ಕಲಾವಿದನ ಕೈಚಳಕ | ಇಳಕಲ್‌ ಸೀರೆಯಲ್ಲಿ ಅರಳಿದ ರಾಷ್ಟ್ರಧ್ವಜ, ಚಂದ್ರಯಾನ -3‌ |

August 12, 2023
5:44 PM
ನೇಕಾರ ಕಲಾವಿದ ಮೇಘರಾಜ್ ಗುದಟ್ಟಿ ಅವರು ಇಳಕಲ್‌ ಸೀರೆಯಲ್ಲಿ ರಾಷ್ಟ್ರಧ್ವಜ ಮತ್ತು ಚಂದ್ರಯಾನ-3 ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ತನ್ನ ಕೈಲಾದ ಮಟ್ಟಿಗೆ ಪ್ರಯತ್ನಿಸಿ ನೇಯ್ಗೆಯ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದ್ದಾರೆ.

ಕಲೆ ಯಾರ ಸ್ವತ್ತು ಅಲ್ಲ ಅನ್ನೋ ಮಾತಿದೆ. ಕಲಾವಿದರು ಅಂದ್ರೆ ಬರೇ ಕಾಗದದ ಮೇಲೆ ಕುಂಚ ಹಿಡಿದು ಚಿತ್ರ ಬಿಡುಸುವವರು ಮಾತ್ರ ಅಲ್ಲ. ಕೆಲವರು ತಮ್ಮ ವೃತ್ತಿಯಲ್ಲೆ ಹೊಸದಾದ ನೈಪುಣ್ಯತೆಯನ್ನು ಕಲೆಯ ರೂಪದಲ್ಲಿ  ತೋರಿಸುತ್ತಾರೆ.

Advertisement

ನೇಕಾರ ಕಲಾವಿದ ಮೇಘರಾಜ್ ಗುದಟ್ಟಿ #MeghrajGudatti ಅವರು ಇಳಕಲ್‌ ಸೀರೆಯಲ್ಲಿ ರಾಷ್ಟ್ರಧ್ವಜ #NationalFlag ಮತ್ತು ಚಂದ್ರಯಾನ-3 #Chandrayaan-3 ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ನನ್ನ ಕೈಲಾದ ಮಟ್ಟಿಗೆ ಪ್ರಯತ್ನಿಸಿ ನೇಯ್ಗೆಯ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದ್ದೇನೆ ಎಂದು ಮೇಘರಾಜ್ ಹೇಳಿದ್ದಾರೆ.

ದೇಶದಲ್ಲೇ ಪ್ರಖ್ಯಾತಿ ಹಾಗೂ ಪ್ರಸಿದ್ದಿಯನ್ನು ಪಡೆದಿರುವ ಇಳಕಲ್ ಸೀರೆಯ ಮೇಲೆ ಮೇಘರಾಜ್ ಅವರು ಕಲಾ ನೈಪುಣ್ಯ ಪ್ರದರ್ಶಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಅಯೋಧ್ಯೆಯ ರಾಮಮಂದಿರದ ಅಡಿಗಲ್ಲು ಹಾಕುವಾಗ ಸೀರೆಯಲ್ಲಿ ರಾಮಮಂದಿರದ ನೀಲನಕ್ಷೆಯನ್ನು ಬಿಡಿಸಿ ಅಭಿಮಾನ ಮೆರೆದಿದ್ದರು.

ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಯ ಜೇಮ್ಸ್‌  ಚಿತ್ರಕ್ಕೆ ವಿಶೇಷ ಶುಭಾಶಯಗಳನ್ನು ಕೋರಿ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದ್ದರು. ಅಲ್ಲದೇ ಕಾಂತಾರ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗಲಿ ಎಂದು ಸೀರೆಯಲ್ಲಿ ಶುಭ ಕೋರಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು
May 8, 2025
7:21 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ
May 8, 2025
6:54 AM
by: ದ ರೂರಲ್ ಮಿರರ್.ಕಾಂ
ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ
May 7, 2025
10:02 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ
May 7, 2025
2:42 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group