ಬೃಹತ್‌ ಪ್ರಮಾಣದಲ್ಲಿ ಅಡಿಕೆ ಅಕ್ರಮ ದಾಸ್ತಾನು ಪತ್ತೆ | ಮಣಿಪುರದಲ್ಲಿ 6 ಸಾವಿರಕ್ಕೂ ಅಧಿಕ ಅಡಿಕೆ ಚೀಲ ವಶಕ್ಕೆ |

December 30, 2023
2:37 PM
ಬೃಹತ್‌ ಪ್ರಮಾಣದಲ್ಲಿ ಅಡಿಕೆ ದಾಸ್ತಾನು ಅಸ್ಸಾಂ ರೈಫಲ್ಯ ಪಡೆ ವಶಕ್ಕೆ ಪಡೆದಿದೆ. ಅಕ್ರಮ ಅಡಿಕೆ ಸಾಗಟಕ್ಕೆ ತಡೆಗೆ ಸತತ ಪ್ರಯತ್ನವಾಗುತ್ತಿದೆ.

ಅಡಿಕೆ ಅಕ್ರಮ ಸಾಗಾಟದ ವಿರುದ್ಧ ಮತ್ತೆ ಅಸ್ಸಾಂ ಗಡಿ ಭದ್ರತಾ ಪಡೆ ಕಾರ್ಯಾಚರಣೆ ಚುರುಕುಗೊಳಿಸಿದೆ. ಶುಕ್ರವಾರ ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯಲ್ಲಿ ಸುಮಾರು 6785 ಅಡಿಕೆ ಚೀಲವನ್ನು ವಶಕ್ಕೆ ತೆಗೆದುಕೊಂಡಿದೆ. ಈ ಅಡಿಕೆಯ ಮೌಲ್ಯ ಸುಮಾರು 46 ಕೋಟಿ ರೂಪಾಯಿ ಎಂದು ಅಸ್ಸಾಂ ರೈಫಲ್ಸ್‌  ತಿಳಿಸಿದೆ.

ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯ ವಾಂಗ್ಲೀ ಗ್ರಾಮದ ಕೆಲವು ಪ್ರದೇಶದಲ್ಲಿ ಅಡಿಕೆ ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಅಸ್ಸಾಂ ರೈಫಲ್ಸ್‌ ಶೋಧ ಕಾರ್ಯ ಆರಂಭ ಮಾಡಿತ್ತು. ವಾಂಗ್ಲೆ ಗ್ರಾಮ, ನಮ್ಲೀ ಗ್ರಾಮ ಮತ್ತು ನಮ್ಲೀ ಮಾರುಕಟ್ಟೆಯ ಸುತ್ತಮುತ್ತಲಿನ 13 ಮನೆಗಳಲ್ಲಿ ಸಂಪೂರ್ಣ ಶೋಧ ನಡೆಸಿದಾಗ, ನಾಗಾಲ್ಯಾಂಡ್, ಅಸ್ಸಾಂ ಮತ್ತು ಉತ್ತರದ ಇತರ ಭಾಗಗಳಿಗೆ ಕಾಳಸಂತೆ ಮಾರಾಟಕ್ಕಾಗಿ ಬರ್ಮಾ ಅಡಿಕೆ ದಾಸ್ತಾನು ಆಗಿರುವುದು  ಕಂಡುಬಂದಿತ್ತು. ಒಟ್ಟು 6,785 ಚೀಲ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ನಡುವೆ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಕೂಡಾ ಇನ್ನೊಂದು ಅಡಿಕೆ ಸಾಗಾಟ ಪ್ರಕರಣವನ್ನು ಅಸ್ಸಾಂ ರೈಫಲ್ಸ್‌ ತಡೆ ಹಿಡಿದಿದೆ ಎಂದು UNI ವರದಿ ಮಾಡಿದೆ.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್
March 12, 2025
7:19 AM
by: The Rural Mirror ಸುದ್ದಿಜಾಲ
 ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ
March 12, 2025
7:13 AM
by: The Rural Mirror ಸುದ್ದಿಜಾಲ
ಕೆಂಪು ಮೆಣಸಿನಕಾಯಿ ಬೆಳೆಗಾರರಿಗೆ ಸಂಕಷ್ಟ | ಬೆಂಬಲ ಬೆಲೆ ಯೋಜನೆ ರಾಜ್ಯಕ್ಕೂ ವಿಸ್ತರಿಸುವಂತೆ ಮುಖ್ಯಮಂತ್ರಿ ಪತ್ರ | ಕೇಂದ್ರದ ಗಮನ ಸೆಳೆದ ಸಚಿವರು |
March 12, 2025
7:10 AM
by: The Rural Mirror ಸುದ್ದಿಜಾಲ
ಅಕ್ರಮ ಮರಳು ಗಣಿಗಾರಿಕೆ | 5 ವರ್ಷಗಳಲ್ಲಿ 47 ಕೋಟಿ ರೂಪಾಯಿ ದಂಡ ಸಂಗ್ರಹ
March 12, 2025
6:58 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror