ದೇವರ ನಾಮ ಸ್ಮರಣೆಯಿಂದ ಅನೇಕ ರೋಗಗಳಿಂದ ಮುಕ್ತಿ ಹೊಂದಬಹುದೆಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ.. ಆದರೇ ಇದೀಗ ವೈಜ್ಞಾನಿಕವಾಗಿ ಸಾಬೀತಾಗಿದೆ ನೋಡಿ..
‘ವಿಠ್ಠಲ ವಿಠ್ಠಲ’ ಎಂದು ನಾಮ ಸ್ಮರಣೆ ಮಾಡಿದರೆ ರಕ್ತದೊತ್ತಡ ಕಡಿಮೆಯಾಗಿ, ಹೃದ್ರೋಗಿಗಳ ಆರೋಗ್ಯ ನಿಯಂತ್ರಣಕ್ಕೆ ಬರುತ್ತದೆ.. ಪುಣೆಯ ವೇದ ವಿಜ್ಞಾನ ಕೇಂದ್ರ ನೂರಾರು ಹೃದ್ರೋಗಿಗಳ ಮೇಲೆ ಪ್ರಯೋಗ ಮಾಡಿ ಈ ವಿಷಯವನ್ನು ಸಾಭೀತು ಪಡಿಸಿದೆ. ಎರಡು ಮಹಾಪ್ರಾಣ ಹಾಗೂ ಎರಡು ಅಲ್ಪಪ್ರಾಣ ಹೊಂದಿರುವ ಶಬ್ದವಾದ್ದರಿಂದ ಹೃದಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ವೇದ ವಿಜ್ಞಾನ ಕೇಂದ್ರ ಹೇಳಿದೆ. ಈ ಕುರಿತು ಏಷಿಯನ್ ಜನರಲ್ ಆಫ್ ಕಾಂಪ್ಲಿಮೆಂಟರಿ ಅಂಡ್ ಆಲ್ಟರ್ನೇಟಿವ್ ಮೀಡಿಯಾ ಎಂಬ ಅಂತರಾಷ್ಟ್ರೀಯ ನಿಯತಕಾಲಿಕೆ ಪ್ರಬಂಧ ಪ್ರಕಟಿಸಿದೆ..
ವಿಠ್ಠಲ ಎಂಬ ನಾಮದಲ್ಲಿ ಅಪರೂಪದ ಶಕ್ತಿಯಿದೆ.. ವಿಠ್ಠಲ ನಾಮದ ಸ್ಪಂದನೆ ಅರ್ಥಾತ್ ಸ್ವರ ಶಾಸ್ತ್ರದ ಬಗ್ಗೆಯೂ ಕೆಲ ಸಂಶೋಧನೆಗಳನ್ನು ನಡೆಸಲಾಗಿದ್ದೂ. ಈ ಶಬ್ದ ಉಚ್ಛರಿಸುವಾಗ “ಠ್ಠ” ಎಂಬ ಅಕ್ಷರದಿಂದ ಹೊರಡುವ ಶಕ್ತಿ ನೇರವಾಗಿ ಹೃದಯದ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ.. ಎಂಬುದು ಅಧ್ಯಯನದಿಂದ ಕಂಡುಬಂದಿದೆ. ಹೃದಯಸಂಬಂಧಿ ರೋಗವಿರುವ ಭಕ್ತರು ವಿಠ್ಠಲ ನಾಮಸ್ಮರಣೆ ಮಾಡುತ್ತ 250 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಪಂಢರಪುರಕ್ಕೆ ಆಗಮಿಸಿ ಜಾತ್ರೆ ಪೂರ್ಣಗೊಳಿಸಿ ಮರಳುತ್ತಾರೆ.
‘ನಾಮ’ ಎಂದರೇನು? ದೇವರ ಅಸಂಖ್ಯ ಹೆಸರುಗಳಲ್ಲೊಂದು. ‘ಸ್ಮರಣೆ’ ಎಂದರೆ ‘ಧ್ಯಾನ’ ಅಥವಾ ನೆನಪು. ‘ಜಪ’ ಎಂದರೆ ಯಾವುದೇ ಒಂದು ಅಕ್ಷರ, ಶಬ್ದ, ಮಂತ್ರ ಅಥವಾ ವಾಕ್ಯವನ್ನು ಮತ್ತೆ ಮತ್ತೆ ಹೇಳುತ್ತಾ ಇರುವುದು. ‘ಜಕಾರೋ ಜನ್ಮ ವಿಚ್ಛೇದಕ: ಪಕಾರೋ ಪಾಪನಾಶಕ: ಎಂದರೆ ಯಾವುದು ಜನ್ಮ ಜನ್ಮಾಂತರಗಳ ಪಾಪವನ್ನು ನಾಶ ಮಾಡಿ ಜನನ ಮರಣಗಳ ಚಕ್ರದಿಂದ ನಮ್ಮನ್ನು ಬಿಡಿಸುತ್ತದೆಯೋ ಅದುವೇ ‘ಜಪ’. ಒಟ್ಟಿನಲ್ಲಿ ‘ನಾಮ ಜಪ’ವೆಂದರೆ ದೇವರ ನಾಮವನ್ನು ಈಶ್ವರ ಪ್ರಾಪ್ತಿಯ ಸಾಧನೆಯೆಂದು ಪುನಃ ಪುನಃ ಹೇಳುತ್ತಿರುವುದು.
ನಾಮಜಪ / ನಾಮಸ್ಮರಣೆಯ ವೈಶಿಷ್ಟ್ಯಗಳು : ವೇದಗಳಿಗಿಂತ ನಾಮವು ಶ್ರೇಷ್ಠವಾಗಿದೆ. ಏಕೆಂದರೆ ಓಂಕಾರವೆಂಬ ನಾಮದಿಂದಲೇ ವೇದಗಳ ಉತ್ಪತ್ತಿಯಾಗಿದೆ. ವೇದಗಳು, ಉಪನಿಷತ್ತುಗಳು, ಗೀತೆ ಇತ್ಯಾದಿಗಳ ಅಭ್ಯಾಸವು ಎಲ್ಲರಿಂದಲೂ ಸಾಧ್ಯವಾಗದು. ಆದರೆ ನಾಮದ ಅಭ್ಯಾಸವನ್ನು ಯಾರೂ ಮಾಡಬಲ್ಲರು. ಅದರಿಂದ ಸತತವಾಗಿ ದೇವರೊಂದಿಗೆ ಅನುಸಂಧಾನ ಹೊಂದಬಲ್ಲರು. ಪರಮೇಶ್ವರನ ರೂಪವು ತೇಜ ತತ್ವಕ್ಕೆ ಸಂಬಂಧಿಸಿದ್ದರೆ, ಆತನ ನಾಮವು ತೇಜ ತತ್ವಕ್ಕಿಂತಲೂ ಶ್ರೇಷ್ಠವಾದ ಆಕಾಶ ತತ್ವಕ್ಕೆ ಸಂಬಂಧಿಸಿದೆ.
ಅನಾದಿಕಾಲದಿಂದಲೂ ನಾವು ಆಚರಿಸುತ್ತಿರುವ, ಪಾಲಿಸುತ್ತಿರುವ ಸನಾತನ ಧರ್ಮದಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಕಾರಣಗಳು ಹಾಗು ಅರ್ಥಗಳು ಒಳಗೊಂಡಿರುತ್ತವೆ. ಪರಮಾತ್ಮನ ಶಕ್ತಿಯ ಮುಂದೆ ಆಗದು ಎಂಬುದು ಏನೂ ಇಲ್ಲ..
(ಸಂಗ್ರಹ )
ಕೇಂದ್ರ ಸರ್ಕಾರದ ಈ ಬಾರಿ ಬಜೆಟ್ ಮೇಲೆ ರೈತಾಪಿ ವರ್ಗ ಬಹಳ ನಿರೀಕ್ಷೆ…
ಸಾರಡ್ಕದಲ್ಲಿ ನಡೆದ ಕೃಷಿಹಬ್ಬದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರ…
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…