ಅಡಿಕೆ ಸಾಗಾಣಿಕೆಯ ಎರಡು ಪ್ರಕರಣ | ಮುಂದುವರಿದ ಬರ್ಮಾ ಅಡಿಕೆ ಕಳ್ಳಸಾಗಾಟ | ಮಿಜೋರಾಂನಲ್ಲಿ ಪತ್ತೆಯಾಯ್ತು ಅಡಿಕೆ |

March 23, 2025
7:20 AM
ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ಮತ್ತೆ ಮುಂದುವರಿದಿದೆ. ಈ ಬಾರಿ ಅಸ್ಸಾಂ ಹಾಗೂ ತ್ರಿಪುರಾ ರೈತರು ಕೂಡಾ ಅಡಿಕೆ ಕಳ್ಳಸಾಗಾಣಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಅಡಿಕೆ ಸಾಗಾಟದ ಲಾರಿಗಳು ಕೂಡಾ ಅಪಹರಣದ ಘಟನೆಗಳೂ ನಡೆಯುತ್ತಿದೆ.

ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಮಿಜೋರಾಂನಲ್ಲಿ 1.08 ಕೋಟಿ ರೂ. ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಚಂಫೈ ಜಿಲ್ಲೆಯ ಜೊಟೆಯಲ್ಲಿ 180 ಚೀಲಗಳಲ್ಲಿ ಇದ್ದ ದೊಡ್ಡ ಪ್ರಮಾಣದ ಅಡಿಕೆ ಸಾಗಾಟ ಪ್ರಕರಣವು ಬೆಳಕಿಗೆ ಬಂದಿದೆ. ಈ ಅಡಿಕೆಯನ್ನು ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮಾಡಿ ಕಾಡಿನಲ್ಲಿ ಅಡಗಿಸಿಡಲಾಗಿತ್ತು. ………ಮುಂದೆ ಓದಿ……..

Advertisement

ಮ್ಯಾನ್ಮಾರ್ ಜೊತೆ ಬೇಲಿಯಿಲ್ಲದ ಗಡಿಭಾಗವನ್ನು ಹಂಚಿಕೊಂಡಿರುವ ಚಾಂಫೈ ಜಿಲ್ಲೆಯಲ್ಲಿ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿದೆ. ಅಡಿಕೆ ಮಾತ್ರವಲ್ಲ ಇದರ ಜೊತೆಗೆ ಕೆಲವು ಮಾದಕ ವಸ್ತುಗಳೂ ಕಳ್ಳಸಾಗಾಣಿಕೆಯಾಗುತ್ತಿದೆ. ಮ್ಯಾನ್ಮಾರ್‌ನ ಚಿನ್ ರಾಜ್ಯವು  ಮಿಜೋರಾಂ ಜಿಲ್ಲೆಗಳಾದ ಚಾಂಫೈ, ಸಿಯಾಹಾ, ಲಾಂಗ್ಟ್ಲೈ, ಹನ್ನಾಥಿಯಲ್, ಸೈತುಯಲ್ ಮತ್ತು ಸೆರ್ಚಿಪ್ ಮೂಲಕ ಕಳ್ಳಸಾಗಾಣಿಕೆಯ ದಾರಿಯಾಗಿದೆ. ಇದೀಗ ಮ್ಯಾನ್ಮಾರ್‌ನಿಂದ ದೊಡ್ಡ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಣೆಯಾಗುತ್ತಿರುವುದು ಭಾರತದ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಅಡಿಕೆ ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಭಾರತದ ಕಡೆಗೆ ಅಡಿಕೆ ಆಮದು ಮಾಡಿಕೊಂಡ ಕಾರಣ ಅಸ್ಸಾಂ ಸರ್ಕಾರವು ಅಡಿಕೆ ಸಾಗಾಟ ಮೇಲೆಯೇ ನಿರ್ಬಂಧಗಳನ್ನು ವಿಧಿಸಿತ್ತು, ಇದು ತ್ರಿಪುರಾದಿಂದ  ಇತರ ಭಾಗಗಳಿಗೆ ಅಡಿಕೆ ಸಾಗಣೆಯ ಮೇಲೆ ಪರಿಣಾಮ ಬೀರಿತು. ಬಳಿಕ ಸರ್ಕಾರ ಮಾತುಕತೆಗಳ ಮೂಲಕ ತ್ರಿಪುರಾದಿಂದ ಅಸ್ಸಾಂಗೆ ಅಡಿಕೆ ಪೂರೈಕೆಗೆ ಸಂಬಂಧಿಸಿದ ರೈತರ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ಇದೀಗ ಮತ್ತೆ ಅಡಿಕೆ ಕಳ್ಳಸಾಗಾಣಿಕೆ ರೈತರಿಗೆ ಆತಂಕ ಮೂಡಿಸಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಅಸ್ಸಾಂ ಮೂಲಕ ತ್ರಿಪುರಾದಲ್ಲಿ ಬೆಳೆದ ಅಡಿಕೆಯ ಸುಗಮ ಸಾಗಣೆ ಮತ್ತು ವ್ಯಾಪಾರಕ್ಕಾಗಿ ಎರಡೂ ರಾಜ್ಯಗಳು ಮಾತುಕತೆ ನಡೆಸಿದ್ದವು. ಅದಾದ ಬಳಿಕ ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮಾಡಿದ ಅಡಿಕೆ ಸಾಗಣೆಗೆವಿರುದ್ಧ ಕ್ರಮಕ್ಕೆ ಎರಡೂ ಸರ್ಕಾರಗಳೂ ಸಮ್ಮತಿಸಿದ್ದವು. ಇದೀಗ ಇದೆಲ್ಲದರ ಹೊರತಾಗಿಯೂ ಅಡಿಕೆ ಕಳ್ಳಸಾಗಾಣಿಕೆಗೆ ನಡೆಯುತ್ತಿದೆ.

ಈ ನಡುವೆ  ಅಸ್ಸಾಂನ ರಂಗಿಯಾದಲ್ಲಿ  ಅಡಿಕೆ ಸಾಗಿಸುತ್ತಿದ್ದ ಲಾರಿಯನ್ನು 6 ಜನರ ತಂಡವೊಂದು ಅಪರಹಿಸಿದೆ ಎಂದು  ಆರೋಪಿಸಲಾಗಿದೆ. ಮಧ್ಯರಾತ್ರಿಯ ಸುಮಾರಿಗೆ ದುಷ್ಕರ್ಮಿಗಳು ಲಾರಿಯ ಮೇಲೆ ದಾಳಿ ನಡೆಸಿ ಚಾಲಕ ಮತ್ತು ಸಹಾಯಕ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.  ಅಸ್ಸಾಂನ ಗುವಾಹಟಿಯಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಲಾರಿಯನ್ನು  ಅಪಹರಣಕಾರರು ತಡೆದರು ಎಂದು ಆರೋಪಿಸಲಾಗಿದೆ. ಮಾರ್ಚ್ 10 ರಂದು ಬೊಕೊದ ಬಂಡಪಾರದಲ್ಲಿ ನಡೆದ ಇದೇ ರೀತಿಯ ಘಟನೆ ನಡೆದಿತ್ತು. ಪೊಲೀಸರು ದೂರು ದಾಖಲಿಸಿಕೊಂಡು ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು
April 24, 2025
6:45 AM
by: The Rural Mirror ಸುದ್ದಿಜಾಲ
ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ
82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ
April 24, 2025
6:10 AM
by: ದ ರೂರಲ್ ಮಿರರ್.ಕಾಂ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror