ಬ್ಯಾಂಕ್ ನೌಕರರಿಗೆ ವಾರಾಂತ್ಯ 2 ದಿನ ರಜಾ ಭಾಗ್ಯ | ದಿನಕ್ಕೆ ಹೆಚ್ಚುವರಿ ಗಂಟೆ ಕೆಲಸ ಪಕ್ಕಾ..!

March 2, 2023
4:11 PM

ಬ್ಯಾಂಕ್ ನವರಿಗೇನು..? ಬೇಕಾದಷ್ಟು ರಜೆ. ಕೈ ತುಂಬ ಸಂಬಳ.. ಅನ್ನೋ ಮಾತು ಸರ್ವೆಸಾಮಾನ್ಯ.. ಬೇರೆ ಕಡೆ ಕೆಲಸ ಮಾಡುವವರಿಗೆ ಯಾವಾಗಲೂ ಬ್ಯಾಂಕ್ ನವರ ರಜೆಯ ಮೇಲೆ ಕಣ್ಣು. ಈಗ ಮತ್ತೆ ಬ್ಯಾಂಕ್ ಉದ್ಯೋಗಿಗಳು ಬಂಪರ್ ಲಾಟರಿ ಹೊಡೆದಿದ್ದಾರೆ.

ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ ಭಾನುವಾರದ ರಜೆ ಹಾಗೂ ತಿಂಗಳಲ್ಲಿ ಎರಡು ಶನಿವಾರದ ರಜೆ ಸೌಲಭ್ಯ ಈಗಾಗಲೇ ಇದೆ.  ಈಗ ಹೊಸ ಸೌಲಭ್ಯ ಜಾರಿಯಾದಲ್ಲಿ ಭಾನುವಾರದ ಜೊತೆಗೆ ಶನಿವಾರವೂ ರಜಾ ದಿನವಾಗಿ ಘೋಷಣೆ ಆಗಬಹುದು.

ವಾರದಲ್ಲಿ ಎರಡು ದಿನ ವೀಕಾಫ್ ಸಿಗಬೇಕೆಂಬ ಬ್ಯಾಂಕ್ ಉದ್ಯೋಗಿಗಳ ಬಹುದಿನದ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಬ್ಯಾಂಕ್ ಒಕ್ಕೂಟದ ಒತ್ತಾಯಕ್ಕೆ ಮಣಿದು ಭಾರತೀಯ ಬ್ಯಾಂಕುಗಳ ಸಂಘ ಐದು ದಿನಗಳ ವರ್ಕ್ ವೀಕ್​ಗೆ ಅನುಮೋದನೆ ಕೊಡಬಹುದು ಎಂದು ವರದಿಗಳು ಹೇಳುತ್ತಿವೆ. ಇದು ನಿಜವಾದಲ್ಲಿ ಬ್ಯಾಂಕ್ ನೌಕರರು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಬಹುದು. ವಾರದಲ್ಲಿ ಎರಡು ರಜಾ ದಿನಗಳ ಸೌಲಭ್ಯ ಪ್ರಾಪ್ತವಾಗುತ್ತದೆ.

ಹೆಚ್ಚುವರಿ ಕೆಲಸ ಮಾಡಬೇಕಾಗಬಹುದು

ವಾರದಲ್ಲಿ ಐದು ದಿನ ಕೆಲಸ ಮಾಡುವ ನಿಯಮ ಜಾರಿಗೆ ಬಂದಲ್ಲಿ ಬ್ಯಾಂಕ್ ಉದ್ಯೋಗಿಗಳು ಕೆಲಸದ ದಿನಗಳಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಬೇಕಾಗಬಹುದು. ವರದಿಗಳ ಪ್ರಕಾರ, ಕೆಲಸದ ದಿನದಲ್ಲಿ 40 ಅಥವಾ 50 ನಿಮಿಷಗಳಷ್ಟು ಹೆಚ್ಚಿಗೆ ಕಾಲ ನೌಕರರು ಕೆಲಸ ಮಾಡಬೇಕೆನ್ನುವ ನಿಯಮ ರೂಪಿಸಲಾಗುತ್ತಿದೆ.

ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಈ ಪ್ರಸ್ತಾವ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಮತ್ತು ಆರ್​ಬಿಐನಿಂದ ಈ ಪ್ರಸ್ತಾವಕ್ಕೆ ಅನುಮೋದನೆ ದೊರೆಯಬೇಕು. ಬಳಿಕ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ಬ್ಯಾಂಕ್ ನೌಕರರಿಗೆ ವಾರದಲ್ಲಿ ಭಾನುವಾರ ಮತ್ತು ಶನಿವಾರ ಎರಡು ದಿನಗಳು ರಜಾದಿನವಾಗಿ ಸಿಗುತ್ತವೆ.

ಬ್ಯಾಂಕ್ ಉದ್ಯೋಗಿಗಳಿಗೆ ಸಾಮಾನ್ಯವಾಗಿ ಬಹಳಷ್ಟು ಇತರೆ ರಜೆಗಳೂ ಲಭ್ಯವಾಗುತ್ತವೆ. ಸಾರ್ವತ್ರಿಕ ರಜೆಗಳ ಜೊತೆಗೆ ಪ್ರಾದೇಶಿಕ ರಜೆಗಳೂ ಅವರಿಗೆ ಸಿಗುತ್ತವೆ. ಈ ಮಾರ್ಚ್ ತಿಂಗಳಲ್ಲಿ ವಾರದ ರಜೆಯೂ ಸೇರಿ ಬ್ಯಾಂಕ್ ನೌಕರರಿಗೆ 12 ರಜಾ ದಿನಗಳಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ
October 13, 2026
10:15 AM
by: ಸಾಯಿಶೇಖರ್ ಕರಿಕಳ
ಚಿತ್ರದುರ್ಗದಲ್ಲಿ ಕಣ್ಣೆದುರೇ ಒಣಗಿದ ಬೆಳೆ… ರೈತನಿಗೆ ದಿಕ್ಕೇ ತೋಚದ ಸ್ಥಿತಿ – ವಿಶೇಷ ಪ್ಯಾಕೇಜ್‌ಗೆ ರೈತರ ಒತ್ತಾಯ
October 13, 2026
9:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror