2024 – 25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ವಿಚಾರವಾಗಿ ಒಂದು ಮುಖ್ಯವಾದ ವಿಚಾರವನ್ನು ಶಿಕ್ಷಣ ಇಲಾಖೆ ಹಂಚಿಕೊಂಡಿದೆ. ಹಂಚಿಕೊಂಡ ಮಾಹಿತಿ ಪ್ರಕಾರ ವಿದ್ಯಾರ್ಥಿಗಳು ಶಾಲೆಗೆ ಸೇರಲು ಅಂದರೆ ಒಂದನೇ ತರಗತಿಗೆ ಸೇರಲು ಗರಿಷ್ಟ ವಯೋಮಿತಿಯನ್ನು(Age Limit) ನಿಗದಿಪಡಿಸಲಾಗಿದೆ. ಆ ಪ್ರಕಾರ ಮಕ್ಕಳನ್ನು 8ನೇ ವರ್ಷದ ಒಳಗಡೆ ಶಾಲೆಗೆ ಸೇರಿಸಲು ಸೂಚನೆ ನೀಡಲಾಗಿದೆ.
1ನೇ ತರಗತಿಗೆ ಸೇರಿಸಲು ವಯೋಮಿತಿ ನಿಗದಿಗೊಳಿಸಿದ ಶಿಕ್ಷಣ ಇಲಾಖೆ 8 ವರ್ಷ ಮೀರಿದರೆ ಇನ್ನು 1ನೇ ಕ್ಲಾಸಿಗೆ ಪ್ರವೇಶವಿಲ್ಲ ಎಂದು ಹೇಳಿದೆ. LKG, UKG 1ನೇ ಕ್ಲಾಸಿಗೆ ವಯೋಮಿತಿ ನಿಗದಿ ಪಡಿಸಿದ ಶಿಕ್ಷಣ ಇಲಾಖೆ 1ನೇ ತರಗತಿಗೆ ಸೇರಿಸಲು ಗೊಂದಲ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿದೆ.
LKG : 4ರಿಂದ 6 ವರ್ಷ UKG : 5 ರಿಂದ 7 ವರ್ಷ 1ನೇ ತರಗತಿ : 6 ರಿಂದ 8 ವರ್ಷ ಎಂದು ಈ ಮೇಲಿನಂತೆ ವಯೋಮಿತಿಯನ್ನು ನಿರ್ಧಾರ ಮಾಡಲಾಗಿದೆ. ಹೀಗಿದ್ದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಆರರಿಂದ ಎಂಟನೇ ವರ್ಷದ ಒಳಗಾಗಿ ಶಾಲೆಗೆ ಸೇರಿಸಲೇಬೇಕು. ಶಿಕ್ಷಣ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕಾಗಿದೆ. 8 ವರ್ಷ ದಾಟಿದ ಮಕ್ಕಳು ಶಾಲೆಗೆ ಸೇರಲು ಬಂದರೆ ಅ ಮಗುವನ್ನ ಶಾಲೆ ಬಿಟ್ಟ ಮಕ್ಕಳು ಎಂದು ಪರಿಗಣಿಸಿ ಎಂಬ ಸೂಚನೆಯನ್ನು ನೀಡಿದ್ದಾರೆ. ಅವರ ವಯಸ್ಸಿಗೆ ತಕ್ಕಂತೆ ತಕ್ಕ ತರಗತಿಗೆ ಪ್ರವೇಶ ನೀಡಲು ಸೂಚನೆ ನೀಡಲಾಗಿದೆ.
– ಅಂತರ್ಜಾಲ ಮಾಹಿತಿ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…