ಇತಿಹಾಸ ಪ್ರಸಿದ್ಧ , ಶಿಲಾಮಯ ದೇಗುಲ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಉತ್ಸವ ಆರಂಭವಾಗಿದ್ದು ಡಿ.30 ರಂದು ಬ್ರಹ್ಮರಥೋತ್ಸವ ಹಾಗೂ ಡಿ.31 ರಂದು ದರ್ಶನ ಬಲಿ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀವತ್ಸ ಎಂ ವಿ ಹಾಗೂ ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಅರ್ಗುಡಿ ಸದಾನಂದ ರೈ ತಿಳಿಸಿದ್ದಾರೆ.
ಸಂಪೂರ್ಣ ಶಿಲಾಮಯವಾದ, ದಕ್ಷಿಣ ಭಾರತದ ಅಪರೂಪದ ಶಿಲಾಮಯ ದೇಗುಲ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಉತ್ಸವಗಳು ಆರಂಭಗೊಂಡಿದೆ. ಡಿ.27 ರಿಂದ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಉತ್ಸವಾದಿಗಳು ನಡೆದು ಡಿ. 28 ರಿಂದ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉತ್ಸವಗಳು ಆರಂಭಗೊಳ್ಳುತ್ತಿದೆ.
ಡಿ.28 ರಂದು ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ಧಿ ಇತ್ಯಾದಿ ವೈದಿಕ ಕಾರ್ಯಗಳು ನಡೆದು ಡಿ.29 ರಂದು ಗಣಪತಿ ಹವನ, ನವಗ್ರಹ ಹವನ ಸಹಿತ ವೈದಿಕ ಕಾರ್ಯಕ್ರಮಗಳ ಬಳಿಕ ಡಿ.30 ರಂದು ಮಧ್ಯಾಹ್ನ ದೇವರು ರಥಾರೂಢರಾಗಿ ರಾತ್ರಿ 9.30 ಕ್ಕೆ ಬ್ರಹ್ಮರಥೋತ್ಸವ ಹಾಗೂ ಬಳ್ಪ ಬೆಡಿ, ಉತ್ಸವ ಬಲಿ, ಓಡುಬಲಿ ನಡೆಯಲಿದೆ. ಡಿ.31 ರಂದು ದರ್ಶನ ಬಲಿ ನಡೆದು ಸಂಜೆ ಅವಭ್ರತೋತ್ಸವ ನಡೆಯಲಿದೆ.
ಡಿ.30 ರಂದು ಸಂಜೆ 6 ಗಂಟೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನಾರ್ಚನೆ ನಡೆಯಲಿದೆ. ಸಿದ್ಧಿವಿನಾಯಕ ಸ್ಫೋಟ್ಸ್ ಕ್ಲಬ್ ಸಂಯೋಜಿಸುವ ಈ ಕಾರ್ಯಕ್ರಮದಲ್ಲಿ ಗಾನಸಾರಥಿ ಖ್ಯಾತಿ ಬನ್ಸಾಲೆ ರಾಘವೇಂದ್ರ ಆಚಾರ್ಯ, ಸ್ವರವಾರಿಧಿ ಖ್ಯಾತಿಯ ಕಾವ್ಯಶ್ರೀ ಅಜೇರು, ಯುವಭಾಗವತ ಪ್ರಶಾಂತ್ ರೈ ಪುತ್ತೂರು ಭಾಗವಹಿಸುವರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…