ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದಿರುವ ಕಪ್ಪತ ಗುಡ್ಡ ಬೆಂಕಿಗೆ ಆಹುತಿ ಆಗುವುದನ್ನು ತಪ್ಪಿಸುವ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಕಪ್ಪತಗುಡ್ಡ ಸಾಕಷ್ಟು ಸಸ್ಯ ವೈವಿಧ್ಯತೆ ಮತ್ತು ವನ್ಯಜೀವಿಯಿಂದ ಕೂಡಿದೆ. ಬೇಸಿಗೆ ಆರಂಭದಲ್ಲೇ ಗುಡ್ಡಕ್ಕೆ ಬೆಂಕಿ ತಗುಲಿ ಹೆಚ್ಚಿನ ಪ್ರದೇಶ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ಮುಂದೆ ಕಾಡ್ಗಿಚ್ಚು ತಪ್ಪಿಸುವ ದೃಷ್ಠಿಯಿಂದ ಕಪ್ಪತಗುಡ್ಡ ತಪ್ಪಲಿನ ಗ್ರಾಮಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಗ್ರಾಮಗಳಲ್ಲಿ ಭಿತ್ತಿ ಪತ್ರಗಳ ಪ್ರದರ್ಶನ, ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಗುಡ್ಡದ ತಪ್ಪಲಿನಲ್ಲಿರುವ ಜಮೀನುಗಳು ಹಾಗೂ ಕಪ್ಪತಗುಡ್ಡದಲ್ಲಿ ಯಾರೂ ಬೆಂಕಿ ಹಚ್ಚದಂತೆ ಎಚ್ಚರಿಕೆ ನೀಡಲಾಗುತ್ತಿದೆ.
ಬಿಸಿಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗಬೇಡಿ, ಕಪ್ಪು /ಘಾಡ ಬಣ್ಣದ, ಹಾಗೂ…
ಮಾರ್ಚ್ 17ರಿಂದ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿಯ ಹೆಚ್ಚಿನ ಭಾಗಗಳಲ್ಲಿ…
ನಿಯಮಗಳು ಎಷ್ಟೇ ಇದ್ದರೂ ಹಲವು ಸಂದರ್ಭದಲ್ಲಿ ಅಭದ್ರತೆಯೂ ಅಷ್ಟೇ ಇದೆ...ಸಹಕಾರಿ ಸಂಘದಲ್ಲಿ ಇದೆಲ್ಲಾ…
ಕುಂಭಮೇಳದ ಪಯಣದ ಅನುಭವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಅವರು ಕಳೆದ 8…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ರಾಜ್ಯದಲ್ಲಿ ರೈತರು ಬೆಳೆದ ಸಾಗುವಾನಿ, ಹುಣಸೆ, ಬೀಟೆ, ರೈನ್, ಫೆಲೋಫಾರಂ, ಹುಣಸೆ, ಬೇವು,…