Advertisement
MIRROR FOCUS

ಅಬುಧಾಬಿಯಲ್ಲಿ ಏಷ್ಯಾದ ಅತೀ ದೊಡ್ಡ ಹಿಂದೂ ದೇವಾಲಯ | ಸ್ವಾಮೀಜಿ, ಮೌಲ್ವಿ, ಪಾದ್ರಿ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಂದಿರ ಉದ್ಘಾಟನೆ

Share

ಮುಸ್ಲಿಮರ (Muslim) ನಾಡಿನಲ್ಲಿ ಹಿಂದೂ ದೇವಾಲಯ (Hindu temple) ಉದ್ಘಾಟನೆಯಾಗಿದೆ. ಮರುಭೂಮಿಯ (desert) ನಾಡಿನಲ್ಲಿ ಇನ್ನು ಮುಂದೆ ಮಂತ್ರಘೋಷ ಕೇಳಿಸಲಿದೆ. ಅಬುಧಾಬಿಯಲ್ಲಿ(Abu Dhabi) ನಿರ್ಮಾಣಗೊಂಡಿದ್ದ ಬಿಎಪಿಎಸ್ ಸ್ವಾಮಿ ನಾರಾಯಣ ದೇವಾಲಯವನ್ನು (BAPS Swami Narayan Temple) ಭಾರತದ(India) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಉದ್ಘಾಟಿಸಿದ್ದಾರೆ. 27 ಎಕರೆ ಜಾಗದಲ್ಲಿ ತಲೆಯೆತ್ತಿರುವ ಬೃಹತ್ ದೇಗುಲಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚವಾಗಿದೆ.

Advertisement
Advertisement
Advertisement

ಏಷ್ಯಾದ ಅತೀ ದೊಡ್ಡ ಹಿಂದೂ ದೇವಾಲಯ (largest Hindu temple in Asia) ಎಂಬ ಖ್ಯಾತಿಯೂ ಬಿಎಪಿಎಸ್ ಸ್ವಾಮಿ ನಾರಾಯಣ ದೇಗುಲಕ್ಕೆ ಸಿಕ್ಕಿದೆ. ಅಂದ ಹಾಗೆ ವಿಶ್ವದ 3ನೇ ಅತಿದೊಡ್ಡ ಹಿಂದೂ ದೇಗುಲವ ಎಂಬ ಖ್ಯಾತಿಯೂ ಇದಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಇದೀಗ ದೇಗುಲ ಉದ್ಘಾಟಿಸಿದ್ದು, ಈ ವೇಳೆ ಸ್ವಾಮೀಜಿಗಳು, ಪಾದ್ರಿ, ಮುಸ್ಲಿಂ ಮೌಲ್ವಿಗಳು ಸೇರಿದಂತೆ ಹಲವು ಧರ್ಮಗಳ ಗುರುಗಳು ಜೊತೆಯಿದ್ದು, ಸಾಮರಸ್ಯ ಸಾರಿದ್ರು. ಈ ಅಪರೂಪದ ಕ್ಷಣವನ್ನು ಯುಎಇಯಲ್ಲಿರುವ (UAE) ಅಸಂಖ್ಯಾತ ಹಿಂದೂಗಳು ಕಣ್ತುಂಬಿಕೊಂಡರು.

Advertisement

ದೇಗುಲ ಉದ್ಘಾಟಿಸಿದ ನರೇಂದ್ರ ಮೋದಿ : ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಮೊದಲು ದೇಗುಲಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಸ್ವಾಮಿ ನಾರಾಯಣ ಪಾದದ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಕೆಲ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು. ಬಳಿಕ ಈ ಅದ್ಭುತ ದೇಗುಲವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಜಲಾಭಿಷೇಕ ಮಾಡುವ ಮೂಲಕ ಈ ದೇಗುಲವನ್ನು ಉಧ್ಘಾಟನೆ ಮಾಡಲಾಯ್ತು.

ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾದ ಕ್ಷಣ : ಈ ವೇಳೆ ಬಿಎಎಸ್‌ಪಿ ಸ್ವಾಮಿ ನಾರಾಯಣ ಸಂಸ್ಥೆ ಮುಖ್ಯಸ್ಥರು, ಹಿಂದೂ ಧರ್ಮದ ಗುರುಗಳು, ಮುಸ್ಲಿಂ ಮೌಲ್ವಿಗಳು, ಕ್ರಿಶ್ಚಿಯನ್ ಧರ್ಮದ ಪಾದ್ರಿಗಳು ಸೇರಿದಂತೆ ವಿವಿಧ ಧರ್ಮಗಳ ಮುಖಂಡರು ಪ್ರಧಾನಿ ಮೋದಿಯವರಿಗೆ ಸಾಥ್ ನೀಡಿದ್ರು. ಈ ಮೂಲಕ ಧರ್ಮ ಸಾಮರಸ್ಯದ ಅದ್ಭುತ ಕ್ಷಣಕ್ಕೆ ಅಬುಧಾಬಿಯ ಈ ದೇಗುಲ ಸಾಕ್ಷಿಯಾಯ್ತು.

Advertisement
7 ಎಮಿರೇಟ್ಸ್‌ನ ಸಂಕೇತವಾಗಿ 7 ಶಿಖರಗಳು
  • 7 ಶಿಖರಗಳು
  • 12 ಗುಮ್ಮಟಗಳು
  • 410 ಸ್ತಂಭಗಳು
  • 30,000 ಕೆತ್ತಿದ ಕಲ್ಲಿನ ಶಿಲ್ಪಗಳು
  • 300 ಲೋಡ್ ಸಂವೇದಕಗಳು
  • 1800000 ಇಟ್ಟಿಗೆಗಳು
  • 689,512 ಮಾನವ ಗಂಟೆಗಳ ಕಾಲ ಕೆಲಸ
  • 10 ದೇಶಗಳಿಂದ 30 ವೃತ್ತಿಪರರು
  • 55 ಸಿ ಗಿಂತ ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲ ಕಟ್ಟಡ
  • ಎತ್ತರ: 108 ಅಡಿ
  • ಅಗಲ: 180 ಅಡಿ
  • ಉದ್ದ: 262 ಅಡಿ

ಅಬುಧಾಬಿ ಹಿಂದೂ ದೇಗುಲದ ವಿಶೇಷತೆಗಳು

  • ಮುಸ್ಲಿಂ ಪ್ರಾಬಲ್ಯದ ದೇಶದಲ್ಲಿ ನಿರ್ಮಾಣಗೊಂಡಿರುವ ಮೊದಲ ಹಿಂದೂ ದೇಗುಲ
  • ಇದು ಈ ಯುಎಇಯಲ್ಲಿ ಕಲ್ಲಿನನಿಂದ ನಿರ್ಮಾಣಗೊಂಡಿರುವ ಮೊದಲ ದೇಗುಲ
  • ಪಶ್ಚಿಮ ಏಷ್ಯಾದಲ್ಲಿಯೇ ದೊಡ್ಡ ದೇವಾಲಯ ಎಂಬ ಖ್ಯಾತಿ ಇದಕ್ಕಿದೆ
  • ಇದು 27 ಎಕರೆಯಲ್ಲಿ ಸುಮಾರು 700 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
  • ಇದು ದೇಶದ ಯುಎಇ ರಾಷ್ಟ್ರಗಳ ಪ್ರತಿ ಎಮಿರೇಟ್ ಅನ್ನು ಪ್ರತಿನಿಧಿಸುವ ಗುಲಾಬಿ ಮರಳುಗಲ್ಲು ಮತ್ತು ಏಳು ಶಿಖರಗಳನ್ನು ಒಳಗೊಂಡಿರಲಿದೆ
  • ದೇವಾಲಯಕ್ಕೆ 40,000 ಕ್ಯೂಬಿಕ್ ಮೀಟರ್ ಅಮೃತಶಿಲೆ, 1,80,000 ಘನ ಮೀಟರ್ ಸ್ಟ್ಯಾಂಡ್ ಸ್ಟೋನ್ ಮತ್ತು 18 ಲಕ್ಷಕ್ಕೂ ಹೆಚ್ಚು ಇಟ್ಟಿಗೆಗಳನ್ನು ಬಳಸಲಾಗಿದೆ
  • ಇಲ್ಲಿಯವರೆಗೆ 4 ಲಕ್ಷ ಗಂಟೆಗಳ ಕಾಲ ಕೆಲಸ ಮಾಡಲಾಗಿದೆ.
  • ಬೃಹತ್ ದೇವಾಲಯ ಕಾಂಪ್ಲೆಕ್ಸ್ 108 ಅಡಿ ಎತ್ತರದಲ್ಲಿ ನಿಲ್ಲುತ್ತದೆ.
  • ದೇವಾಲಯದ ವಿನ್ಯಾಸವು ವೈದಿಕ ವಾಸ್ತುಶಿಲ್ಪ ಮತ್ತು ಕಲಾಕೃತಿಗಳಿಂದ ಪ್ರೇರಿತವಾಗಿದೆ.
  • ಭಾರತದ ಕಲಾವಿದರಿಂದ ಅನೇಕ ಶಿಲ್ಪಗಳು ಮತ್ತು ಕಲಾಕೃತಿಗಳನ್ನು ನಿರ್ಮಿಸಿ, ಅವುಗಳನ್ನು ಅಬುಧಾಬಿಗೆ ಕಳುಹಿಸಲಾಗಿದೆ.
  • ಧಾರ್ಮಿಕ ಕಾರ್ಯಗಳಿಗಷ್ಟೇ ಅಲ್ಲದೆ, ದೇವಾಲಯದ ಕಾಂಪ್ಲೆಕ್ಸ್​ಗಳ ಕೊಠಡಿಗಳು, ಪ್ರದರ್ಶನ ಕೇಂದ್ರಗಳು ಮತ್ತು ಮಕ್ಕಳಿಗಾಗಿ ಆಟದ ಮೈದಾನಗಳು ಇವೆ.

ಏನಿದು ಬಿಎಪಿಎಸ್‌? : BAPS ಅಂದರೆ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ. BAPS ವೇದಗಳಲ್ಲಿ ಬೇರೂರಿರುವ ಸಾಮಾಜಿಕ-ಆಧ್ಯಾತ್ಮಿಕ ಹಿಂದೂ ನಂಬಿಕೆಯನ್ನು ಪ್ರತಿನಿಧಿಸುತ್ತದೆ, 18 ನೇ ಶತಮಾನದ ಕೊನೆಯಲ್ಲಿ ಭಗವಾನ್ ಸ್ವಾಮಿನಾರಾಯಣರಿಂದ ಪ್ರವರ್ತಕ ಮತ್ತು 1907 ರಲ್ಲಿ ಶಾಸ್ತ್ರೀಜಿ ಮಹಾರಾಜ್ ಅವರಿಂದ ಔಪಚಾರಿಕವಾಗಿ ಸ್ಥಾಪಿಸಲಾಯಿತು.

Advertisement

ವಿಶ್ವದಾದ್ಯಂತ ಹಲವು ದೇವಾಲಯಗಳ ರೂವಾರಿ: ದೆಹಲಿಯಲ್ಲಿರುವ ಪ್ರಸಿದ್ಧ ಅಕ್ಷರಧಾಮ ದೇವಾಲಯ, ನ್ಯೂಜೆರ್ಸಿಯಲ್ಲಿರುವ ಭಾರತದ ಹೊರಗಿನ ಅತಿದೊಡ್ಡ ಹಿಂದೂ ದೇವಾಲಯ ಸೇರಿ BAPS ವಿಶ್ವಾದ್ಯಂತ 1,100 ಕ್ಕೂ ಹೆಚ್ಚು ಹಿಂದೂ ದೇವಾಲಯಗಳನ್ನು ನಿರ್ಮಿಸಿದೆ.

  • ಅಂತರ್ಜಾಲ ಮಾಹಿತಿ
A Hindu temple has been inaugurated in a Muslim country. Mantra Ghosha will be heard in the land of the desert. BAPS Swami Narayan Temple which was built in Abu Dhabi (Abu Dhabi) was inaugurated by the Prime Minister of India Narendra Modi (Prime Minister Narendra Modi). The huge temple which stands on 27 acres of land has cost 700 crore rupees.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

9 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

12 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

13 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

4 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

4 days ago