ಬ್ಯಾಂಕ್ ನವರಿಗೇನು..? ಬೇಕಾದಷ್ಟು ರಜೆ. ಕೈ ತುಂಬ ಸಂಬಳ.. ಅನ್ನೋ ಮಾತು ಸರ್ವೆಸಾಮಾನ್ಯ.. ಬೇರೆ ಕಡೆ ಕೆಲಸ ಮಾಡುವವರಿಗೆ ಯಾವಾಗಲೂ ಬ್ಯಾಂಕ್ ನವರ ರಜೆಯ ಮೇಲೆ ಕಣ್ಣು. ಈಗ ಮತ್ತೆ ಬ್ಯಾಂಕ್ ಉದ್ಯೋಗಿಗಳು ಬಂಪರ್ ಲಾಟರಿ ಹೊಡೆದಿದ್ದಾರೆ.
ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ ಭಾನುವಾರದ ರಜೆ ಹಾಗೂ ತಿಂಗಳಲ್ಲಿ ಎರಡು ಶನಿವಾರದ ರಜೆ ಸೌಲಭ್ಯ ಈಗಾಗಲೇ ಇದೆ. ಈಗ ಹೊಸ ಸೌಲಭ್ಯ ಜಾರಿಯಾದಲ್ಲಿ ಭಾನುವಾರದ ಜೊತೆಗೆ ಶನಿವಾರವೂ ರಜಾ ದಿನವಾಗಿ ಘೋಷಣೆ ಆಗಬಹುದು.
ವಾರದಲ್ಲಿ ಎರಡು ದಿನ ವೀಕಾಫ್ ಸಿಗಬೇಕೆಂಬ ಬ್ಯಾಂಕ್ ಉದ್ಯೋಗಿಗಳ ಬಹುದಿನದ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಬ್ಯಾಂಕ್ ಒಕ್ಕೂಟದ ಒತ್ತಾಯಕ್ಕೆ ಮಣಿದು ಭಾರತೀಯ ಬ್ಯಾಂಕುಗಳ ಸಂಘ ಐದು ದಿನಗಳ ವರ್ಕ್ ವೀಕ್ಗೆ ಅನುಮೋದನೆ ಕೊಡಬಹುದು ಎಂದು ವರದಿಗಳು ಹೇಳುತ್ತಿವೆ. ಇದು ನಿಜವಾದಲ್ಲಿ ಬ್ಯಾಂಕ್ ನೌಕರರು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಬಹುದು. ವಾರದಲ್ಲಿ ಎರಡು ರಜಾ ದಿನಗಳ ಸೌಲಭ್ಯ ಪ್ರಾಪ್ತವಾಗುತ್ತದೆ.
ಹೆಚ್ಚುವರಿ ಕೆಲಸ ಮಾಡಬೇಕಾಗಬಹುದು
ವಾರದಲ್ಲಿ ಐದು ದಿನ ಕೆಲಸ ಮಾಡುವ ನಿಯಮ ಜಾರಿಗೆ ಬಂದಲ್ಲಿ ಬ್ಯಾಂಕ್ ಉದ್ಯೋಗಿಗಳು ಕೆಲಸದ ದಿನಗಳಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಬೇಕಾಗಬಹುದು. ವರದಿಗಳ ಪ್ರಕಾರ, ಕೆಲಸದ ದಿನದಲ್ಲಿ 40 ಅಥವಾ 50 ನಿಮಿಷಗಳಷ್ಟು ಹೆಚ್ಚಿಗೆ ಕಾಲ ನೌಕರರು ಕೆಲಸ ಮಾಡಬೇಕೆನ್ನುವ ನಿಯಮ ರೂಪಿಸಲಾಗುತ್ತಿದೆ.
ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಈ ಪ್ರಸ್ತಾವ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಮತ್ತು ಆರ್ಬಿಐನಿಂದ ಈ ಪ್ರಸ್ತಾವಕ್ಕೆ ಅನುಮೋದನೆ ದೊರೆಯಬೇಕು. ಬಳಿಕ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ಬ್ಯಾಂಕ್ ನೌಕರರಿಗೆ ವಾರದಲ್ಲಿ ಭಾನುವಾರ ಮತ್ತು ಶನಿವಾರ ಎರಡು ದಿನಗಳು ರಜಾದಿನವಾಗಿ ಸಿಗುತ್ತವೆ.
ಬ್ಯಾಂಕ್ ಉದ್ಯೋಗಿಗಳಿಗೆ ಸಾಮಾನ್ಯವಾಗಿ ಬಹಳಷ್ಟು ಇತರೆ ರಜೆಗಳೂ ಲಭ್ಯವಾಗುತ್ತವೆ. ಸಾರ್ವತ್ರಿಕ ರಜೆಗಳ ಜೊತೆಗೆ ಪ್ರಾದೇಶಿಕ ರಜೆಗಳೂ ಅವರಿಗೆ ಸಿಗುತ್ತವೆ. ಈ ಮಾರ್ಚ್ ತಿಂಗಳಲ್ಲಿ ವಾರದ ರಜೆಯೂ ಸೇರಿ ಬ್ಯಾಂಕ್ ನೌಕರರಿಗೆ 12 ರಜಾ ದಿನಗಳಿವೆ.
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…