ಸುಲಭವಾಗಿ ಮಾಡಿ ರುಚಿಕರ ಹಲಸಿನ ಕಾಯಿ ಚಟ್ನಿ – ಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್!

June 11, 2026
6:47 AM
ಹಲಸಿನ ಕಾಯಿ, ಕಾಯಿತುರಿ ಹಾಗೂ ಜೀರಿಗೆ ಬಳಸಿ ತಯಾರಿಸುವ ಈ ಚಟ್ನಿ ಬಿಸಿ ಅನ್ನ ಹಾಗೂ ದೋಸೆಯೊಂದಿಗೆ ಅತ್ಯುತ್ತಮ ರುಚಿ ನೀಡುತ್ತದೆ. ಕಡಿಮೆ ಸಾಮಗ್ರಿಗಳಿಂದ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ಸಾಂಪ್ರದಾಯಿಕ ಖಾದ್ಯ ಇದಾಗಿದೆ.

ಮಳೆಗಾಲದಲ್ಲಿ ಮತ್ತು ಹಲಸಿನ ಹಣ್ಣಿನ ಸೀಸನ್‌ನಲ್ಲಿ ಹಲಸಿನ ಕಾಯಿಯಿಂದ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ಸರಳವಾಗಿ ಹಾಗೂ ಕಡಿಮೆ ಸಾಮಗ್ರಿಗಳಿಂದ ತಯಾರಿಸಬಹುದಾದ ರುಚಿಕರವಾದ ತಿನಿಸು ಎಂದರೆ ಹಲಸಿನ ಕಾಯಿ ಚಟ್ನಿ. ಬಿಸಿ ಅನ್ನ, ಗಂಜಿ, ದೋಸೆ ಅಥವಾ ಚಪಾತಿಯೊಂದಿಗೆ ಈ ಚಟ್ನಿ ಉತ್ತಮ ರುಚಿ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು

Advertisement
  • ಹಲಸಿನ ಕಾಯಿ – 8 ಎಸಳು
  • ಜೀರಿಗೆ – 1 ಚಮಚ
  • ಒಣ ಕೆಂಪು ಮೆಣಸು – 2
  • ಕಾಯಿತುರಿ – 4 ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು

ಒಗ್ಗರಣೆಗೆ

  • ಎಣ್ಣೆ – 1 ಚಮಚ
  • ಸಾಸಿವೆ – ½ ಚಮಚ
  • ಕರಿಬೇವಿನ ಸೊಪ್ಪು – ಸ್ವಲ್ಪ

ಮಾಡುವ ವಿಧಾನ : ಮೊದಲು ಹಲಸಿನ ಕಾಯಿಯ ಎಸಳುಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಜಾರ್‌ಗೆ ಕಾಯಿತುರಿ, ಬೇಯಿಸಿದ ಹಲಸಿನ ಕಾಯಿ, ಸ್ವಲ್ಪ ಎಣ್ಣೆಯಲ್ಲಿ ಹುರಿದ ಜೀರಿಗೆ ಹಾಗೂ ಕೆಂಪು ಮೆಣಸು, ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

Advertisement

ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ತೆಗೆದು, ಎಣ್ಣೆ ಬಿಸಿ ಮಾಡಿ ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ನೀಡಿ. ಬಳಿಕ ಅದನ್ನು ಚಟ್ನಿಗೆ ಸೇರಿಸಿ ಚೆನ್ನಾಗಿ ಕಲಸಿದರೆ ರುಚಿಕರವಾದ ಹಲಸಿನ ಕಾಯಿ ಚಟ್ನಿ ಸಿದ್ಧ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Jackfruit Chutney is a simple and delicious traditional recipe made using boiled jackfruit, coconut, cumin, and red chilies. It pairs well with hot rice, dosa, chapati, and porridge, offering a unique seasonal flavor.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಶಿರಾಡಿ ಘಾಟಿಯಲ್ಲಿ ವಾರಾಂತ್ಯದ ಟ್ರಾಫಿಕ್‌ ಜಾಮ್‌ಗೆ ಬ್ರೇಕ್‌ ಯಾವಾಗ? ಶಿರಾಡಿ ಘಾಟಿಗೆ ವಿಶೇಷ ಸಂಚಾರ ಯೋಜನೆ ಜಾರಿ ಅಗತ್ಯ
July 1, 2026
7:52 AM
by: ಮಹೇಶ್ ಪುಚ್ಚಪ್ಪಾಡಿ
ಜುಲೈನಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸಾಧ್ಯತೆ : ಐಎಂಡಿ ಎಚ್ಚರಿಕೆ
July 1, 2026
7:02 AM
by: ದ ರೂರಲ್ ಮಿರರ್.ಕಾಂ
ಕಾಪುವಿನಲ್ಲಿ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್ – 24 ಪ್ರತಿಭೆಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ
June 30, 2026
11:08 PM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆ ಮುನ್ಸೂಚನೆ – ಕಾಸರಗೋಡು ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ
June 30, 2026
10:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror