ಮಲೆನಾಡು ಭಾಗದಲ್ಲಿ ಕಾಡುಪ್ರಾಣಿ ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಈಚೆಗೆ ಕಳಸ ತಾಲೂಕಿನಲ್ಲಿ ಕಾಡುಕೋಣದ ದಾಳಿಗೆ ರೈತರೊಬ್ಬರು ಬಲಿಯಾಗಿದ್ದರು. ಈ ಹಿಂದೆ ಕೂಡಾ ಇಂತಹದ್ದೇ ಘಟನೆ ನಡೆದಿತ್ತು. ಹೀಗಾಗಿ ತಕ್ಷಣವೇ ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಳಸ ಬಂದ್ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಲಾಯಿತು. ಕಳಸ ತಾಲೂಕಿನಲ್ಲಿ ಕಾಡು ಕೋಣ ದಾಳಿಯಿಂದ ನಿನ್ನೆ ರೈತರೊಬ್ಬರು ಮೃತಪಟ್ಟಿದ್ದಾರೆ. ಈ ಹಿಂದೆ ಕೂಡ ಕಾಡಾನೆ, ಕಾಡು ಕೋಣಗಳ ದಾಳಿಗಳು ನಡೆದಿದ್ದು, ಅರಣ್ಯ ಇಲಾಖೆ ಸೂಕ್ತವಾಗಿ ಕ್ರಮಕೈಗೊಳ್ಳಬೇಕೆಂದು ತಾಲೂಕು ರೈತ ಸಂಘ, ಕಾಫಿ ಬೆಳೆಗಾರರ ಸಂಘಗಳು ಬಂದ್‌ಗೆ ಕರೆ ನೀಡಿದ್ದರು. ನಗರದಲ್ಲಿ ಹಲವು ಸಂಘಟನೆಗಳ ಮುಖಂಡರು ಕೂಡ ಪ್ರತಿಭಟನೆ ನಡೆಸಿದರು.
ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…
ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…
ಹೆಣ್ಣಿನ ಸ್ಥಾನಮಾನ, ಶೋಷಣೆ ಮತ್ತು ಸಬಲೀಕರಣದ ಪ್ರಶ್ನೆ ಬಂದಾಗ ತ್ಯಾಗ ಮತ್ತು ಮಮತೆಯ…
ಲಾ ನಿನಾ ಪ್ರಭಾವ ಇರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡು,…
ಅಷ್ಟೊಂದು ಪ್ರಮಾಣದ ಮಳೆಯು ಯಾವ ಮುನ್ಸೂಚನೆಯಲ್ಲೂ ಇರಲಿಲ್ಲ. ನಿರೀಕ್ಷೆಯೂ ಇರಲಿಲ್ಲ. ಬೆಳಿಗ್ಗೆ ಚಳಿ,…
ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ…