಥ ಆಲ್ಲೆಂತಾ.

ಮಳೆಗಾಲ ಕೆಲವರ ಪಾಲಿಗೆ ಶನಿ ಇದ್ದಂಗೆ ಅಂತಾ ಹೇಳಕ್ ಯಾಕೆಂತಾ ಹೇಳಿರೆ ಕೆಲವು “ಮಳೆ “ಬಾಕನ ನೀರ್ ಲಿ ಕೊಚ್ಚಿ ಹೋದವೆ .ಹಂಗೆ “ಗಾಳಿ” ಬಾಕನ ಮರಗ ಎಲ್ಲಾ ಬಿದ್ದ್ ಸತ್ತವೆ. ಇನ್ನೊಂದು ಉಟ್ಡು ಭಯಂಕರವಾದ್ ಸಿಡ್ಲ್ ಅದ್ ಯಾವುದರ ಮರಕ್ಕೆನ ಅಲ್ಲಾ ಕಾಲಿ ಇರುವ ಜಾಗಲಿ ಇರ್ಕನ ,ಕರೆಂಟ್ ಮುಟ್ಟಿಕಂಡ್ ಇದ್ದರೆ ಎಲ್ಲಾ ನಮ್ಮ ಜೀವ ತೆಗ್ದದೆ ಅಂತಾ ಹೇಳಕ್.
ಕೆಲವರ ಪಾಲಿಗೆ ದೇವ್ರು ಇದ್ದಂಗೆ ಅದ್ ಉತ್ತರ ಕರ್ನಾಟಕದ ಜನಗಳಿಗೆ ಅಂತಾ ಹೇಳಕ್ ಯಾಕೆ ಗೊತ್ತುಟ್ಟಾ ಅಲ್ಲಿಯಲ ಇಲ್ಲಿಯ ಹಂಗೆ ನೀರ್ ಇಲ್ಲೆ ಅಲ್ಲಿ ಭತ್ತ ಬೆಳೆವೆ ಜಾಸ್ತಿ ಇರ್ದು‌ . ಆಚೆ ಮಳೆ ಬಾದೆ ಅಪ್ರೂಪ ಹಂಗೆ ಮಳೆ ಬಾಕನ ಒಮ್ಮೆ ಎಲ್ಲವುಕ್ಕು ಖುಷಿ ಆದೆ ನಮ್ಮ ಗದ್ದೆ‌ಗೆ ನೀರ್ ಸಿಕ್ಕಿತ್, ಇನ್ನೂ ಲಾಯಿಕ್ ಬೆಳೆ ಬೆಳ್ದದೆ ಅಂತಾ. ಹಂಗೇನೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆವಕ್ಕೆ ಮಳೆ ಬಂದರೆ ಅಡಿಕಿಗೆ ಎಲ್ಲಾ ರೋಗ ಹಿಡ್ದದೆ ಅಂತಾ ಮಂಡೆಬೆಚ್ಚಾ ಮತ್ತೆ ಇರುವ ಅಡಿಕೆನೆ ಅನೀಸ್ ಅದು ಕೂಡ ಹೋದರೇ ಮತ್ತೆ ಎಂತಾ ಉಟ್ಡು.ಬಿದ್ದ ಅಡಿಕೆ ಹೆಕ್ಕಿಕೆ ಕೂಡ ನಮ್ಮಲಿ ಯಾರ್ ಇಲ್ಲೆ . ಎಲ್ಲಾ ಕಣಿಲಿ ಬಿದ್ದ್ ಬೊಲ್ಲ ಹೋದೆ .

Advertisement
ಹೊರಗಡೆಂದ ಜನ ಕೇಲೋಮು ಅಂತಾ ಹೇಳಿರೆ ಜನಗನೇ ಸಿಕ್ಕಿಲೇ ಎಲ್ಲಿಯಾರ್ ಒಬ್ಬ ಇಬ್ಬೋರು ಸಿಕ್ಕುವೆ ಕಷ್ಟಲಿ ಅವರ ಕರ್ದ್ ಮಾಡ್ಸೋಮು ಅಂತಾ ಹೇಳ್ರೆ ಇನ್ನೊಂದು ದೊಡ್ಡ ಮಂಡೆ ಬೆಚ್ಚ ಕೆಲ್ಸ ಸರೀ ಮಾಡ್ದುಲೆ ಬೆಳಿಗ್ಗೆ ಬಾದು ಲೇಟ್ ಸಂಜೆಬೇಗ ಹೋದು ಕೈಯಿ ತುಂಬಾ ದುಡ್ಡು ಮಾತ್ರ ಕೊಡೊಕಲಂತಾ ಮತ್ತೆ ಮೊದ್ದು ಬುಡಿಕು ಜನಗ ಸಿಕ್ಕುಲೆ . ಅಡಿಕೆ ಬೆಳೆವಂಗೆ ಮಾತ್ರ ಮಳೆಗಾಲಿ ನಷ್ಟಂತನೇ ಹೇಳಕ್.

ಮಳೆಗಾಲಲಿ ಬೀಜಗಳ ಹಾಕುವೆ ಕೆಲವು ತರಕಾರಿ ಬೀಜಗ,‌ಹೂ ಬೀಜ, ಹೂ ದೈಗಳನ್ನು ನೆಟ್ಟವೆ. ಹಿರಿಯವು ಇರುವ ಮನೆಲಿ ಮಾತ್ರ ತರಕಾರಿ ಬೀಜಗಳ ಹಾಕುದು ಎಲ್ಲಾ ಜಾಸ್ತಿ ಇದ್ದದೆ ಅವ್ಕೆ ಇಂತದ್ರಲ್ಲಿ ಎಲ್ಲಾ ತುಂಬಾ ಇಷ್ಟ ಮತ್ತು ಅವುಕೆ ಇಂತದರ ಎಲ್ಲಾ ಮಾಡ್ರೆ ಮನ್ಸಿಗೆ ನೆಮ್ಮದಿ ಮತ್ತು ಖುಷಿಕೊಟ್ಟದೆಂತಾ ನಂಬಿಕೆ.

Advertisement
ಮಕ್ಕ ಇರುವ ಮನೆಗಲ್ಲಿ ಮಾತ್ರ ಮಳೆಗಾಲಲಿ ಹೆದ್ರಿಕಂಡೇ ಶಾಲೆಗೆ ಕಲ್ಸುದು ಅಂತಾ ಹೇಳಕ್.ಮಕ್ಕ ಮಳೆಲಿ ಚಂಡಿ ಆದವೇನಾ, ಎಲ್ಲಿಯಾರ್ ಗುಡುಗು ಗಾಳಿ ಬಾಕನ ಎಲ್ಲಾ ಮಕ್ಕ ಮಧ್ಯ ದಾರಿಲಿ ಸಿಕ್ಕುವೆನಾ ಅಂತಾ ಸಂಜೆ ಆದಂಗೆ ಸುರು ಮಾಡುವೆ.ಹಂಗನೇ ಬಸ್ಸ್ ಲಿ ಶಾಲೆಗೆ ಹೋಗುವ ಮಕ್ಕಳ ಮನೆವು ಮಕ್ಕಳಿಗೆ ಬಸ್ಸ್ ಸಿಕ್ಕಿರ್ದ ಅಲ್ಲ ಈ ಮಕ್ಕ ಬಸ್ಸ್ ಇದ್ದ್ ಕೂಡ ಹತ್ತಿತ್ಲೆನಾ ಅಂತಾ ಒಂದು ಸ್ವಲ್ಪ ಹೊತ್ತಾದರೆ ಸಾಕ್ ಇಂತದರೆಲ್ಲಾ ನಿಲ್ಸ್ ಕಂಡ್ ಮಂಡೆ ಬಿಸಿ ಮಾಡಿಕಂಡ್ ಇರ್ದು ಅಲ್ಲದೆ ಬಾಕಿದ್ದವುಕ್ಕು ತಲೆ ಕೆಡ್ಸುವೆ ಹಂಗೆ ಮನೆಯಿಂದ ಇನ್ನೊಬ್ಬರ ಮಕ್ಕ ಬಂದಲನ ಅಂತಾ ಕೇಳಿಕಂಡ್ ಹೋಕನ ಆ ಮನೆಯ ಮಕ್ಕ ಬಂದಿದ್ದರೆ ದಾರಿಕರೆ ಅಂತಾ ಹೇಳಿರೆ ನಮ್ಮ ಮನೆ ಮಕ್ಕ ಇಲೆಯುವ ಬಸ್ಸ್ ಸ್ಟ್ಯಾಂಡ್ ಮುಟ್ಟ ಹೋಗಿ ಕುದ್ದವೆ.

ಮಳೆಗಾಲಲಿ ಗೂಡೆಗ ಮಾತ್ರ ತಲೆಗೆ ಮೀಯೋದೆ ಇಲ್ಲೆ ಅಂದ್ರೇ ಮೂರ್ ದಿನಕೊಮ್ಮೆ ,ವಾರಕೊಮ್ಮೆ ಮೀಯೊವು ಹೆಚ್ಚ್ ಇರ್ದು ಯಾಕೆಂತಾ ಹೇಳಿರೆ ಕೂದ್ಲ್ ಮುಂದನೇ ಮಳೆಗೆ ಹೊರಗೆ ಹೋಗಿ ಬಾಕನ ಚೂರು ಚೂರು ಚಂಡಿ ಅಗಿ ಇದ್ದದೆ ಅದ್ರಲ್ಲಿ ಹೇಣ್ಗ ಸೇರಿದ್ದವೆ. ಇನ್ನೂ ಸೇರ್ದು ಬೇಡ ಕೂದಲ್ ಒನ್ಗಿತ್ಲರ್ ಕುಂಬು ಆದೆಂತಾ. ಮತ್ತೊಂದು ಶೀತ ಜ್ವರ ಬಂದದೆ ಅಂತಾ ಹೇಳಕ್ ಶೀತ ಜ್ವರ ಬಂದರೆ ಮನೆಲಿ ಎಲ್ಲಾವುಕ್ಕು ಸುರು ಆದೆಂತಾ ಒಂದು ಹೆದ್ರಿಕೆಯಾದರೆ ಇನ್ನೊಂದು ಶಾಲೆಗೆ ರಜೆ ಅದರೆ ಪಾಠ ಮುಂದೆ ಹೋದರೆ ಅರ್ಥ ಆಲ್ಲೆಂತಾ.

Advertisement
ಉಪಸಂಹಾರ: ‌‌‌‌‌ ಮಳೆಗಾಲಲಿ ಬಿದ್ದ ಹಸಿ ಹಾಳೆಗ ಹಂಗೆ ,ಕಾಯಿ ಚಿಪ್ಪಿ ಹಿಂಗೆ ಮತ್ತೇನಾರ್ ನೀರ್ ನಿಲ್ವಂತವು ಕುತ್ತಾ ಬಿದ್ದಿದ್ದರೆ ಅದ್ರಲಿ ನೀರ್ ತುಂಬಿ ನುಸಿಗ,ಹುಳಗ ಎಲ್ಲಾ ಹುಟ್ಟಿಕಂದವೇ ನುಸಿಗ ಎಲ್ಲಾ ಕಚ್ಚಿರೆ ಡೆಂಗ್ಯೂ ಜ್ವರ, ಚಿಕನ್ ಗುನ್ಯ ಅಂತಾ ಹೇಳುವ ರೋಗಗೆಲ್ಲಾ ಬಂದದೇ ಅದ್ ಒಬ್ಬಂಗೆ ಬಂದರೇ ಈಡೀ ಒಂದು ಊರ್ ಪೂರ್ತಿ ಬಂದದೆಂತಾ ಅರ್ಥ. ಮಳೆಗಾಲಲಿ ಹೆಚ್ಚಿನ ಜನಗ ಚಿಪ್ಪಿಗಳ , ತೊಟ್ಟೆಗಳ ಹಿಂಗೆ ನೀರ್ ನಿಲ್ಲುವಂತದರ ಎಲ್ಲಾ ಹರೆಯುವ ನೀರಿಗೆ ಬಿಸಾಡುವೆ ಇಲ್ಲರ್ ಅದರ ಎಲ್ಲಾ ಕಿಚ್ಚಿಹಾಕುವೆ. ಮಳೆಗಾಲ ಹೊತ್ಲಿ ಹೆಚ್ಚಿನವರ ಮನೆ ಸೈಡ್ಲಿ ಸಂಜೆ ಹೊತ್ಲಿ ಅಡಿಕೆ ಚಿಪ್ಪುಗಳ ಹಂಗೆ ಒಣ್ಗಿದ ದರ್ಗ್ ಗಳ ಮತ್ತೇ ಸಣ್ಣ ಸಣ್ಣ ಕಡ್ಡಿಗಳ ಹೆಕ್ಕಿ ಕಿಚ್ಚಿ ಹಾಕಿ ನುಸಿಗಳ ಓಡ್ಸುವೆ.

ಮಳೆ ಬಂದರೆ ಒಳ್ಳೆದ್ ಉಟ್ಟು ಕೆಟ್ಟದ್ ಉಟ್ಟು

Advertisement

# ಅನನ್ಯ. ಎಚ್,  ಸುಬ್ರಹ್ಮಣ್ಯ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅನನ್ಯ ಎಚ್‌ ಸುಬ್ರಹ್ಮಣ್ಯ

ಅನನ್ಯ ಎಚ್ ಸುಬ್ರಹ್ಮಣ್ಯ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ವಿದ್ಯಾರ್ಥಿನಿ. ಸಾಹಿತ್ಯ , ಕವನಗಳನ್ನು ಬರೆಯುವುದು, ನಿರೂಪಣೆ ಮಾಡುವುದು, ಹಾಡುವುದು, ನೃತ್ಯದಲ್ಲಿ  ತೊಡಗಿಕೊಳ್ಳುವುದು ಇವರ ಹವ್ಯಾಸ. ಪ್ರತಿಭಾವಂತ ವಿದ್ಯಾರ್ಥಿನಿ.

ಇದನ್ನೂ ಓದಿ

ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ
ಬಾಬಾಸಾಹೇಬರನ್ನು ನೆನೆಯುತ್ತಾ…… ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು
April 13, 2024
4:36 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror