ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ಪರವಾಗಿ ಇದೀಗ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಂದು ನಮಗೆ ನೆರವು ನೀಡಿದ್ದಾರೆ, ಈಗ ನಿಮಗೆ ನೆರವು ನೀಡುತ್ತೇವೆ ಎಂದು ಹೇಳುವ ಅಭಿಪ್ರಾಯ ಬಂದಿದೆ.
ಚುನಾವಣಾ ಕಣದಲ್ಲಿ ಕಾರ್ಯಕರ್ತರ ಮನವಿ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆಗೆ ಇಳಿದಿದ್ದ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಇತರ ಪಕ್ಷಗಳು ಹಲವು ಆರೋಪಗಳನ್ನು, ಸುಳ್ಳು ಪ್ರಚಾರಗಳನ್ನು ಮಾಡುತ್ತಿರುವುದರಿಂದ ಬೇಸತ್ತ ಅರುಣ್ ಕುಮಾರ್ ಪುತ್ತಿಲರು ಎ.28ರ ಮಹಿಳಾ ಸಮಾವೇಶ ಸೀತಾ ಪರಿವಾರದಲ್ಲಿ ಚುನಾವಣೆ ಎದುರಿಸುವುದು ಕಷ್ಟಸಾಧ್ಯ ಅದಕ್ಕೆ ಅಧಿಕಾರ ಹಾಗೂ ಹಣ ಬಲ ಬೇಕು . ನಿಮ್ಮ ಓಟಿನ ಜೊತೆಗೆ 10 ರೂಪಾಯಿಯಂತೆ ನೀಡಿ ನಿಮ್ಮ ಮನೆ ಮಗನ ರೀತಿ ಬೆಂಬಲಿಸಿ ಎಂದು ಮನವಿ ಮಾಡಿದ್ದರು. ಪುತ್ತಿಲರ ಮನವಿಗೆ ಮಿಡಿದ ಮತದಾರರು ಸಹಾಯವನ್ನು ನೀಡುತ್ತಿದ್ದಾರೆ.ಕೇವಲ 12 ಗಂಟೆಯಲ್ಲಿ ಹರಿದು ಬಂತು 7.80 ಲಕ್ಷ ರೂಪಾಯಿ ಹರಿದುಬಂದಿದೆ.
ಪುತ್ತಿಲರ ಚುನಾವಣಾ ನಿರ್ವಹಣೆಯ ಐಟಿ ಸೆಲ್ ವತಿಯಿಂದ ಎ.29ರ ಮಧ್ಯಾಹ್ನ ಸಮಯ ಅಕೌಂಟ್ ನಂಬರ್ , ಕ್ಯೂ ಆರ್ ಕೋಡ್, ಯುಪಿಐ ನಂಬರ್ ನ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈ ಪೋಸ್ಟರ್ ರೀಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ 1 ಲಕ್ಷದಷ್ಟು ಸಂಗ್ರಹ ಆಗಿತ್ತು. ಕುರಿಯದ ಬೆನ್ನುಮೂಲೆ ಮುರಿತಕ್ಕೊಳಕ್ಕಾದ ಸತೀಶ್ ಎನ್ನುವವರು 5 ಸಾವಿರ ಹಣ ಅರುಣ್ ಪುತ್ತಿಲರಿಗೆ ಹಾಕಿ ನಮಗೋಸ್ಕರ ದುಡಿಯುವವರು ಯಾವತ್ತೂ ಸೋಲಬಾರದು ಎನ್ನುವ ಸಂದೇಶ ಹಾಕಿದ್ದು ಅಭಿಮಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯೋರ್ವರು 30000 ಹಣ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಮನೆ ಮನೆಯಿಂದ 10,50, 100, 500, 1000 ದಂತೆ ಹಣ ಸಂದಾಯವಾಗಿದೆ. ಹೊರ ತಾಲೂಕಿನವರೂ ಸ್ಪಂದಿಸಿದ್ದಾರೆ.12 ಗಂಟೆ ಅವಧಿಯಲ್ಲಿ ಈ ಖಾತೆಗೆ 7.80 ಲಕ್ಷ ರೂಪಾಯಿ ಹಣ ಹರಿದು ಬಂದಿದೆ.
ಕ್ಷೇತ್ರದಾದ್ಯಂತ ಅರುಣ್ ಪುತ್ತಿಲರ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.ಅನೇಕರು ಅಂದು ನಮಗೆ ಸಹಾಯ ಮಾಡಿದ್ದೀರಿ, ಇಂದು ನಾವು ನಿಮ್ಮ ಜೊತೆಗಿದ್ದೇವೆ ಎಂದು ಹೇಳುತ್ತಿರುವುದು ವಿಶೇಷವಾಗಿದೆ. ವ್ಯಕ್ತಿಯೊಬ್ಬರು ಅಪಘಾತಕ್ಕೆ ಒಳಗಾಗಿ ಗಾಯಗೊಂಡಿದ್ದರು, ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು ಅರುಣ್ ಕುಮಾರ್ ಪುತ್ತಿಲ ಅವರು, ಅಂತಹ ವ್ಯಕ್ತಿಗಳೂ ಕಳೆದ ಕೆಲವು ದಿನಗಳಿಂದ ತಡರಾತ್ರಿವರೆಗೂ ಪುತ್ತಿಲ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಪಕ್ಷೇತರ ಅಭ್ಯರ್ಥಿ ಪುತ್ತೂರಿನಲ್ಲಿ ಹವಾ ಎಬ್ಬಿಸಿದ್ದಾರೆ.
ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…
ಅಂಚೆ ಇಲಾಖೆಯಿಂದ ಬೆಳೆಗಾರರಿಂದ ಗ್ರಾಹಕರು ನೇರ ಮಾವು ಮಾರಾಟ ಯಶಸ್ವೀ ಸೇವೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು : ಗುಜ್ಜೆ 1 ಕಪ್ ಬೇಯಿಸಿ…
ಜಮ್ಮು- ಕಾಶ್ಮೀರದ ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…