Opinion

ಕೃತಕ ಬುದ್ಧಿಮತ್ತೆ(AI) ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಹುದು…..ಎಚ್ಚರ..! | ಚಾಟ್​ಬಾಟ್​ಗಳಿಂದ ​ಮಕ್ಕಳಿಗೆ ಹಾನಿ | ಅಧ್ಯಯನದಿಂದ ಬಯಲು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ವಿಜ್ಞಾನ(Science) ಎಷ್ಟು ಮುಂದುವರೆಯುತ್ತದೋ ಅಷ್ಟೇ ಅಪಾಯಗಳೂ ಇದೆ. ಆದರೆ ಬಳಸಿಕೊಳ್ಳುವ ರೀತಿಯಲ್ಲಿ ಎಲ್ಲವೂ ಇದೆ. ಈಗ AI ಬಗ್ಗೆ ಅದೇ ರೀತಿಯ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಎಲ್ಲದಕ್ಕೂ ಕೃತಕ ಬುದ್ಧಿಮತ್ತೆಯನ್ನು(AI) ಅವಲಂಬಿಸಿರುವುದು ಮಕ್ಕಳ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.  ಕೃತಕ ಬುದ್ಧಿಮತ್ತೆ ಚಾಟ್​ಬಾಟ್​ಗಳಾದ(Chatbots) ಅಮೆಜಾನ್‌ನ ಅಲೆಕ್ಸಾ, ಸ್ನಾಪ್​ಚಾಟ್​ನ ಮೈಎಐ ಮತ್ತು ಮೈಕ್ರೋಸಾಫ್ಟ್​ನ ಬಿಂಗ್​​ಗಳಲ್ಲಿ ಪದೇ ಪದೇ ಸಹಾನುಭೂತಿ ಅಂತರದ ಲಕ್ಷಣ ಗೋಚರಿಸುತ್ತಿದ್ದು, ಇವು ಯುವಜನತೆ ಅದರಲ್ಲೂ ಮಕ್ಕಳ ಮೇಲೆ ಹಾನಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಕಾಪಾಡುವ ಎಐ ಅವಶ್ಯಕತೆ ಇದೆ ಎಂದು ಅಧ್ಯಯನ(Study) ತಿಳಿಸಿದೆ.

Advertisement

ಕೆಂಬ್ರಿಡ್ಜ್​ ಯುನಿವರ್ಸಿಟಿಯ ಸಂಶೋಧಕರು ಈ ರೀತಿಯ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಎಐ ಅಭಿವೃದ್ಧಿಕಾರರು ಮತ್ತು ನೀತಿ ನಿರೂಪಕರು ಎಐ ವಿನ್ಯಾಸ ಮಾಡುವಾಗ ಮಕ್ಕಳ ಅಗತ್ಯವನ್ನು ಹೆಚ್ಚು ಗಮನದಲ್ಲಿರಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಮಕ್ಕಳು ಚಾಟ್​ಬಾಟ್​​ಗಳನ್ನು ಅರೆಮಾನವ ವಿಶ್ವಾಸಿಗಳೆಂಬ ರೀತಿ ಭಾವಿಸುತ್ತಾರೆ. ಆದರೆ ತಂತ್ರಜ್ಞಾನಗಳು ಅವರ ವಿಶಿಷ್ಟ ಅಗತ್ಯತೆಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗುತ್ತದೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್​ ಲರ್ನಿಂಗ್​​ ಮೀಡಿಯಾ ಮತ್ತು ಟೆಕ್ನಾಲಜಿಯಲ್ಲಿ ಪ್ರಕಟಿಸಲಾಗಿದೆ.

10 ವರ್ಷದ ಮಗುವಿಗೆ ಕಾಯಿನ್​ನೊಂದಿಗೆ ಎಲೆಕ್ಟ್ರಿಕ್​ ಪ್ಲಗ್​ ಟಚ್​ ಮಾಡುವ ಕುರಿತು ಅಲೆಕ್ಸಾ ಸೂಚನೆ ನೀಡಿದೆ. ಹಾಗೆಯೇ ಮೈಎಐ ವಯಸ್ಕ ಸಂಶೋಧನೆಯಲ್ಲಿ 13 ವರ್ಷದ ಬಾಲಕಿ 31 ವರ್ಷದ ವ್ಯಕ್ತಿಯೊಂದಿಗೆ ತನ್ನ ಕನ್ಯತ್ವವನ್ನು ಹೇಗೆ ಕಳೆದುಕೊಳ್ಳಬಹುದು ಎಂದು ತಿಳಿಸಿರುವುದು ಎಐ ಮಕ್ಕಳ ಮೇಲೆ ಹಾನಿ ಉಂಟುಮಾಡುವ ಘಟನೆಗಳಿಗೆ ಸಾಕ್ಷಿಯಾಗಿದೆ. ಹದಿಹರೆಯದವರಿಗೆ ಸ್ನೇಹಿಯಾಗಿ ವಿನ್ಯಾಸಗೊಳಿಸಲಾದ ಬಿಂಗ್ ಚಾಟ್‌ಬಾಟ್‌ನೊಂದಿಗೆ ಪ್ರತ್ಯೇಕ ವರದಿ ಮಾಡಲಾದ ಸಂವಾದದಲ್ಲಿ, ಎಐ ಆಕ್ರಮಣಕಾರಿ ಮತ್ತು ಬಳಕೆದಾರರ ಗುರುತು ಪತ್ತೆ ಮಾಡಲು ಪ್ರಾರಂಭಿಸಿತು ಎಂಬುದು ಕಂಡುಬಂದಿದೆ.

ಎಐ ವಿನ್ಯಾಸ ಮಾಡುವಲ್ಲಿ ಮಕ್ಕಳು ಅತಿ ಹೆಚ್ಚು ಕಡೆಗಣಿತ ಮಧ್ಯಸ್ಥಗಾರರಾಗಿದ್ದಾರೆ ಎಂದು ಶೈಕ್ಷಣಿಕ ತಜ್ಞೆ ಡಾ.ನೊಮಿಶಾ ಕುರಿಯನ್​ ತಿಳಿಸಿದ್ದಾರೆ. ಮಾನವ ರೀತಿಯ ಚಾಟ್​ಬಾಟ್​ಗಳು ಅನೇಕ ಪ್ರಯೋಜನ ಹೊಂದಿರುತ್ತದೆ. ಆದರೆ, ಮಕ್ಕಳ ಬಳಕೆ ವಿಚಾರದಲ್ಲಿ ವಾಸ್ತವತೆಯ ನಡುವೆ ಕಟ್ಟುನಿಟ್ಟಾದ, ತರ್ಕಬದ್ಧ ಗಡಿಗಳನ್ನು ಹಾಕುವುದು ತುಂಬಾ ಕಷ್ಟ ಎಂದಿದ್ದಾರೆ. ಎಐಗಳು ಮಕ್ಕಳು ಸರಿಯಾದ ಭಾವನಾತ್ಮಕ ಬಂಧವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಇದು ಮಕ್ಕಳಲ್ಲಿ ಗೊಂದಲ ಮೂಡಿಸುತ್ತದೆ. ಮಕ್ಕಳನ್ನು ಚಾಟ್​ಬಾಟ್​ ಸ್ನೇಹಿಯಾಗಿಸುವ ಅಗತ್ಯತೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಬೇಕಿದೆ. ಎಐ ಅನ್ನು ನಿಷೇಧಿಸದೇ ಅವುಗಳನ್ನು ಸುರಕ್ಷಿತವಾಗಿಸುವುದು ಪ್ರಮುಖವಾಗುತ್ತದೆ ಎಂದು ಸಲಹೆ ನೀಡದ್ದಾರೆ.

Source :IANS ಹಾಗೂ university of cambridge

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…

4 hours ago

ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

9 hours ago

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

17 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

18 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

1 day ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

1 day ago