Opinion

ಜೀರಿಗೆಯ ಆಯುರ್ವೇದ ಪ್ರಯೋಜನಗಳು | ದೇಹದ ವಿವಿಧ ಭಾಗಗಳಿಗೆ ತುಂಬಾ ಪ್ರಯೋಜನಕಾರಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಜೀರಿಗೆಯು(Cumin seeds) ಏಂಟಿ ಆಕ್ಸಿಡೆಂಟ್‌ಗಳಲ್ಲಿ(anti oxidant) ಸಮೃದ್ಧವಾಗಿದೆ. ಇದು ಫೈಬರ್, ತಾಮ್ರ, ಪೊಟ್ಯಾಸಿಯಮ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಸತು ಮತ್ತು ಮೆಗ್ನೀಸಿಯಂನಂತಹ ಖನಿಜಗಳನ್ನು(Iron) ಸಹ ಒಳಗೊಂಡಿದೆ. ಇದು ದೇಹದ ವಿವಿಧ ಭಾಗಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೇ ಜೀರಿಗೆಯಲ್ಲಿ ಹಲವು ಜೀವಸತ್ವ (Vitamin) ಗಳಿವೆ. ಜೀರಿಗೆಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.

Advertisement

ಚರ್ಮ : ಜೀರಿಗೆಯನ್ನು ಸೌಂದರ್ಯವರ್ಧಕ ಎಂದು ಕರೆಯಲಾಗುತ್ತದೆ. ಜೀರಿಗೆಯಲ್ಲಿ ಹಲವು ಬಗೆಯ ಖನಿಜಗಳು ಮತ್ತು ವಿಟಮಿನ್ ಗಳಿವೆ. ಇದು ಚರ್ಮದ ವಿಟಮಿನ್ ಇ ಅಗತ್ಯವನ್ನು ಪೂರೈಸುತ್ತದೆ. ಜೀರಿಗೆಯಲ್ಲಿ ವಿಟಮಿನ್ ಇ ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಜೀರಿಗೆ ನೀರನ್ನು ಪ್ರತಿನಿತ್ಯ ಸೇವಿಸಿದರೆ ಮುಖ ಕಾಂತಿಯುತವಾಗಿ ಮುಖದ ಮೇಲಿನ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ. ಜೀರಿಗೆಯು ಶಿಲೀಂದ್ರ ರೋಧಕ(ಆಂಟಿ ಫಂಗಲ್) ಗುಣಲಕ್ಷಣಗಳನ್ನು ಹೊಂದಿದೆ, ಅದು ಚರ್ಮವನ್ನು ಯಾವುದೇ ರೀತಿಯ ಸೋಂಕಿನಿಂದ ರಕ್ಷಿಸುತ್ತದೆ. ಇದಲ್ಲದೆ, ಜೀರಿಗೆಯನ್ನು ಸೋರಿಯಾಸಿಸ್ ಮತ್ತು ಎಸ್ಜಿಮಾವನ್ನು ಗುಣಪಡಿಸಲು ಬಳಸಲಾಗುತ್ತದೆ. ಬೇಕಿದ್ದರೆ ಜೀರಿಗೆ ಪುಡಿಯನ್ನು ಕೂಡ ಮುಖ ಲೇಪನ (ಫೇಸ್ ಪ್ಯಾಕ್) ದಲ್ಲಿ ಬಳಸಬಹುದು.

ಕೂದಲಿಗೆ : ಚರ್ಮದ ಆರೋಗ್ಯ ಹಾಗೂ ಸೌಂದರ್ಯಕ್ಕಾಗಿ ಜೀರಿಗೆ ಬೀಜಗಳ ಪ್ರಯೋಜನಗಳು ಕೂದಲಿಗೂ ಅನ್ವಯಿಸುತ್ತವೆ. ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯ ಕಪ್ಪು ಜೀರಿಗೆ ಲಭ್ಯವಿದೆ. ಈ ಜೀರಿಗೆ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಪ್ರತಿದಿನ ಕಪ್ಪು ಜೀರಿಗೆಯನ್ನು ಸೇವಿಸುವುದರಿಂದ ಕೂದಲು ದಟ್ಟವಾಗಿ, ಕಪ್ಪಾಗಿ ಮತ್ತು ಗಟ್ಟಿಯಾಗುತ್ತದೆ. ಇದಲ್ಲದೆ, ಕಪ್ಪು ಜೀರಿಗೆ ಬೀಜಗಳು ತಲೆ ಹೊಟ್ಟು ಸಮಸ್ಯೆ ಇರುವವರಿಗೆ ಸಹ ಪ್ರಯೋಜನಕಾರಿ. ತಲೆಹೊಟ್ಟು ಹೋಗಲಾಡಿಸಲು ಜೀರಿಗೆಯನ್ನು ಎಣ್ಣೆಯೊಂದಿಗೆ ಬಿಸಿ ಮಾಡಿ. ಈ ಬೆಚ್ಚಗಿನ ಎಣ್ಣೆಯಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಿ. ಈ ಎಣ್ಣೆಯನ್ನು 2 ರಿಂದ 3 ಬಾರಿ ಹಚ್ಚಿದರೆ ತಲೆಹೊಟ್ಟು ದೂರವಾಗುತ್ತದೆ.

ಜ್ವರ : ಜ್ವರದಿಂದಾಗಿ ಮೈಕೈ ನೋವು ಇರುವಾಗ ದುರ್ಬಲತೆಯ ಅನುಭವ ಸಹ ಆಗುತ್ತದೆ. ಹಾಗಿದ್ದಲ್ಲಿ ಜೀರಿಗೆ ಬೆಲ್ಲವನ್ನು ಬೆರೆಸಿ ಮಾತ್ರೆ ಮಾಡಿ ಎರಡು ಮೂರು ಬಾರಿಯಾದರೂ ತಿನ್ನಬೇಕು. ಜ್ವರ ಕಡಿಮೆಯಾಗುತ್ತದೆ. ನಿಮಗೆ ಜ್ವರ ಬಂದಾಗ ಜೀರಿಗೆ ನೀರನ್ನು ಸಹ ತೆಗೆದುಕೊಳ್ಳಬಹುದು. ಜೀರಿಗೆ ತಂಪಾಗಿಸುವ ಪರಿಣಾಮವು ದೇಹದಲ್ಲಿನ ಶಾಖವನ್ನು ತಕ್ಷಣವೇ ಕಡಿಮೆ ಮಾಡುತ್ತದೆ ಮತ್ತು ಜ್ವರವನ್ನು ಕಡಿಮೆ ಮಾಡುತ್ತದೆ.

ಶೀತ : ಶೀತ ದಿನಗಳಲ್ಲಿ ಮೂಗಿನ ಕಟ್ಟುವ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಆದರೆ ಕೆಲವರಿಗೆ ದೀರ್ಘಕಾಲದವರೆಗೆ ಈ ಸಮಸ್ಯೆ ಇರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಜೀರಿಗೆಯನ್ನು ಬಳಸಲು ಮರೆಯದಿರಿ. ಜೀರಿಗೆಯನ್ನು ಚೆನ್ನಾಗಿ ಹುರಿದು ಅದರಿಂದ ಬಟ್ಟೆಯಲ್ಲಿ ಕಟ್ಟು ತಯಾರಿಸಿ. ನಂತರ ಆಗಾಗ ಅದರ ವಾಸನೆ ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಸೀನುವುದು ನಿಲ್ಲುತ್ತದೆ. ಅಲ್ಲದೆ ಜೀರಿಗೆ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಒಂದು ಲೋಟ ಮಜ್ಜಿಗೆಯಲ್ಲಿ ಕಪ್ಪು ಉಪ್ಪು ಮತ್ತು ಹುರಿದ ಜೀರಿಗೆ ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ ನೀವು ಬೇಗನೇ ಚೇತರಿಸಿಕೊಳ್ಳುತ್ತೀರಿ.

