ಉತ್ತರಾಖಂಡದ ಹಿಮಾಲಯ ಪ್ರದೇಶದ ಕೇದಾರನಾಥ ಹಿಂದೆ ಶನಿವಾರ ಭಾರೀ ಹಿಮಕುಸಿತ (avalanche) ಸಂಭವಿಸಿದೆ. ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಮಾಹಿತಿಯ ಪ್ರಕಾರ, ಕೇದಾರನಾಥದ ಹಿಂದಿನ ಹಿಮನದಿಯು ಕಳೆದ ತಿಂಗಳಿನಿಂದ ಎರಡನೇ ಬಾರಿಗೆ ಹಿಮದಿಂದ ಮುಳುಗಿದೆ.ಶನಿವಾರ ಬೆಳಗ್ಗೆ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ದೇಗುಲದಿಂದ ಸುಮಾರು 6-7 ಕಿಲೋಮೀಟರ್ ದೂರದಲ್ಲಿರುವ ಚೋರಬರಿ ಗ್ಲೇಶಿಯಲ್ ಸರೋವರ ಪ್ರದೇಶದ ಕೇದಾರ್ ಶಿಖರ ಪ್ರದೇಶದಲ್ಲಿ ಭಾರಿ ಹಿಮಕುಸಿತ ಸಂಭವಿಸಿತ್ತು. ಕೇದಾರನಾಥ ದೇಗುಲದ ಮೂಲಕ ಹರಿಯುವ ಮಂದಾಕಿನಿ ನದಿಯ ಉಪನದಿಯಾದ ಸರಸ್ವತಿ ನದಿಯಲ್ಲಿ ಯಾವುದೇ ಜೀವಹಾನಿ, ಆಸ್ತಿಪಾಸ್ತಿ ಅಥವಾ ನೀರಿನ ಮಟ್ಟದಲ್ಲಿ ಹೆಚ್ಚಳದ ಬಗ್ಗೆ ವರದಿಯಾಗಿಲ್ಲ ಮತ್ತು ಎಂದಿನಂತೆ ಯಾತ್ರೆ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.ಕಳೆದ ತಿಂಗಳು ಸೆಪ್ಟೆಂಬರ್ 22 ರಂದು ಇದೇ ಪ್ರದೇಶದಲ್ಲಿ ಹಿಮಕುಸಿತ ವರದಿಯಾಗಿತ್ತು.Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel

