ತಲೆನೋವು ಬೇರೆ ಬೇರೆ ಕಾರಣಗಳಿಂದ ಬರುತ್ತದೆ. ತಲೆ ನೋವಿಗೆ ಕಾರಣ ತಿಳಿದು ಶಾಶ್ವತ ಚಿಕಿತ್ಸೆನೀಡುವುದು ಅಗತ್ಯ.
ತಲೆ ನೋವಿಗೆ ಸಾಮಾನ್ಯ ಕಾರಣಗಳು: ಅಧಿಕ ಗ್ಯಾಸ್ಟ್ರಿಕ್ ಸಮಸ್ಯೆ ಅಜೀರ್ಣ,ಸೈನಸೈಟಿಸ್ ಮಲಬದ್ಧತೆ ನಿದ್ರೆಯ ಅಭಾವ, ಮಾನಸಿಕ ಒತ್ತಡ, ರಕ್ತದೊತ್ತಡ ಇತ್ಯಾದಿ.
ಮೈಗ್ರೈನ್ #Migraine ಸಾಮಾನ್ಯವಾಗಿ ತಲೆಯ ಒಂದು ಅಥವಾ ಎರಡು ಭಾಗಗಳಲ್ಲೂ ನೋವು ಕಾಣಿಸಿಕೊಳ್ಳುವುದು, ಇದರಲ್ಲಿ ವಾತ ಪಿತ್ತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಲಬದ್ಧತೆ, ಮೂಡ್ ಬದಲಾವಣೆ, ಆಹಾರದ ಕಡುಬಯಕೆ, ಕುತ್ತಿಗೆ ನೋವು ಆಯಾಸ, ದೌರ್ಬಲ್ಯ,ಸೂಜಿಯ ಸಂವೇದನೆ ಶಬ್ದಗಳನ್ನು ಕೇಳಿಸಿದ ಹಾಗೆ ಆಗುವುದು ಮಂದದ್ರಷ್ಟಿ ವಾಕರಿಕೆ, ವಾಂತಿ,ತಲೆ ತಿರುಗುವಿಕೆ ಗೊಂದಲ ಮನಸ್ಥಿತಿ, ಬೆಳಕು ಮತ್ತು ಧ್ವನಿಗೆ ಸೂಕ್ಷ್ಮತೆ ಹೀಗೆ ಮೊದಲಾದ ಲಕ್ಷಣಗಳನ್ನು ಮೈಗ್ರೇನ್ ತಲೆನೋವು ನಲ್ಲಿ ಕಾಣಬಹುದು.
ಮೈಗ್ರೇನ್ ತಲೆನೋವು ನಿಭಾಯಿಸುವಾಗ ವಾತ ಪಿತ್ತ ಅಸಮತೋಲನದ ಸಾಮಾನ್ಯ ಕಾರಣಗಳನ್ನು ಕಡಿಮೆ ಮಾಡುವುದು ಅತ್ಯಗತ್ಯ ಮಸಾಲಯುಕ್ತ ಹುಳಿ ಕಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು ಅತಿಯಾದ ಶೀತ ಅಥವಾ ಅತಿ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳುವುದು ಅತಿಯಾದ ಶ್ರಮ ರಾತ್ರಿಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು, ಹಸಿವು ಮತ್ತು ಪ್ರಚೋದನೆಗಳನ್ನು ನಿಗ್ರಹಿಸುವುದು,ಅತಿಯಾದ ಒತ್ತಡ ಧೂಮಪಾನ ಮತ್ತು ಬಲವಾದ ವಾಸನೆಗಳಿಗೆ ಒಡ್ಡಿಕೊಳ್ಳುವುದು ಇವುಗಳಿಂದ ದೂರವಿರುವುದರಿಂದ ಮೈಗ್ರೇನ್ ತಲೆನೋವನ್ನು ತಡೆಗಟ್ಟಬಹುದು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಮೈಗ್ರೇನ್ ಗೆ ಮೂಲ ಕಾರಣಕ್ಕೆ ಚಿಕಿತ್ಸೆ ನೀಡಲು ಹಲವು ಮಾರ್ಗಗಳನ್ನು ಸೂಚಿಸಲಾಗಿದೆ.
ಆಹಾರ: ಉಲ್ಬಣಗೊಂಡ ದೋಷವನ್ನು ತಿಳಿದು ಅದನ್ನು ಹೋಗಲಾಡಿಸುವ ಆಹಾರ ಕ್ರಮವನ್ನು ಪಾಲಿಸುವುದು ವಾತಪಿತ್ತಕರ ಆಹಾರಗಳನ್ನು ತ್ಯಜಿಸುವುದು.
ಪಂಚಕರ್ಮ ಚಿಕಿತ್ಸೆ :
ಶಿರೋ ಅಭ್ಯಂಗ: ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿದ ತೈಲಗಳಿಂದ ತಲೆಗೆ ಮಸಾಜ್ ಮಾಡುವುದು
ಶಿರೋದಾರ: ಔಷಧಿಯುಕ್ತ ತೈಲ ಅಥವಾ ಕಷಾಯಗಳಿಂದ ಹಣೆಯ ಮೇಲೆ ದಾರಾ ಮಾಡುವುದು
ನಸ್ಯಕರ್ಮ: ಪ್ರತಿ ಮೂಗಿನ ಹೊಳ್ಳೆಯಲ್ಲಿ ಔಷಧಿಭರಿತ ತುಪ್ಪ ಅಥವಾ ತೈಲಗಳನ್ನು ಮೂರರಿಂದ ಐದು ಹನಿ ಹಾಕುವುದು
ಯೋಗಾಸನ: ಮಾನಸಿಕ ಒತ್ತಡದಿಂದ ಉಂಟಾಗುವ ಮೈಗ್ರೇನಿಗೆ ಯೋಗವು ಉತ್ತಮ ಚಿಕಿತ್ಸೆ
ಧ್ಯಾನ: ಮಂತ್ರಗಳನ್ನು ಪಠಿಸುವುದರಿಂದ ಹಾಗೂ ಧ್ಯಾನ ಮಾಡುವುದರಿಂದ ಮೈಗ್ರೇನ್ ತಲೆನೋವು ಹಾಗೂ ಒತ್ತಡವು ಕಡಿಮೆಯಾಗುವುದು.
ಪ್ರಾಣಾಯಾಮ: ವಾತ ದೋಷ ಪ್ರಕೋಪದಿಂದ ಉಂಟಾಗುವ ಮೈಗ್ರೇನ್ ತಲೆ ನೋವಿಗೆ ಅನುಲೋಮ ವಿಲೋಮ ಪ್ರಾಣಾಯಾಮ ಹಾಗೂ ಪಿತ್ತ ಕಾರಣದಿಂದ ಉಂಟಾಗಿರುವ ತಲೆ ನೋವಿಗೆ ಶೀತಲಿ ಪ್ರಾಣಯಾಮ ಹಾಗೂ ಕಫದೋಷ ಕಾರಣದಿಂದ ಉಂಟಾಗಿರುವ ತಲೆ ನೋವಿಗೆ ಕಪಾಲಭಾತಿ ಪ್ರಾಣಾಯಾಮ ಮಾಡುವುದರಿಂದ ಮೈಗ್ರೇನ್
ತಲೆನೋವನ್ನು ತಡೆಗಟ್ಟಬಹುದು.
ಆಯುರ್ವೇದದ ಗಿಡಮೂಲಿಕೆಗಳಿಂದ ತಯಾರಿಸಲಾದ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ನಿರ್ದಿಷ್ಟ ಅವಧಿಯವರೆಗೆ ತೆಗೆದುಕೊಳ್ಳುವುದರಿಂದ ಮೈಗ್ರೇನ್ ತಲೆನೋವನ್ನು ತಡೆಗಟ್ಟಬಹುದು
ಸಂಪರ್ಕ : 94481 68053
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…