Advertisement
Opinion

ಯಾರೀಗೆ ಬೇಕು ಈ ತಲೆ ನೋವು…! | ಮೈಗ್ರೇನ್ ತಲೆನೋವಿಗೆ ಆಯುರ್ವೇದ ಚಿಕಿತ್ಸೆ ಬಗ್ಗೆ ತಿಳಿಯಿರಿ

Share

ತಲೆನೋವು ಬೇರೆ ಬೇರೆ ಕಾರಣಗಳಿಂದ ಬರುತ್ತದೆ. ತಲೆ ನೋವಿಗೆ ಕಾರಣ ತಿಳಿದು ಶಾಶ್ವತ ಚಿಕಿತ್ಸೆನೀಡುವುದು ಅಗತ್ಯ.

ತಲೆ ನೋವಿಗೆ ಸಾಮಾನ್ಯ ಕಾರಣಗಳು: ಅಧಿಕ ಗ್ಯಾಸ್ಟ್ರಿಕ್ ಸಮಸ್ಯೆ ಅಜೀರ್ಣ,ಸೈನಸೈಟಿಸ್ ಮಲಬದ್ಧತೆ ನಿದ್ರೆಯ ಅಭಾವ, ಮಾನಸಿಕ ಒತ್ತಡ, ರಕ್ತದೊತ್ತಡ ಇತ್ಯಾದಿ.
ಮೈಗ್ರೈನ್ #Migraine ಸಾಮಾನ್ಯವಾಗಿ ತಲೆಯ ಒಂದು ಅಥವಾ ಎರಡು ಭಾಗಗಳಲ್ಲೂ ನೋವು ಕಾಣಿಸಿಕೊಳ್ಳುವುದು, ಇದರಲ್ಲಿ ವಾತ ಪಿತ್ತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಲಬದ್ಧತೆ, ಮೂಡ್ ಬದಲಾವಣೆ, ಆಹಾರದ ಕಡುಬಯಕೆ, ಕುತ್ತಿಗೆ ನೋವು ಆಯಾಸ, ದೌರ್ಬಲ್ಯ,ಸೂಜಿಯ ಸಂವೇದನೆ ಶಬ್ದಗಳನ್ನು ಕೇಳಿಸಿದ ಹಾಗೆ ಆಗುವುದು ಮಂದದ್ರಷ್ಟಿ ವಾಕರಿಕೆ, ವಾಂತಿ,ತಲೆ ತಿರುಗುವಿಕೆ ಗೊಂದಲ ಮನಸ್ಥಿತಿ, ಬೆಳಕು ಮತ್ತು ಧ್ವನಿಗೆ ಸೂಕ್ಷ್ಮತೆ ಹೀಗೆ ಮೊದಲಾದ ಲಕ್ಷಣಗಳನ್ನು ಮೈಗ್ರೇನ್ ತಲೆನೋವು ನಲ್ಲಿ ಕಾಣಬಹುದು.

ಮೈಗ್ರೇನ್ ತಲೆನೋವು ನಿಭಾಯಿಸುವಾಗ ವಾತ ಪಿತ್ತ ಅಸಮತೋಲನದ ಸಾಮಾನ್ಯ ಕಾರಣಗಳನ್ನು ಕಡಿಮೆ ಮಾಡುವುದು ಅತ್ಯಗತ್ಯ ಮಸಾಲಯುಕ್ತ ಹುಳಿ ಕಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು ಅತಿಯಾದ ಶೀತ ಅಥವಾ ಅತಿ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳುವುದು ಅತಿಯಾದ ಶ್ರಮ ರಾತ್ರಿಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು, ಹಸಿವು ಮತ್ತು ಪ್ರಚೋದನೆಗಳನ್ನು ನಿಗ್ರಹಿಸುವುದು,ಅತಿಯಾದ ಒತ್ತಡ ಧೂಮಪಾನ ಮತ್ತು ಬಲವಾದ ವಾಸನೆಗಳಿಗೆ ಒಡ್ಡಿಕೊಳ್ಳುವುದು ಇವುಗಳಿಂದ ದೂರವಿರುವುದರಿಂದ ಮೈಗ್ರೇನ್ ತಲೆನೋವನ್ನು ತಡೆಗಟ್ಟಬಹುದು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಮೈಗ್ರೇನ್‌ ಗೆ ಮೂಲ ಕಾರಣಕ್ಕೆ ಚಿಕಿತ್ಸೆ ನೀಡಲು ಹಲವು ಮಾರ್ಗಗಳನ್ನು ಸೂಚಿಸಲಾಗಿದೆ.

ಆಹಾರ: ಉಲ್ಬಣಗೊಂಡ ದೋಷವನ್ನು ತಿಳಿದು ಅದನ್ನು ಹೋಗಲಾಡಿಸುವ ಆಹಾರ ಕ್ರಮವನ್ನು ಪಾಲಿಸುವುದು ವಾತಪಿತ್ತಕರ ಆಹಾರಗಳನ್ನು ತ್ಯಜಿಸುವುದು.

ಪಂಚಕರ್ಮ ಚಿಕಿತ್ಸೆ :

ಶಿರೋ ಅಭ್ಯಂಗ: ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿದ ತೈಲಗಳಿಂದ ತಲೆಗೆ ಮಸಾಜ್ ಮಾಡುವುದು
ಶಿರೋದಾರ:  ಔಷಧಿಯುಕ್ತ ತೈಲ ಅಥವಾ ಕಷಾಯಗಳಿಂದ ಹಣೆಯ ಮೇಲೆ ದಾರಾ ಮಾಡುವುದು
ನಸ್ಯಕರ್ಮ:  ಪ್ರತಿ ಮೂಗಿನ ಹೊಳ್ಳೆಯಲ್ಲಿ ಔಷಧಿಭರಿತ ತುಪ್ಪ ಅಥವಾ ತೈಲಗಳನ್ನು ಮೂರರಿಂದ ಐದು ಹನಿ ಹಾಕುವುದು
ಯೋಗಾಸನ:  ಮಾನಸಿಕ ಒತ್ತಡದಿಂದ ಉಂಟಾಗುವ ಮೈಗ್ರೇನಿಗೆ ಯೋಗವು ಉತ್ತಮ ಚಿಕಿತ್ಸೆ
ಧ್ಯಾನ: ಮಂತ್ರಗಳನ್ನು ಪಠಿಸುವುದರಿಂದ ಹಾಗೂ ಧ್ಯಾನ ಮಾಡುವುದರಿಂದ ಮೈಗ್ರೇನ್ ತಲೆನೋವು ಹಾಗೂ ಒತ್ತಡವು ಕಡಿಮೆಯಾಗುವುದು.

ಪ್ರಾಣಾಯಾಮ: ವಾತ ದೋಷ ಪ್ರಕೋಪದಿಂದ ಉಂಟಾಗುವ ಮೈಗ್ರೇನ್ ತಲೆ ನೋವಿಗೆ ಅನುಲೋಮ ವಿಲೋಮ ಪ್ರಾಣಾಯಾಮ ಹಾಗೂ ಪಿತ್ತ ಕಾರಣದಿಂದ ಉಂಟಾಗಿರುವ ತಲೆ ನೋವಿಗೆ ಶೀತಲಿ ಪ್ರಾಣಯಾಮ ಹಾಗೂ ಕಫದೋಷ ಕಾರಣದಿಂದ ಉಂಟಾಗಿರುವ ತಲೆ ನೋವಿಗೆ ಕಪಾಲಭಾತಿ ಪ್ರಾಣಾಯಾಮ ಮಾಡುವುದರಿಂದ ಮೈಗ್ರೇನ್
ತಲೆನೋವನ್ನು ತಡೆಗಟ್ಟಬಹುದು.

ಆಯುರ್ವೇದದ ಗಿಡಮೂಲಿಕೆಗಳಿಂದ ತಯಾರಿಸಲಾದ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ನಿರ್ದಿಷ್ಟ ಅವಧಿಯವರೆಗೆ ತೆಗೆದುಕೊಳ್ಳುವುದರಿಂದ ಮೈಗ್ರೇನ್ ತಲೆನೋವನ್ನು ತಡೆಗಟ್ಟಬಹುದು

ಬರಹ :
ಡಾ.ಜ್ಯೋತಿ , ಆಯುರ್ವೇದ ವೈದ್ಯರು, ಮಂಗಳೂರು.

ಸಂಪರ್ಕ : 94481 68053

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

1 hour ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

10 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

14 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago