ರಕ್ತದಾನದ ಮೂಲಕ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಗೆ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಸಿದ್ಧತೆ ನಡೆಸಿದೆ. ಇದೇ ವೇಳೆ ರಕ್ತ ದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ.
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು, ಅಮರ ಸೇನಾ ರಕ್ತ ದಾನಿಗಳ ತಂಡ , ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ. ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಆ.14 ರಂದು ಆಜಾದಿ ಕಾ ಅಮೃತ ಮಹೋತ್ಸವವನ್ನು ರಕ್ತದಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ರಕ್ತದಾನ ಮಾಡುವವರನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ರಕ್ತದಾನ ಕಾರ್ಯಕ್ರಮವು ಗುತ್ತಿಗಾರಿನ ಪ. ಪಂಗಡ ಸಭಾ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಟಸ್ಟ್ ವತಿಯಿಂದ ಆಂಬುಲೆನ್ಸ್ ಖರೀದಿಗೆ ಸಂಗ್ರಹ ಮಾಡಿದ ದೇಣಿಗೆಯ ಖರ್ಚು ವೆಚ್ಚಗಳ ಲೆಕ್ಕಪತ್ರ ವನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತದೆ. ರಕ್ತದಾನ ಮಾಡಲು ಆಸಕ್ತಿಯುಳ್ಳ ರಕ್ತದಾನಿಗಳು ಸಂಘಟಕರನ್ನು ಸಂಪರ್ಕ ಮಾಡಲು ಈ ಮೂಲಕ ವಿನಂತಿಸಲಾಗಿದೆ. ಸಂಪರ್ಕ: 9480199711
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…
ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…
ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಜೂನ್ 29 ರಿಂದ, …
ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು,…