ಹೊಟ್ಟೆ ನೋವು: ಹೊಟ್ಟೆ ನೋವು ಯಾವುದೇ ಸಮಯದಲ್ಲಿ ಸಂಭವಿಸಬಹುದು. ನಿಮಗೆ ಅಸಹನೀಯ ಹೊಟ್ಟೆ ನೋವು ಇದ್ದಾಗ, ಈ ಮನೆಮದ್ದನ್ನು ಖಂಡಿತವಾಗಿ ಪ್ರಯತ್ನಿಸಿ. ಹೊಟ್ಟೆ ನೋವು ಉಂಟಾದಾಗ ಸಮಪ್ರಮಾಣದ ಜೀರಿಗೆ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸ್ವಲ್ಪಮಟ್ಟಿಗೆ ತಿನ್ನಿರಿ. ಜೀರಿಗೆಯನ್ನು ಕಚ್ಚಿದ ನಂತರ ಅದರಿಂದ ಹೊರಬರುವ ರಸವು ತಕ್ಷಣವೇ ಪ್ರಯೋಜನಕಾರಿಯಾಗಿದೆ.

ಕೀಲು ನೋವು : ಮೆಂತ್ಯ, ಓಮಿನ ಕಾಳು ಮತ್ತು ಸೋಂಪು ಬೀಜಗಳನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕುಡಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ಪ್ರತಿದಿನ ಒಂದು ಚಮಚ ತಿನ್ನುವುದರಿಂದ ಮಧುಮೇಹ, ಕೀಲು ನೋವು ಮತ್ತು ಹೊಟ್ಟೆಯ ಅಸ್ವಸ್ಥತೆಗಳು ಬರುವುದಿಲ್ಲ. ಇದು ಗ್ಯಾಸ್ ಸಮಸ್ಯೆಗೂ ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದಾರೆ. ಆದ್ದರಿಂದ, ಇಂಥವರು ಆಹಾರ ಹಾಗೂ ಪಾನೀಯಗಳ ಮೇಲೆ ನಿರ್ಬಂಧಗಳನ್ನು ಹೊಂದಿರುತ್ತಾರೆ. ಜೀರಿಗೆ ಸೇವಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.

( ಸಂಕಲನ: ಆರ್ಯ ದೇವ್ ) ಕನ್ನಡಕ್ಕೆ ಅನುವಾದ: ಡಾ. ಕುಲಕರ್ಣಿ ಪಿ. ಎ.

Cumin seeds are rich in antioxidants. It also contains minerals like fiber, copper, potassium, manganese, calcium, zinc and magnesium. It is very beneficial for different parts of the body. Apart from this, there are many vitamins in cumin. Let’s know the benefits of eating cumin seeds.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ

ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…

10 hours ago

ರಬ್ಬರ್ ತೋಟಗಳ ಮಾಹಿತಿ ಸಂಗ್ರಹ | ರಬ್ಬರ್ ತೋಟಗಳ ಜಿಯೋ-ಮ್ಯಾಪಿಂಗ್

ನೈಸರ್ಗಿಕ ರಬ್ಬರ್ ಮತ್ತು ಅದರ ಉತ್ಪನ್ನಗಳು ಅರಣ್ಯನಾಶ ಮುಕ್ತ ನಿಯಮಗಳಿಗಾಗಿ ಯುರೋಪಿಯನ್ ಒಕ್ಕೂಟ…

10 hours ago

ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |

ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.

17 hours ago

ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ

ಖಾಸಗಿಯವರಿಂದ ಒತ್ತುವರಿಯಾಗಿರುವ  ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…

24 hours ago

ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ

ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…

24 hours ago

ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…

24 hours ago