Advertisement
Opinion

ಪಶ್ಚಿಮಘಟ್ಟ ಅಂದ ತಕ್ಷಣ ಅತ್ಯಂತ ಸೂಕ್ಷ್ಮ ಪ್ರದೇಶ ಎಂಬ ಧ್ವನಿ ಮಾತ್ರ ಹೊರಡುತ್ತದೆ | ಕಾರ್ಯದಲ್ಲಿ ಇಲ್ಲದ ರಕ್ಷಣೆ

Share

ಬಹಳ ಗಂಭೀರ ಪರಿಸರ ಚರ್ಚೆ ಗಾಡ್ಗೀಳ್(Gadgil), ಕಸ್ತೂರಿ ರಂಗನ್ ವರದಿಗಳು(Kasturi Rangan report) ಮಳೆಗಾಲದಲ್ಲಿ(Rain season) ಗುಡ್ಡ – ಭೂಕುಸಿತ(Land slide) ಆದ ತಕ್ಷಣ ಧುತ್ತೆಂದು ಎದ್ದು ಶುರುವಾಗುತ್ತದೆ. ಜನರ ಮನಸ್ಸನ್ನು ಪರಿಸರ(Environment) ಪರ ಮಾಡುವುದು ಹರ ಸಾಹಸದ ಕೆಲಸ. ಯಾರು ಆದರ್ಶರು… ಈ ದೃಷ್ಟಿಯಿಂದ ಮಾರ್ಗದರ್ಶಿಸಬಲ್ಲರು ಎಂಬ ಪಶ್ನೆಗೆ ಅನೇಕ ಸಲ ಉತ್ತರ ಸಿಗದು. ಅನುಷ್ಠಾನ-ಕಾನೂನು ಜಾರಿ – ನೀತಿ ರೂಪಿಸುವುದು ನಾವೆಲ್ಲರೂ ಒಪ್ಪಿಕೊಂಡ ರಾಜಕಾರಣದ ಮತ್ತು ಅಧಿಕಾರಿಗಳ ವ್ಯವಸ್ಥೆಯಡಿ ಇದೆ.

ಇವತ್ತು ಗ್ರಾಮಗಳಲ್ಲಿ ಜೆಸಿಬಿ(JCB), ದೊಡ್ಡ ಮರಳ ಲಾರಿ-ಟಿಪ್ಪರ್, ಬೋರೆವೆಲ್ ಯಂತ್ರ(Borewell) …ಯಾರ ಕೈಲಿದೆ ? ಇವಕ್ಕೆಲ್ಲ ಕೆಲಸಬೇಕು. ಸುಮ್ಮನೆ ಕೂರುವ ಸ್ವಭಾವ ಅವುಗಳಿಗಿಲ್ಲ ! ಗುಡ್ಡದ ನೆತ್ತಿ ಸವರುವುದೊ, ಗುಡ್ಡದ ಬುಡವನ್ನು ಕೆರೆಯುವುದೊ, ಆಳದ ಕೊಳವೆಬಾವಿ ಕೊರೆಯುವುದೊ ಏನಾದರೊಂದನ್ನು ದಿನನಿತ್ಯ ಮಾಡುತ್ತಿರುತ್ತವೆ.

ಗ್ರಾಮಮಟ್ಟದ ರಾಜಕಾರಣಿಗಳೆ ಬಹುತೇಕ ಇವುಗಳ ಒಡೆಯರು. ಹೆಚ್ಚಿನ ಕಡೆ ಗ್ರಾಮದ ಈ ಪುಟ್ಟ ಪುಡಾರಿಗಳೆ ಇಂದಿನ ಗ್ರಾಮ ಪಂಚಾಯತ್ ಸದಸ್ಯರುಗಳು. ಇವರುಗಳೆ ದೊಡ್ಡ ರಾಜಕಾರಣಿಗಳನ್ನು ಉಳಿಸುವ ಕವಲು ಬೇರುಗಳು. ಪರಸ್ಪರ ಇವರಲ್ಲಿ ಬಹಳ ಸ್ನೇಹ- ಸಂಬಂಧ. ಉಳಿಸುವವರ ದನಿ ಹಾರಾಡುವ ಈ ಪುಡಾರಿಗಳ – ಅಧಿಕಾರಿಗಳ ಮುಂದೆ ಕೇಳುವುದೆ ? ಗೋಮಾಳ, ಹುಲ್ಲುಬನ್ನಿ ಹರಾಜು, ಬ್ಯಾಣ, ಸೊಪ್ಪಿನ ಬೆಟ್ಟ …ಇದು ಆಗಾಗ ಕೇಳುವ ಪದಗಳು. ಕಾಣಲು ಎಲ್ಲಿದೆ ಅದು ? ಸಾತ್ವಿಕ ಜನ ಸಂಘಟನೆಯೊಂದೇ ಪರಿಹಾರ ತರಬಲ್ಲದು… ಉತ್ಸಾಹ ತುಂಬುವ ಭಾಷಣದ ಮಾತು… ಸಂಘಟಿಸುವ ಯುವ ಸಮುದಾಯ ಇಂದು ಗ್ರಾಮದಲ್ಲೆಲ್ಲಿದೆ. ಇದ್ದವರನ್ನು ಒಪ್ಪಿಕೊಳ್ಳುವ ಹಸಿರ ಸಂಗಾತಿ ಗೆಳತಿಯರು ಎಲ್ಲಿದ್ದಾರೆ ?

ಗ್ರಾಮದಲ್ಲಿ ಒಂದು ಕಾಲದಲ್ಲಿ ಸಹೋದರರಂತೆ ಇದ್ದ ವಿವಿಧ ಸಮುದಾಯಗಳ ಒಡೆದು ರಾಜಕಾರಣ ಮಾಡುವ ಪಕ್ಷಗಳಿಗೆ ಹಸಿರು – ಭೂಮಿ ರಾಜಕಾರಣದ, ಮತಗಳಿಕೆಯ ವಸ್ತು. ಗುಡ್ಡ ಕುಸಿದಾಗ – ಮಣ್ಣಿನೊಳಗೆ ಜೀವ ಸಿಕ್ಕಾಗ ಪಶ್ಚಿಮಘಟ್ಟ , ಪಶ್ಚಿಮಘಟ್ಟ ಸುದ್ದಿ ಮಾಧ್ಯಮಗಳ ಮುಖಪುಟದಲ್ಲಿ… ಕುಸಿದಿರುವುದು – ಕುಸಿಯುತ್ತಿರುವುದು ಗುಡ್ಡ – ಬೆಟ್ಟ -ಕಣಿವೆ ಅಲ್ಲ … ನಮ್ಮೆಲ್ಲರಲ್ಲಿದ್ದ ಜೀವಪ್ರಜ್ಞೆ – ಜೀವನ ಪ್ರಜ್ಞೆ ನಿತ್ಯ ಕುಸಿಯುತ್ತಿದೆ. ಯಾವ ಯಂತ್ರ – ಸೈನ್ಯ ಇದನ್ನು ತಡೆದೀತು ? ಸುಸ್ಥಿರ ಅಭಿವೃದ್ಧಿ ಅಂದರೆ ಹೀಗೆ ಅನ್ನುವ ಅಂಶಗಳನ್ನು ಸವಿವರವಾಗಿ ಪಟ್ಟಿಮಾಡಬೇಕು. ಸವಲತ್ತು ಮತ್ತು ಅವಶ್ಯಕತೆಗಳ ನಡುವೆ ಸಮನ್ವಯ ಸಾಧಿಸದಿದ್ದರೆ ಉಳಿವು ಮಾತು ಹಾಗೆಯೆ ಉಳಿದು ಬಿಡುತ್ತದೆ. ಆರಂಭದ ವಾಕ್ಯ ಮತ್ತೆ ನೆನಪಾಗುತ್ತೆ – ಮೇಲ್ಪಂಕ್ತಿ ಯಾರು?

ಬರಹ :
ಆನಂದ ಆ. ಶ್ರೀ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

2 days ago

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!

ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…

2 days ago

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…

2 days ago

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

2 days ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

3 days ago