ಭೂತಾನ್ ನಿಂದ ಹಸಿ ಅಡಿಕೆ ಆಮದು.. ದೇಶಿ ಅಡಿಕೆ ದರಕ್ಕೆ ಯಾವುದೇ ಪರಿಣಾಮ ಬೀರದು.. ಈ ಹೇಳಿಕೆಯನ್ನು ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರು ಸೇರಿದಂತೆ ಎಲ್ಲಾ ಪ್ರಮುಖ ಸಹಕಾರಿಗಳೂ ನೀಡುತ್ತಿದ್ದಾರೆ. ಆದರೆ ಈ ಭೂತಾನ್ ಅಡಿಕೆ ಆಮದಿನ “ಮುಟ್ಟಸ” ಮಾಡಿದ ದಿನದಿಂದ ಅಡಿಕೆ ದರ ಕುಸಿಯುತ್ತಲೇ ಇದೆ. ಇದು ಏಕೆ?
ಮಲೆನಾಡಿನ ಅಸಂಖ್ಯಾತ ಚಿಕ್ಕ ಅತಿಚಿಕ್ಕ ಅಡಿಕೆ ಬೆಳೆಗಾರರಿಗೆ ಇದೊಂದು ಉಡುಗೊರೆಯನ್ನು ನಮ್ಮ ಸ್ಥಾಪಿತ ಮಾರುಕಟ್ಟೆ ಹಿತಾಸಕ್ತಿಗಳು ನಾವೇ ಅತ್ಯಂತ ಇಷ್ಟಪಟ್ಟು ಗೆಲ್ಲಿಸಿದ ಪಕ್ಷದ ಸರ್ಕಾರದ ಆಡಳಿತ ಯಂತ್ರವನ್ನು “ರಿಪೇರಿ” ಮಾಡಿಕೊಂಡು ಈ “ಬೂತ” ವನ್ನು ಆಮದು ಮಾಡಿ ಅಡಿಕೆ ಬೆಲೆ ಕುಸಿಯುವಂತೆ ಮಾಡುತ್ತಾರೆ. ಹದಿನೇಳು ಸಾವಿರ ಟನ್ ಹಸಿ ಅಡಿಕೆ ಯ ಆಮದಿನ ಜೊತೆಯಲ್ಲಿ ಇನ್ಯಾವ ಯಾವ ತರದ ಆಡಿಕೆ ಆ ಒಪ್ಪಂದ ಅಡಿಯಲ್ಲಿ “ನುಸುಳಿ ಕೊಂಡು “ಆಮದಾಗಿ ಬರುತ್ತದೋ…!! ಗೊತ್ತಿಲ್ಲ..!!
ಬಡ ಮದ್ಯಮ ಚಿಕ್ಕ ಹಿಡುವಳಿಯ ಅಡಿಕೆ ಬೆಳೆಗಾರ ನವೆಂಬರ್ ಡಿಸೆಂಬರ್ ನಲ್ಲಿ ತನ್ನ ಕೃಷಿ ಉತ್ಪನ್ನ ಬಿಸಿ ಬಿಸಿ ಅಡಿಕೆಯನ್ನು ಮಾರುಕಟ್ಟೆಗೆ ಕೊಂಡೊಯ್ದಾಗ ಯಥಾ ಪ್ರಕಾರ ಕೆಂಪಡಿಕೆಗೆ ಕ್ವಿಂಟಾಲ್ ಗೆ ನಲವತ್ತೆರೆಡು ಸಾವಿರ ರೂಪಾಯಿ ಮಾತ್ರ ವಾಗಿರುತ್ತದೆ.. ಈ ಐವತ್ತಾರು ಐವತ್ತೆಂಟು ಸಾವಿರ ರೂಪಾಯಿ ಅಡಿಕೆ ದರ ಅದೃಷ್ಟವಂತ ದೊಡ್ಡ ಅಡಿಕೆ ಬೆಳೆಗಾರರಿಗೆ ಮಾತ್ರ….
ಈಗ ಬಯಲು ಸೀಮೆಯ ಅಡಿಕೆ ಕೊಯ್ಲು ಆರಂಭಿಕವಾಗಿದೆ. ಸೆಪ್ಟೆಂಬರ್ ಅಕ್ಟೋಬರ್ ತಿಂಗಳು ಕಳೆದು ನವೆಂಬರ್ ಹೊತ್ತಿಗೆ ಮಲೆನಾಡಿನ ಅಡಿಕೆ ಬೆಳೆಗಾರ ಸುಗ್ಗಿ ಶುರುಮಾಡುವಾಗ ಬಯಲು ಸೀಮೆಯ ಅಡಿಕೆ ಮಾರುಕಟ್ಟೆ ಗೆ ಬಂದ ಪರಿಣಾಮ ಆಗ ಈ ನೆಪಕ್ಕೆ ಇನ್ನೂ ದರ ಕೆಳಕ್ಕೆ ಕುಸಿದಿರುತ್ತದೆ.
ಒಟ್ಟಿನಲ್ಲಿ ಅಡಿಕೆ ಆಮದಾದರೂ ದರ ಕುಸಿಯೋಲ್ಲ.. ಹುಚ್ಚಾಪಟ್ಟೆ ಅಡಿಕೆ ಬೆಳೆ ವಿಸ್ತರಣೆಯಾದರೂ ಅಡಿಕೆ ದರ ಕುಸಿಯೋಲ್ಲ..
ಆದರೆ ಮಾರುಕಟ್ಟೆಯಲ್ಲಿ ಬೆಲೆ ಮಾತ್ರ ಕಡಿಮೆಯಾಗುತ್ತದೆ. ಈ ಒಗಟಿಗೆ ಯಾರಾದರೂ ಬುದ್ದಿವಂತ ರೈತರು ಉತ್ತರ ಕೊಡುವಿರಾ..?
ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…
ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…