ಅನೇಕ ಸಮಯಗಳಿಂದ ರಸ್ತೆ ಸುಧಾರಣೆಗೆ ಮನವಿ ಮಾಡಿಯೂ ಪ್ರಯೋಜನವಾಗದ ಕಾರಣದಿಂದ ಗ್ರಾಮೀಣ ಭಾಗದ ಜನರು ರಸ್ತೆಗೆ ಬಾಳೆ ನೆಡುವ ಮೂಲಕ ತಮ್ಮ ಪ್ರತಿಭಟನೆಯನ್ನು ತೋರಿದ್ದಾರೆ. ಇದು ಬೇರೆಲ್ಲೂ ಅಲ್ಲ ಕಡಬ ತಾಲೂಕಿನ ಬಳ್ಪ ಗ್ರಾಮದ ಬೋಗಾಯನಕೆರೆ ಅಡ್ಡಬೈಲು ರಸ್ತೆ ಅವ್ಯವಸ್ಥೆ..!. ಇದು ಆದರ್ಶ ಗ್ರಾಮವೆಂದು ಘೋಷಣೆಯಾದ ರಸ್ತೆ ಮಾತ್ರವಲ್ಲ ರಾಜ್ಯದಲ್ಲೇ ನಂ.1. ಆದರ್ಶ ಗ್ರಾಮವೆಂದೂ ಹೇಳಲಾಗಿತ್ತು. ಇದೀಗ ಗ್ರಾಮೀಣ ಭಾಗದ ಜನರು ಸುಸ್ತಾಗಿದ್ದಾರೆ ದಿನವೂ ಈ ರಸ್ತೆಯಲ್ಲಿ ಸಂಚರಿಸಿ, ರಸ್ತೆ ದುರಸ್ತಿಗೆ ಮನವಿ ಮಾಡಿ ನೊಂದಿದ್ದಾರೆ., ಈಗ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಆದರೆ ಯೋಜನೆಯ ಉದ್ದೇಶ ಚೆನ್ನಾಗಿದೆ. ಯೋಜನೆ ಹೀಗಿದೆ…
ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗೆ ವ್ಯವಸ್ಥಿತ ರಸ್ತೆ. ಇದರಿಂದ ಇಂಧನ ಉಳಿತಾಯ. ದೇಶಕ್ಕೆ ಹಿತ. ವ್ಯವಸ್ಥಿತ ರಸ್ತೆ.. ಗ್ರಾಮೀಣ ಭಾಗದ ಕೃಷಿಕರಿಗೆ ಸ್ವಾವಲಂಬನೆಗೆ ರಹದಾರಿ. ವ್ಯವಸ್ಥಿತ ರಸ್ತೆ ತ್ವರಿತವಾದ ಕೆಲಸ ಕಾರ್ಯಗಳು,…!. ಈ ಸುಂದರವಾದ ಯೋಜನೆಗಳು ಗ್ರಾಮೀಣ ಭಾಗಕ್ಕೆ ತಲುಪಬೇಕು, ಅಷ್ಟೇ ಇಚ್ಚಾಶಕ್ತಿಯೂ ಇದ್ದರೆ…!. ಚುನಾವಣೆಯ ವೇಳೆ ಬರುವ ಆಯಾ ಪಕ್ಷದ ಕಾರ್ಯಕರ್ತರೂ ಇದರ ಎಚ್ಚರವಾಗಬೇಕು, ಗ್ರಾಮೀಣ ಜನರು ಹೇಳಿದ ಕೆಲಸ ಕಾರ್ಯಗಳು ಆಗುವಂತೆ ಒತ್ತಾಯಿಸಬೇಕು. ಚುನಾವಣೆಯ ವೇಳೆ ನಾಳೆಯೇ ರಸ್ತೆ ಎಂಬ ಆಶಾ ಗೋಪುರ ನೀಡಿ ಮರಳುವುದು ನಿಲ್ಲಬೇಕು. ಇಂತಹದ್ದೇ ಸ್ಥಿತಿ ಈಗ ಬಳ್ಪ ಗ್ರಾಮದಲ್ಲಿ ಕಂಡುಬಂದಿದೆ.
ಆದರ್ಶ ಗ್ರಾಮ ಎಂಬ ಭಾರೀ ಪ್ರಚಾರ ಸೃಷ್ಟಿ ಮಾಡಲಾಯಿತು. ಎಲ್ಲದಕ್ಕೂ ಪುಟಗಟ್ಟಲೆ ಮಾಹಿತಿ ಬಂದವು. ಜನರಿಗೆ ಆದರ್ಶ ಗ್ರಾಮ ಎಂದರೆ ಮೂಲಭೂತ ವ್ಯವಸ್ಥೆಗಳಾದ ರಸ್ತೆ, ನೀರು, ಸಂಪರ್ಕ ವ್ಯವಸ್ಥೆ ಮಾತ್ರಾ ಕಣ್ಣೆದುರು ಇತ್ತು. ಇದು ತಪ್ಪಲ್ಲ. ಸುಮಾರು ವರ್ಷಗಳಿಂದ ಜನರು ಸಂಕಷ್ಟ ಪಡುತ್ತಿದ್ದರು. ಈಗ ಆದರ್ಶ ಗ್ರಾಮ ಎಂದರೆ ಹಾಗಲ್ಲ ಎಂದರೆ ಜನರಿಗೆ ಅರ್ಥವೂ ಆಗದು.ಇದರ ವಿಷಾದ ಸ್ಥಿತಿಯೇ ರಸ್ತೆಗೆ ಬಾಳೆ ನೆಡುವ ಪರಿಸ್ಥಿತಿ..!