ಭಾರತದಲ್ಲಿ ವಾಹನಗಳ ಮಾರಾಟ ಬಹಳ ಚುರುಕುಗೊಂಡಂತಿದೆ. ಫೆಬ್ರುವರಿ ತಿಂಗಳಲ್ಲಿ ವರ್ಷವಾರು ಲೆಕ್ಕದಲ್ಲಿ ವಾಹನಗಳ ಮಾರಾಟ ಶೇ. 16ರಷ್ಟು ಹೆಚ್ಚಾಗಿದೆ. ಅಂದರೆ 2022ರ ಫೆಬ್ರುವರಿ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಫೆಬ್ರುವರಿಯಲ್ಲಿ ಶೇ. 16ರಷ್ಟು ಹೆಚ್ಚು ವಾಹನಗಳು ಸೇಲ್ ಆಗಿವೆ.
2023ರ ಫೆಬ್ರುವರಿಯಲ್ಲಿ 17,75,424 ವಾಹನಗಳು ಮಾರಾಟಕ್ಕೆ ನೊಂದಣಿಯಾಗಿವೆ ಎಂದು ಆಟೊಮೊಬೈಲ್ ಡೀಲರ್ಗಳ ಸಂಘಟನೆ ಎಫ್ಎಡಿಎ (FADA) ಮಾಹಿತಿ ನೀಡಿದೆ. ದ್ವಿಚಕ್ರ ವಾಹನ, ಪ್ಯಾಸೆಂಜರ್ ವಾಹನಗಳ ಮಾರಾಟವೂ ಇದರಲ್ಲಿ ಒಳಗೊಂಡಿದೆ. ಹಿಂದಿನ ವರ್ಷದ ಫೆಬ್ರುವರಿಯಲ್ಲಿ 15,31,196 ವಾಹನಗಳ ಮಾರಾಟವಾಗಿತ್ತು. ಹತ್ತಿರಹತ್ತಿರ ಎರಡೂವರೆ ಲಕ್ಷದಷ್ಟು ಹೆಚ್ಚು ವಾಹನಗಳು ಈ ವರ್ಷದ ಫೆಬ್ರುವರಿಯಲ್ಲಿ ಸೇಲ್ ಆಗಿವೆ.
ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಈ ಫೆಬ್ರುವರಿಯಲ್ಲಿ 2,87,182 ವಾಹನಗಳು ಮಾರಾಟ ಕಂಡಿವೆ. ಹಿಂದಿನ ವರ್ಷದ ಫೆಬ್ರುವರಿಗೆ ಹೋಲಿಸಿದರೆ ಈ ಬಾರಿಯದ್ದು ಶೇ. 11ರಷ್ಟು ಹೆಚ್ಚು. ದ್ವಿಚಕ್ರ ವಾಹನಗಳು ಮಾರಾಟ ಶೇ. 15ರಷ್ಟು ಹೆಚ್ಚಾಗಿದೆ. ಒಟ್ಟು 12,67,233 ಟು–ವ್ಹೀಲರ್ಗಳು ಫೆಬ್ರುವರಿಯಲ್ಲಿ ಸೇಲ್ ಆಗಿವೆ.
ದ್ವಿಚಕ್ರ ವಾಹನಗಳು 2022ರ ಫೆಬ್ರುವರಿಯಲ್ಲಿಗಿಂತ ಶೇ. 15ರಷ್ಟು ಹೆಚ್ಚು ಮಾರಾಟ ಕಂಡಿವೆಯಾದರೂ ಕೋವಿಡ್ ಮುಂಚಿನ ಸಂದರ್ಭಕ್ಕೆ ಹೋಲಿಸಿದರೆ ಕಡಿಮೆಯೇ ಇದೆ. ಅಂದರೆ 2020ರ ಫೆಬ್ರವರಿಯಲ್ಲಿ ಶೇ. 14ರಷ್ಟು ಹೆಚ್ಚು ದ್ವಿಚಕ್ರ ವಾಹನಗಳು ಸೇಲ್ ಆಗಿದ್ದವು.
2023 ಫೆಬ್ರವರಿಯಲ್ಲಿ ವಾಹನಗಳ ಮಾರಾಟ ವಿವರ
ಪ್ಯಾಸೆಂಜರ್ ವಾಹನಗಳು: 2,87,182 ದ್ವಿಚಕ್ರ ವಾಹನಗಳು: 12,67,233 ಕಮರ್ಷಿಯಲ್ ವಾಹನಗಳು: 79,027 ತ್ರಿಚಕ್ರ ವಾಹನಗಳು: 72,994 ಟ್ರಾಕ್ಟರ್ ವಾಹನಗಳು: 68,988 ಒಟ್ಟು ಮಾರಾಟ: 17,75,424
ಈ ಮೇಲಿನ ವಾಹನಗಳ ಮಾರಾಟವು ರೀಟೇಲ್ ಸೇಲ್ನದ್ದಾಗಿದೆ. ಅಂದರೆ ವಾಹನಗಳ ಶೋರೂಮ್ ಮೂಲಕ ಮಾರಾಟವಾದ ಮತ್ತು ಮಾರಾಟಕ್ಕೆ ನೊಂದಣಿಯಾದ ವಾಹನಗಳ ಸಂಖ್ಯೆ ಇದು. ಮುಂದೆ ಹಬ್ಬದ ಸೀಸನ್ ಇರುವುದರಿಂದ ವಾಹನಗಳ ಮಾರಾಟಕ್ಕೆ ಇನ್ನಷ್ಟು ಪುಷ್ಟಿ ಸಿಗಬಹುದು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಹೆಚ್ಚು ವಾಹನಗಳನ್ನು ಜನರು ಖರೀದಿಸುವ ಸಾಧ್ಯತೆ ಇದೆ ಎಂಬುದು ಆಟೊಮೊಬೈಲ್ ಉದ್ಯಮಿಗಳ ನಿರೀಕ್ಷೆ.
ಆದರೆ, ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ವೆಚ್ಚಕ್ಕೆ ಮುಂದಾಗುತ್ತಿಲ್ಲ. ಹಣ ಉಳಿತಾಯಕ್ಕೆ ಒತ್ತುಕೊಡುವುದು ಹೆಚ್ಚಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ವಾಹನ ಮಾರಾಟದ ನಾಗಾಲೋಟಕ್ಕೆ ಬ್ರೇಕ್ ಹಾಕಿದರೂ ಹಾಕಬಹುದು.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…