ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

January 10, 2026
10:33 PM

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ ಸಾಕು ಎಂದೆನಿಸಿ ಬಿಡುತ್ತದೆ. ಹಾಗೆಯೇ ನಾವು ಆರೋಗ್ಯವಾಗಿ ಇದ್ದೇವೆ ಎಂದು ಬೇರೆ ಯಾರೂ ಹೇಳಬೇಕಾಗಿಲ್ಲ. ನಮ್ಮ ದೇಹವೇ ಕೆಲವೊಂದು ಸಂಕೇತದ ಮೂಲಕ ತಿಳಿಸಿಕೊಡುತ್ತದೆ. ಈ ಸಂಕೇತವೂ ನಮಗೆ ತಿಳಿದರೆ ಸಾಕು. ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.

ಯಾವೆಲ್ಲಾ ಸಂಕೇತಗಳೆಂದರೆ: 

  • ಬೆಳಗ್ಗೆ ತಾಜಾತನದಿಂದ ಏಳುವುದು: ಉಲ್ಲಾಸದಿಂದ ಬೆಳಿಗ್ಗೆ ಯಾರೂ ಏಳುತ್ತಾರೋ ಅವರೇ ಆರೋಗ್ಯವಂತರು. ಏಕೆಂದರೆ ದೇಹವು ಆರೋಗ್ಯವಾಗಿದೆ ಎಂಬುದನ್ನು ಸೂಚಿಸುವಲ್ಲಿ ನಿದ್ರೆ ಒಂದು. ರಾತ್ರಿ ಗುಣಮಟ್ಟದ ನಿದ್ರೆಯು ಆರೋಗ್ಯದ ರೋಗ ನಿರೋಧಕ ಶಕ್ತಿಯನ್ನು ಸೂಚಿಸುತ್ತದೆ.
  • ಸರಿಯಾದ ಮಲವಿಸರ್ಜನೆ ಹಾಗೂ ಸ್ವಚ್ಛವಾದ ಮೂತ್ರ: ಬೆಳಿಗ್ಗಿನ ಮೂತ್ರವೂ ಸ್ಚಚ್ಛವಾಗಿದ್ದರೆ ಕಿಡ್ನಿಯೂ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದರ್ಥ. ಹಾಗೂ ಯಾವುದೇ ತೊಂದರೆ ಇಲ್ಲದೆ ಮಲವಿಸರ್ಜನೆ ಸಾಧ್ಯವಾದರೆ ಅದು ಕರುಳಿನ ಉತ್ತಮ ಕಾರ್ಯನಿರ್ವಹಣೆ ಹಾಗೂ ಜೀರ್ಣಾಂಗ ವ್ಯವಸ್ಥೆಯ ಉತ್ತಮ ಸ್ಥಿತಿಯನ್ನು ಸೂಚಿಸುತ್ತದೆ.
  • ಗಾಯ: ದೇಹಕ್ಕೆ ಆಗುವ ಗಾಯವೂ ಬೇಗನೆ ವಾಸಿಯಾದರೆ ನಮ್ಮ ದೇಹವೂ ರೋಗನಿರೋಧಕ ಶಕ್ತಿ ಹಾಗೂ ನಾವು ಸರಿಯಾದ ಪೋಷಕಾಂಶಗಳನ್ನು ಸೇವಿಸುತ್ತಿದ್ದೇವೆ ಎಂಬುದರ ಸಂಕೇತವಾಗಿದೆ.
  • ಚರ್ಮದ ಆರೋಗ್ಯ: ನಮ್ಮ ಚರ್ಮವೂ ಆರೋಗ್ಯಕರವಾಗಿ ಕಾಂತಿಯುತವಾಗಿದೆ ಎಂದರೆ ನಮ್ಮ ದೇಹಕ್ಕೆ ಸರಿಯಾದ ಜಲಸಂಚಯನವಾಗುತ್ತಿದೆ ಎಂದರ್ಥ.
  • ಆಯಾಸವಿಲ್ಲದ ನಡೆ: ವೇಗಾಗಿ ನಡೆಯುವಾಗ ಬೇಗನೆ ಆಯಾಸವಾಗುವುದಿಲ್ಲ ಎಂದರೆ ರಕ್ತ ಪರಿಚಲನೆ, ನರವ್ಯೂಹ, ಸ್ನಾಯುಗಳು ಆರೋಗ್ಯ ಉತ್ತಮವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
  • ಸ್ಮರಣಶಕ್ತಿ: ಸ್ಮರಣಶಕ್ತಿ ಉತ್ತಮವಾಗಿದ್ದರೆ ಮೆದುಳಿನ ಸರಿಯಾದ ಕಾರ್ಯನಿರ್ವಹಣೆಯನ್ನು ಸೂಚಿಸುತ್ತದೆ.
  • ಸ್ಥಿರವಾದ ಉಸಿರಾಟ: ಸಾಮಾನ್ಯ ಹಾಗೂ ಸ್ಥಿರವಾದ ಉಸಿರಾಟದ ಮಾದರಿ ಆರೋಗ್ಯಕರ ಉಸಿರಾಟದ ವ್ಯವಸ್ಥೆಯನ್ನು ಸೂಚಿಸುತ್ತದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ
ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ
October 10, 2026
2:44 PM
by: ದ ರೂರಲ್ ಮಿರರ್.ಕಾಂ
ಉಪ್ಪಿನಂಗಡಿಯ ಮೌಲ್ಯಾಧಾರಿತ ಶಿಕ್ಷಣ ಕ್ರಾಂತಿಯ ಹರಿಕಾರ ಯು.ಜಿ. ರಾಧ ಭಟ್ – ಗ್ರಾಮೀಣ ನೆಲದಲ್ಲಿ ಅರಳಿದ ಶ್ರೀರಾಮ ಶಾಲೆಯ ಯಶೋಗಾಥೆ
October 10, 2026
2:06 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror