ಅಸ್ಸಾಂ ರೈಫಲ್ಸ್ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಅಕ್ರಮ ಕಳ್ಳಸಾಗಣೆ ಯತ್ನದಲ್ಲಿದ್ದ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡಿದೆ. ಈ ಸಂದರ್ಭ ಸುಮಾರು 83.16 ಲಕ್ಷ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದೆ.
ಭಾರತೀಯ ಭೂಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಮೂರು ವಾಹನಗಳನ್ನು ತಡೆಹಿಡಿದು ತಪಾಸಣೆ ನಡೆಸಿದ ಅಸ್ಸಾಂ ರೈಫಲ್ಸ್ ತಂಡವು 231 ಗೋಣಿಚೀಲಗಳು, ಅಂದಾಜು 18,480 ಕೆಜಿ ಅಡಿಕೆಯನ್ನು ವಶಪಡಿಸಿಕೊಂಡಿದೆ. ಹಲವು ಸಮಯಗಳ ಬಳಿಕ ಮತ್ತೆ ಅಡಿಕೆ ಕಳ್ಳಸಾಗಾಣಿಕೆಯ ಕಡೆಗೆ ಗಡಿಭದ್ರತಾ ಪಡೆಗಳು ನಿಗಾ ಇರಿಸಿಕೊಂಡಿದೆ. ಈ ನಡುವೆಯೂ ಕಳ್ಳಸಾಗಾಣಿಕೆಗೆ ಪ್ರಯತ್ನ ನಡೆಯುತ್ತಲೇ ಇದೆ.
ವರ್ಷದಲ್ಲಿ ಒಟ್ಟು 248 ಪ್ರಕರಣ ಪತ್ತೆ : ವರ್ಷವಿಡೀ ನಡೆದ ಸರಣಿ ಕಾರ್ಯಾಚರಣೆಯಲ್ಲಿ ಅಸ್ಸಾಂ ರೈಫಲ್ಸ್ ಟ್ಟು 248 ಪ್ರಕರಣ ದಾಖಲಿಸಿದೆ. ಡಿಸೆಂಬರ್ 25, ರ ಹೊತ್ತಿಗೆ ಒಟ್ಟು 681.03 ಕ್ವಿಂಟಲ್ ಅಡಿಕೆ ಸೇರಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel