ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರತಿಷ್ಟಾಪನೆಯ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿತ್ತು. ಎಲ್ಲೆಡೆಯೂ ಘೋಷಣೆ, ರಾಮತಾರಕ ಮಂತ್ರ ಜಪಿಸುತ್ತಿದ್ದಂತೆಯೇ ರಾಮಲಲ್ಲಾ ಪ್ರತಿಷ್ಟಾಪನೆ ನಡೆದಿತ್ತು. ಇದೇ ವೇಳೆ ಇಂದು ಇಡೀ ದೇಶದಲ್ಲಿ ರಾಮಜಪ. ಶುಭ ಕಾರ್ಯಕ್ರಮಗಳಲ್ಲಿ ಪರದೆಯ ಮೂಲಕ ರಾಮ ವೈಭವ ವೀಕ್ಷಿಸಿದರೆ, ದೇವಸ್ಥಾನಗಳಲ್ಲಿ ಬೃಹತ್ ಪರದೆಯ ಮೂಲಕ ನೇರ ಪ್ರಸಾರ ವೀಕ್ಷಣೆ. ಇಷ್ಟೇ ಅಲ್ಲ ಮನೆ ಮನೆಗಳಲ್ಲೂ ರಾಮನ ಪೂಜೆ ನಡೆಯಿತು. ಸೋಮವಾರ….
ಸೋಮವಾರ ಹಮ್ಮಿಕೊಂಡಿದ್ದ ಮದುವೆ, ಉಪನಯನ ಸೇರಿದಂತೆ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೂ ಅಯೋಧ್ಯೆಯ ನೇರ ಪ್ರಸಾರ ವೀಕ್ಷಣೆಗೆ ಟಿ ವಿ ಅಳವಡಿಕೆ ಮಾಡಲಾಗಿತ್ತು. ರಾಮಲಲ್ಲಾ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಜೈ ಶ್ರೀ ರಾಮ್ ಘೋಷಣೆ ಮೊಳಗಿತ್ತು .ಪ್ರತೀ ಮನೆಯಲ್ಲೂ ಸಂಭ್ರಮ ಮನೆಮಾಡಿತ್ತು. ಇದೇ ವೇಳೆ…
ಇದೇ ವೇಳೆ ಮನೆಗಳಲ್ಲಿ ರಾಮತಾರಕ ಹವನ, ರಾಮ ತಾರಕ ಮಂತ್ರ ಪಠಣ ನಡೆಯಿತು. ಸುಳ್ಯ ತಾಲೂಕಿನ ವಳಲಂಬೆಯ ಮುರಳಿಕೃಷ್ಣ ಭಟ್ ಅವರ ಮನೆಯಲ್ಲಿ ಇಡೀ ದಿನ ರಾಮಾರ್ಪಣಂ ಕಾರ್ಯಕ್ರಮವೇ ನಡೆಯಿತು. ಬೆಳಗ್ಗೆ ಶ್ರೀ ರಾಮತಾರಕ ಹವನ, ಲೋಕಕಲ್ಯಾಣಾರ್ಥವಾಗಿ ರಾಮತಾರಕ ಮಂತ್ರ ಜಪ, ನಡೆಯಿತು. ಸಂಜೆ ರಾಮಗೀತಾ ಕಾರ್ಯಕ್ರಮದ ಮೂಲಕ ಅಕ್ಷತಾ ಮುರಳಿಕೃಷ್ಣ ಭಟ್ ಅವರಿಂದ ರಾಮ ಗೀತೆ ನಡೆಯಿತು. ಈ ಹಾಡುಗಳನ್ನು ಯೂಟ್ಯೂಬ್ ಮೂಲಕ ನೇರಪ್ರಸಾರವನ್ನೂ ಮಾಡಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು,…
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…