ಸುದ್ದಿಗಳು

#ShiradiGhat | ಬೆಂಗಳೂರು-ಮಂಗಳೂರು ಸಂಚಾರಕ್ಕೆ ಬೃಹತ್ ಯೋಜನೆ | ಶಿರಾಡಿ ಘಾಟ್ ಸುರಂಗ ಮಾರ್ಗಕ್ಕೆ ಕಾಯಕಲ್ಪ

Share

ಬೆಂಗಳೂರಿನಂತೆ ಬೆಳೆಯುತ್ತಿರುವ ಇನ್ನೊಂದು ನಗರ ಅದು  ಮಂಗಳೂರು. ಮಂಗಳೂರು ಹಾಗೂ ಬೆಂಗಳೂರಿಗೆ ಓಡಾಡುವ ಮಂದಿ ಬಹಳ. ಹಾಗೆ ಸರಕು ಸಾಗಾಣೆ ಯಥೇಚ್ಛವಾಗಿ ನಡೆಯುತ್ತದೆ. ಆದರೆ ಇದಕ್ಕೆ ಕಗ್ಗಾಂಟಾಗಿರುವುದು ಘಾಟ್ ಪ್ರದೇಶ. ಶಿರಾಡಿ, ಚಾರ್ಮಾಡಿ, ಬಿಸಲೆ, ಮಡಿಕೇರಿ. ಮಂಗಳೂರಿಗೆ ಎತ್ತಲಿಂದ ಬರಬೇಕಾದರು ಘಾಟ್ ದಾಟಿಯೇ ಬರಬೇಕು.  ಕೊನೆ ಪಕ್ಷ ಒಂದು ಕಡೆಯಿಂದಾದರು ಸುಲಭ ಸಂಚಾರ ಒದಗಿಸುವ ನಿಟ್ಟಿನಲ್ಲಿ ಇದೀಗ ಶಿರಾಡಿ ಘಾಟ್ #ShiradiGhat ಗೆ  ಕಾಯಕಲ್ಪ ನೀಡಲು ಸರ್ಕಾರ ಮುಂದಾಗಿದೆ.

Advertisement

ಬೆಂಗಳೂರು  ಮಂಗಳೂರು ನಡುವೆ ಕಗ್ಗಂಟಾಗಿರುವ ಶಿರಾಡಿ ಘಾಟ್ #ShiradiGhat ನಲ್ಲಿ ಬರೊಬ್ಬರಿ 3 ಕಿಲೋ ಮೀಟರ್ ಸುರಂಗ #Tunnel ,  10 ಕಿಲೋಮೀಟರ್ ಫ್ಲೈಓವರ್ ಒಳಗೊಂಡ ಒಟ್ಟು 30 ಕಿಲೋಮೀಟರ್ ಪರ್ಯಾಯ ಮಾರ್ಗ ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಬೆಂಗಳೂರು ಮಂಗಳೂರು ನಡುವೆ ಸುಲಭ ಹಾಗೂ ವೇಗ ಸಂಪರ್ಕಕ್ಕೆ ಬೇಕಾದ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಉತ್ಸಾಹ ತೋರಿದ್ದು ಎರಡು ವರ್ಷಗಳ ಹಿಂದೆಯೇ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಿದ್ದ ಕೇಂದ್ರ ಸರ್ಕಾರದ ಜೊತೆ ಮಾತುಕತೆಗೂ ವೇದಿಕೆ ಸಿದ್ದಗೊಂಡಿದ್ದು 10 ಸಾವಿರ ಕೋಟಿ ರೂಪಾಯಿ ಮೀರದ ಬೃಹತ್ ಯೋಜನೆ ಇದೀಗ ಹೊಸ ಚರ್ಚೆ ಹುಟ್ಟು ಹಾಕಿದೆ.

ಆದರೆ ಇಂತಹ ರಾಷ್ಟ್ರೀಯ ಹೆದ್ದಾರಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಹರಡಿರುವ ಪಶ್ಚಿಮಘಟ್ಟದ ತಪ್ಪಲಿನಲ್ಲಿನ ಶಿರಾಡಿ ಘಾಟ್ ಮೂಲಕ ಹಾದು ಹೋಗೋದರಿಂದ ಇಲ್ಲಿ ದಶಕಗಳಿಂದ ಸುಸಜ್ಜಿತ ರಸ್ತೆ ಇಲ್ಲ. ಇದ್ದರೂ ಮಳೆಗಾಲದಲ್ಲಿ ಯಾವಾಗ ಬೇಕಿದ್ರು ಆಗೋ ಗುಡ್ಡ ಕುಸಿತ, ಅಪಾರ ವಾಹನಗಳ ಸಂಚಾರದಿಂದ ಹಾಗೂ ಅತಿಯಾದ ಮಳೆಯಿಂದ ರಸ್ತೆ ಗುಣಮಟ್ಟ ಕಾಯ್ದುಕೊಳ್ಳಲು ತೊಡಕಾಗಿ ಈ ಮಾರ್ಗದ ವಾಹನ ಸವಾರರು ಪಡಬಾರದ ಪಾಡು ಪಡುತ್ತಿದ್ದಾರೆ.
ಈಗ ಈ ಮಾರ್ಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದರೂ ಭವಿಷ್ಯದಲ್ಲಿ ಹೆಚ್ಚಿನ ವಾಹನ ಸಂಚಾರ ಆದ್ರೆ ಆಗ ಪರ್ಯಾ ಮಾರ್ಗದ ಅವಶ್ಯಕತೆ ಮನಗಂಡ ಅಧಿಕಾರಿ ವರ್ಗ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿಯಿಂದ ಅಡ್ಡಹೊಳೆವರೆಗೆ 30 ಕಿಲೋ ಮೀಟರ್ ಪರ್ಯಾಯ ಮಾರ್ಗಕ್ಕೆ ನೀಲನಕ್ಷೆ ರೆಡಿ ಮಾಡಿದೆ.
ಎರಡು ದಿನಗಳ ಹಿಂದೆ ಶಿರಾಡಿ ಘಾಟ್ ಗೆ ಭೇಟಿ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹೊಸ ಯೋಜನೆ ಬಗ್ಗೆ ವಿವರಣೆ ಮಾಡಿರೋ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಯೋಜನೆಯ ಮಹತ್ವ ವಿವರಿಸಿದ್ದು ಯೋಜನೆ ಜಾರಿಯಾದ್ರೆ ಅಪಘಾತ ತಡೆ ಜೊತೆಗೆ ಬೆಂಗಳೂರು-ಮಂಗಳೂರು ನಡುವೆ, ವೇಗದ ಹಾಗೂ ಸುರಕ್ಷಿತ ಸಂಚಾರಕ್ಕೆ ಅವಕಾಶ ಆಗಲಿದೆ ಎನ್ನೋ ವಿಶ್ವಾಸವನ್ನು  ರವೀಂದ್ರ -ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಮಾರನಹಳ್ಳಿ ಬಳಿಯಿಂದ ಗುಂಡ್ಯವರೆಗೂ ಈ ಪರ್ಯಾಯ ರಸ್ತೆ ನಿರ್ಮಾಣವಾಗಲಿದೆ. ಅಡ್ಡಹೊಳೆ, ಗುಂಡ್ಯ, ಎಡಕುಮೇರಿ, ಕಡಗರವಳ್ಳಿ, ಮಾರನಹಳ್ಲಿ ಮೂಲಕ ಸುರಂಗ ಮಾರ್ಗ ಸಾಗಲಿದೆ. ಇದರಿಂದ ಈಗಾಗಲೆ ಬೆಂಗಳೂರಿನಿಂದ ಹಾಸನದ ವರೆಗೂ ಇರೋ ಚತುಷ್ಪತ ರಸ್ತೆ ಸಕಲೇಶಪುರದ ವೆರೆಗೂ ನಿರ್ಮಾಣ ಕಾರ್ಯ ಆಗುತ್ತಿರೋದರಿಂದ ಅದಕ್ಕೆ ಹೊಂದಿಕೊಂಡಂತೆ ಈ ಸುರಂಗ ನಿರ್ಮಾಣವಾದರೆ ಸರಕು ಸಾಗಣೆ ಸೇರಿ, ಇತರೆ ವಾಹನ ಸಂಚಾರಕ್ಕೂ ಅನುಕೂಲ ಆಗಲಿದೆ.

2018ರಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರೇ ಈ ಯೋಜನೆಯನ್ನ ಪ್ರಸ್ತಾಪ ಮಾಡಿ ಜಾರಿ ಬಗ್ಗೆ ಮಾತನಾಡಿದ್ದರು. ನಂತರ ಈ ಯೋಜನೆ ಬಗ್ಗೆ ಸಾಕಷ್ಟು ಪರ ವಿರೋದಿ ಚರ್ಚೆಗಳ ಕಾರಣದಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇದೀಗ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರೋ ಹೊಸ ಸರ್ಕಾರ ಈ ಯೋಜನೆ ಬಗೆಗೆ ಆಸಕ್ತಿ ತೋರಿದ್ದು, ಈ ಬಗ್ಗೆ ಶೀಘ್ರವೇ ಕೇಂದ್ರ ಸಚಿವರನ್ನು ಭೇಟಿಯಾಗೋದಾಗಿ ಹೇಳಿರೋ ಲೋಕೋಪಯೋಗಿ ಸಚಿವರು, ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು, ಪರಿಸರ ವಲಯ ಆಗಿರೋದರಿಂದ ಪರಿಸರದ ಮೇಲೂ ಯಾವುದೇ ಹಾನಿ ಆಗೋದಿಲ್ಲ ಎನ್ನೋದನ್ನ ಖಾತ್ರಿ ಮಾಡಿಕೊಂಡೇ ಈ ಯೋಜನೆ ಜಾರಿ ಬಗ್ಗೆ ತೀರ್ಮಾನ ಮಾಡೋದಾಗಿ ಹೇಳಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 11-04-2025 | ಕೆಲವು ಕಡೆ ಗುಡುಗು ಸಹಿತ ಮಳೆ ಸಾಧ್ಯತೆ | ಮುಂದಿನ 10 ದಿನಗಳವರೆಗೂ ಮಳೆ ಅಲ್ಲಲ್ಲಿ ಮಳೆಯ ಸಾಧ್ಯತೆ

ಅಲ್ಲಲ್ಲಿ ಗುಡುಗು ಸಹಿತ ಸಂಜೆ, ರಾತ್ರಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮುಂದಿನ…

9 minutes ago

ಪರಿಸರಕ್ಕೆ ಕೊಡುಗೆಯಾಗಬಹುದು ಅಡಿಕೆ ಮರ | ಅಡಿಕೆ ಮರಕ್ಕೆ ಮೌಲ್ಯ ತರಲು ಒಂದು ದಾರಿ | ಒಂದು ಮರಕ್ಕೆ ಕನಿಷ್ಟ 700 ರೂಪಾಯಿ ಪಡೆಯಬಹುದು ಹೇಗೆ ?

ಪರಿಸರ ಪ್ರೇಮಿಗಳಿಗೆ, ನಗರದಲ್ಲಿ ಹೂವು, ಸಣ್ಣ ಸಣ್ಣ ಗಿಡ ಬೆಳೆಸುವವರಿಗೆ ಹೂಕುಂಡವಾಗಿ ಅಡಿಕೆಯ…

4 hours ago

2026 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು

2026 ಜೂನ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರು ತಲುಪಲಿದೆ ಎಂದು ಗೃಹ ಸಚಿವ…

5 hours ago

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…

6 hours ago

ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ

ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…

6 hours ago

ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago