#DIET | ತೂಕ ಇಳಿಸಲು ಸಮತೋಲಿತ ಆಹಾರ | ಇದು ಸರಿಯಿದ್ದರೆ ಆರೋಗ್ಯ ನಮ್ಮ ಕೈಯಲ್ಲೆ ಇರುತ್ತೆ

September 8, 2023
2:15 PM

ಡಯಟ್ #DIET ಅಂದರೆ ಸಮತೋಲಿತ ಉತ್ತಮ ಆಹಾರವನ್ನು #Food ಸರಿಯಾದ ಸಮಯದಲ್ಲಿ ತಿನ್ನುವುದು. ನಮ್ಮ ದೇಹ#Bodyಕ್ಕೆ ಬೇಕಾಗಿರುವ ಪ್ರಮಾಣಕ್ಕಿಂತ ಯಥೇಚ್ಛವಾಗಿ ತಿನ್ನುವುದರಿಂದ ದೇಹದ ತೂಕ#Weight ಹೆಚ್ಚಾಗುತ್ತದೆ.

ಸಾಮಾನ್ಯವಾಗಿ ದೇಹದ ತೂಕದಲ್ಲಿ ಕೊಂಚ ಜಾಸ್ತಿ ಆದರೂ ಖಿನ್ನತೆಗೆ ಒಳಗಾಗುತ್ತೇವೆ.ಅಧಿಕ ಬೊಜ್ಜಿನ ಸಮಸ್ಯೆಯಿಂದ ಅದೆಷ್ಟೋ ಯುವ ಜನರು ತಮ್ಮ ಬಗ್ಗೆ ತಾವೇ ಕೇಳರಿಮೆ ಹುಟ್ಟಿಸಿಕೊಂಡು ಒತ್ತಡಕ್ಕೆ ಸಿಲುಕಿರುತ್ತಾರೆ. ಆರೋಗ್ಯಕರ ಆಹಾರ ಸೇವನೆಯಿಂದ ದೇಹದ ತೂಕವನ್ನು ಸಮತೋಲನದಲ್ಲಿಡಬಹುದು ಹಾಗಾಗಿ ತಿನ್ನುವ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಅಗತ್ಯ ಪ್ರತಿದಿನ 20 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ಆರಂಭಿಸಿ, ನಂತರ ಜಾಗಿಂಗ್ ಮಾಡುವುದನ್ನು ಸೈಕ್ಲಿಂಗ್ ಮಾಡುವುದನ್ನು ಅಭ್ಯಾಸ ಮಾಡಿ ಇದರ ಜೊತೆಗೆ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಿಕೊಳ್ಳಿ.

ಊಟ ತಿಂಡಿಯನ್ನು ಸರಿಯಾದ ಸಮಯಕ್ಕೆ ಸೇವಿಸಿ. ಮನಸ್ಸಿಗೆ ಬಂದ ಸಮಯದಲ್ಲಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು ನಿಮ್ಮ ಊಟದೊಂದಿಗೆ ಪ್ರೋಟೀನ್ ಹಾಗೂ ನಾರಿನ ಅಂಶ ಅಧಿಕವಾಗಿರುವಂತೆ ನೋಡಿಕೊಳ್ಳಿ ಬೆಳಗ್ಗಿನ ಉಪಹಾರ ಬಹಳ ಮುಖ್ಯ ಇದು ದೇಹದಲ್ಲಿ ಚಯಾಪಚಯ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗಾಗಿ ಬೆಳಗಿನ ಉಪಹಾರ ಆರೋಗ್ಯಕರವಾಗಿರಬೇಕು ಹಣ್ಣುಗಳು ಹಾಗೂ ತರಕಾರಿಯಿಂದ ತಯಾರಿಸಿದ ಸಲಾಡನ್ನು ಬೆಳಿಗ್ಗೆ ಸೇವಿಸುವುದು ಉತ್ತಮ ಖಾಲಿ ಹೊಟ್ಟೆಯಲ್ಲಿ ಪಪ್ಪಾಯ ತಿಂದರೆ ಅದರಿಂದ ತೂಕಇಳಿಸಲು ತುಂಬಾ ನೆರವಾಗಲಿದೆ. ಯಾಕೆಂದರೆ ಈ ಹಣ್ಣಿನಲ್ಲಿರುವ ಪಪೈನ್ ಎನ್ನುವ ಅಂಶ ದೇಹದ ಕೊಬ್ಬನ್ನು ಕರಗಿಸಿ ಫ್ರೀ ರಾಡಿಕಲ್ ಗಳನ್ನು ದೂರ ಮಾಡುವುದು.ಇದು ಕಡಿಮೆ ಕ್ಯಾಲರಿಯನ್ನು ಹೊಂದಿದೆ.

ಲಿಂಬೆ ಹಣ್ಣಿನ ರಸವನ್ನು ಒಂದು ಲೋಟ ಬಿಸಿ ನೀರಿಗೆ ಹಿಂಡಿಕೊಂಡು ಸಕ್ಕರೆ ಮತ್ತು ಉಪ್ಪು ಹಾಕದೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ದೇಹದ ತೂಕ ಇಳಿಯುವುದು. ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುವುದು. ಹಸಿವಿದ್ದಾಗ ಮಾತ್ರ ತಿನ್ನಿ ಪದೇಪದೇ ತಿನ್ನುವ ಅಭ್ಯಾಸವನ್ನು ಬಿಟ್ಟರೆ ತೂಕ ಇಳಿಸಬಹುದು. ಉತ್ತಮ ಸಮತೋಲಿತ ಆಹಾರ ಉತ್ತಮ ವ್ಯಾಯಾಮ ಹಾಗೂ ದಿನನಿತ್ಯ ಯೋಗಾಭ್ಯಾಸ ದೇಹದ ತೂಕವನ್ನು ಸಮತೋಲನದಲ್ಲಿಡಬಹುದು. ಅಧಿಕ ತೂಕದಿಂದ ಅನೇಕ ಕಾಯಿಲೆಗಳು ಬರುವ ಸಾಧ್ಯತೆ ಇದೆ ಅವುಗಳಲ್ಲಿ ಪ್ರಮುಖವಾಗಿರುವುದು ಮಧುಮೇಹ PCOS ರಕ್ತದೊತ್ತಡ ಥೈರಾಯಿಡ್ ಸಮಸ್ಯೆ ಸಂಧಿವಾತ ಹೃದಯ ಸಂಬಂಧಿ ಕಾಯಿಲೆಗಳು ಇತ್ಯಾದಿ..

ಬರಹ :
Dr Jyothi k,  Laxmi Clinic Mangalore, 94481 68053
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..
January 10, 2026
10:33 PM
by: ರೂರಲ್‌ ಮಿರರ್ ಸುದ್ದಿಜಾಲ
ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳು ಸೇವನೆ ಉತ್ತಮ
January 9, 2026
9:23 PM
by: ರೂರಲ್‌ ಮಿರರ್ ಸುದ್ದಿಜಾಲ
ಬಿಳಿ ಅಕ್ಕಿ ತಿನ್ನುವುದರಿಂದ ದಪ್ಪ ಆಗುತ್ತದೆಯೇ..? ಆಹಾರ ವಿಜ್ಞಾನ ಏನು ಹೇಳುತ್ತದೆ..?
January 9, 2026
9:09 PM
by: ರೂರಲ್‌ ಮಿರರ್ ಸುದ್ದಿಜಾಲ
ಹೊಟ್ಟೆಯ ಕೊಬ್ಬು ಕರಗಿಸಲು ಸೋರೆಕಾಯಿ ಜ್ಯೂಸ್
January 8, 2026
9:20 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror